twitter
    For Quick Alerts
    ALLOW NOTIFICATIONS  
    For Daily Alerts

    47 ಗುಂಡು ಹೊಕ್ಕರು ಬದುಕಿ ಬಂದ ಕೊಂಡ ಮುರಳಿ ಬಗ್ಗೆ ಸಿನಿಮಾ: ಅಸಲಿಗೆ ಯಾರೀತ?

    |

    ತೆಲುಗು ಮಾಧ್ಯಮಗಳಿಂದ ವಿಲಕ್ಷಣ ನಿರ್ದೇಶಕ ಎಂದೇ ಕರೆಸಿಕೊಳ್ಳುತ್ತಿರುವ ರಾಮ್ ಗೋಪಾಲ್ ವರ್ಮಾ ಮತ್ತೆ ತಮ್ಮ ಹಳೆ ಟ್ರ್ಯಾಕ್‌ಗೆ ಮರಳುವ ಸಣ್ಣ ಸೂಚನೆ ನೀಡಿದ್ದಾರೆ.

    ಭಾರತ ಸಿನಿಮಾದ ದಿಕ್ಕು ಬದಲಿಸಿದ ನಿರ್ದೇಶಕರಲ್ಲಿ ಒಬ್ಬರೆನೆಸಿಕೊಂಡಿದ್ದ ರಾಮ್ ಗೋಪಾಲ್ ವರ್ಮಾ ಇತ್ತೀಚಿನ ವರ್ಷಗಳಲ್ಲಿ ಬಹಳ ಬದಲಾಗಿಬಿಟ್ಟಿದ್ದಾರೆ. ನಗ್ನ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಾ, ತಮ್ಮದೇ ಖಾಸಗಿ ವೆಬ್‌ ಸೈಟ್‌ಗಳಲ್ಲಿ ಬಿಡುಗಡೆ ಮಾಡುತ್ತಾ, ಚೀಪ್ ಡಿ ಗ್ರೇಡ್ ಸಿನಿಮಾಗಳನ್ನು ಮಾತ್ರವೇ ನಿರ್ದೇಶನ ಮಾಡುತ್ತಿದ್ದಾರೆ.

    2017-18 ರ ಬಳಿಕ ರಾಮ್ ಗೋಪಾಲ್ ವರ್ಮಾ ಗಂಭೀರವಾಗಿ ಸಿನಿಮಾ ನಿರ್ದೇಶಿಸಿದ್ದೇ ಇಲ್ಲ. ಆ ಬಳಿಕ ಕೇವಲ ಅರೆ ಸೆಕ್ಸ್ ಸಿನಿಮಾಗಳು. ಇಲ್ಲವೇ ಪವನ್ ಕಲ್ಯಾಣ್, ಚಂದ್ರ ಬಾಬು ನಾಯ್ಡು ಇತರೆ ವ್ಯಕ್ತಿಗಳ ಬಗ್ಗೆ ಕಳಪೆ ಸ್ಪೂಫ್ ಸಿನಿಮಾಗಳು ಇವನ್ನೇ ಮಾಡಿದ್ದಾರೆ. ಆದರೆ ಇದೀಗ ಮತ್ತೆ ತಮ್ಮ ಹಳೆಯ ಟ್ರ್ಯಾಕ್‌ಗೆ ಮರಳುವ ಸೂಚನೆ ನೀಡಿದ್ದಾರೆ ರಾಮ್ ಗೋಪಾಲ್ ವರ್ಮಾ. ಅದೂ 'ಕೊಂಡ' ಸಿನಿಮಾದ ಮೂಲಕ.

    'ಕೊಂಡ' ಸಿನಿಮಾ, ಆಂಧ್ರ ರಾಜಕೀಯದಲ್ಲಿ ಪ್ರಮುಖರಾದ ಕೊಂಡ ಮುರಳಿ ಹಾಗೂ ಕೊಂಡ ಸುರೇಖ ಜೀವನ ಆಧರಿಸಿದೆ. ಧಣಿಗಳ ದಬ್ಬಾಳಿಕೆ ವಿರುದ್ಧ ಹೋರಾಡಿದ ವ್ಯಕ್ತಿಯಾಗಿ, ನಕ್ಸಲೈಟ್‌ ನಂಟು ಹೊಂದಿ ಸರ್ಕಾರವನ್ನೇ ಎದುರು ಹಾಕಿಕೊಂಡು ಹೋರಾಡಿದ ವ್ಯಕ್ತಿ ಕೊಂಡ ಮುರಳಿ. ಆತನಿಗೆ ಅಡಿಗಡಿಗೆ ಬೆಂಬಲ ಕೊಟ್ಟಾಕೆ ಪತ್ನಿ ಕೊಂಡ ಸುರೇಖ. ಇವರಿಬ್ಬರಿಗೂ ಆಂಧ್ರ ರಾಜಕೀಯದಲ್ಲಿ ವಿಶೇಷ ಸ್ಥಾನವಿದೆ.

    ಹಲವು ಬಾರಿ ಅಟ್ಯಾಕ್‌ ಮಾಡಲಾಗಿದೆ

    ಹಲವು ಬಾರಿ ಅಟ್ಯಾಕ್‌ ಮಾಡಲಾಗಿದೆ

    ಕೊಂಡ ಮುರಳಿ ಹಾಗೂ ಸುರೇಖ ಮೇಲೆ ಹಲವು ಬಾರಿ ವಿರೋಧಿ ಗ್ಯಾಂಗ್‌ಗಳು, ಪೊಲೀಸರು ದಾಳಿ ನಡೆಸಿದರು ಆದರೆ ಪ್ರತಿಬಾರಿಯೂ ಕೊಂಡ ಮುರಳಿ ಹಾಗೂ ಸುರೇಖ ಬದುಕಿ ಹೊರಬಿದ್ದರು. ಅವರಿಬ್ಬರ ಹೋರಾಟದ ಕತೆಯೇ ರೋಮಾಂಚನಕಾರಿ. ಹಾಗಾಗಿ ಅವರ ಕತೆಯನ್ನು ಸಿನಿಮಾ ಮಾಡಲು ರಾಮ್ ಗೋಪಾಲ್ ವರ್ಮಾ ಆರಿಸಿಕೊಂಡಿದ್ದಾರೆ.

    ದೇಹದೊಳಕ್ಕೆ 47 ಗುಂಡುಗಳು ಹೊಕ್ಕಿದ್ದವು: ಕೊಂಡ ಮುರಳಿ

    ದೇಹದೊಳಕ್ಕೆ 47 ಗುಂಡುಗಳು ಹೊಕ್ಕಿದ್ದವು: ಕೊಂಡ ಮುರಳಿ

    ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕೊಂಡ ಮುರಳಿ, ''ನನ್ನ ಮೇಲೆ ದಾಳಿ ನಡೆದಾಗ ನನ್ನ ಮೈಗೆ 47 ಗುಂಡುಗಳು ಹೊಕ್ಕಿದ್ದವು. ಆದರೂ ನಾನು ಬದುಕಿ ಬಂದೆ. ಅಂದು ನಾನು ನದುಕಿ ಬಂದಿದ್ದು ನನಗಾಗಿ ಅಲ್ಲ ಬದಲಿಗೆ ಜನರಿಗಾಗಿ'' ಎಂದು ಭಾವುಕರಾಗಿದ್ದಾರೆ. ಅಂದಿನ ದಿನವನ್ನು ನೆನಪು ಮಾಡಿಕೊಂಡಿರುವ ಕೊಂಡ ಸುರೇಖ, ''ಅಂದಿನ ದಿನ ನೆನಪಿಸಿಕೊಂಡರೆ ಕಣ್ಣ ಮುಂದೆ ಈಗಲೂ ಕತ್ತಲು ಆವರಿಸುತ್ತದೆ. ಅಂದು ಎಲ್ಲೆಡೆ ರಕ್ತವೇ ತುಂಬಿತ್ತು. ಅಂದಿನ ದಿನವನ್ನು ಜೀವನ ಪರ್ಯಂತ ಮರೆಯಲು ಆಗುವುದಿಲ್ಲ. ಈಗಲೂ ಆ ದಿನವನ್ನು ನೆನಪಿಸಿಕೊಂಡರೆ ಕಣ್ಣಿಗೆ ಕತ್ತಲೆ ಆವರಿಸುತ್ತದೆ. ರಕ್ತದ ಮಡುವಿನಲ್ಲಿ ನನ್ನ ಪತಿ ಅಂದು ಇದ್ದರು'' ಎಂದಿದ್ದಾರೆ ಸುರೇಖ.

    ಕೊಂಡ ದಂಪತಿಯ ರಾಜಕೀಯ ಪಯಣ

    ಕೊಂಡ ದಂಪತಿಯ ರಾಜಕೀಯ ಪಯಣ

    ಕೊಂಡ ಮುರಳಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಪ್ರಾರಂಭ ಮಾಡಿದ್ದರು. ನಂತರ ಕೊಂಡ ಸುರೇಖ ಸಹ ಮಂಡಲ್ ಪಂಚಾಯಿತಿ ಸದಸ್ಯೆಯಾಗಿ ರಾಜಕೀಯ ಆರಂಭಿಸಿದರು. ಬಳಿಕ ವೈ.ಎಸ್.ರಾಜಶೇಖರ ರೆಡ್ಡಿ ಆಹ್ವಾನದ ಮೇರೆಗೆ ಕಾಂಗ್ರೆಸ್ ಪಕ್ಷ ಸೇರಿ ಮೂರು ಬಾರಿ ಶಾಸಕಿಯಾಗಿ ಆಯ್ಕೆ ಆದರು. ವೈ.ಎಸ್.ರಾಜಶೇಖರ ರೆಡ್ಡಿ ಸಂಪುಟದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. ನಂತರ ರಾಜಶೇಖರ ರೆಡ್ಡಿ ನಿಧನದ ಬಳಿಕ ವೈಯೆಸ್‌ಆರ್‌ಸಿಪಿ ಪಕ್ಷ ಸೇರಿ ಚುನಾವಣೆಯಲ್ಲಿ ಸೋತರು. ಬಳಿಕ ಟಿಆರ್‌ಎಸ್ ಪಕ್ಷ ಸೇರಿ ಮತ್ತೆ ಶಾಸಕಿಯಾದರು. ಕೊಂಡ ಸುರೇಖ ಅವರ ರಾಜಕೀಯ ಯಶಸ್ಸಿನ ಹಿಂದೆ ಇರುವುದು ಕೊಂಡ ಮುರಳಿ ಶ್ರಮವೇ. ತೋಳ್ಬಲದ ರಾಜಕೀಯಕ್ಕೆ ಕೊಂಡ ಮುರಳಿ ಹಾಗೂ ಸುರೇಖ ಪ್ರಸಿದ್ಧರು. ಅವರ ಕ್ಷೇತ್ರದಲ್ಲಿ ಹಲವು ರಾಜಕೀಯ ಕೊಲೆಗಳು ಸಹ ನಡೆದಿವೆ.

    ವರಾಂಗಲ್‌ನಲ್ಲಿ ಬೀಡು ಬಿಟ್ಟಿದ್ದ ವರ್ಮಾ

    ವರಾಂಗಲ್‌ನಲ್ಲಿ ಬೀಡು ಬಿಟ್ಟಿದ್ದ ವರ್ಮಾ

    'ಕೊಂಡ' ಸಿನಿಮಾಕ್ಕಾಗಿ ಖುದ್ದು ರಾಮ್ ಗೋಪಾಲ್ ವರ್ಮಾ ಮೂರು ತಿಂಗಳ ಕಾಲ ವರಾಂಗಲ್‌ನಲ್ಲಿದ್ದು ಇಬ್ಬರು ದಂಪತಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೆ ಸಿನಿಮಾದ ಚಿತ್ರೀಕರಣವನ್ನು ಸಹ ವರಾಂಗಲ್‌ನ ನಿಜವಾದ ಸ್ಥಳಗಳಲ್ಲಿಯೇ ವರ್ಮಾ ನಡೆಸಿದ್ದಾರೆ. ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು, ವೈರಲ್ ಆಗಿದೆ. 'ಕೊಂಡ' ಸಿನಿಮಾದಲ್ಲಿ ಮುರಳಿ ಪಾತ್ರದಲ್ಲಿ ಪ್ರಧ್ವಿರಾಜ್, ಸುರೇಖ

    English summary
    Director Ram Gopal Varma making movie about politician Konda Murali and Konda Surekha. Who is Konda Murali?
    Saturday, January 29, 2022, 19:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X