Don't Miss!
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಹೇಶ್ ಬಾಬು ಬಾಲಿವುಡ್ ಕಮೆಂಟ್: ಕ್ಲಾಸ್ ತೆಗೆದುಕೊಂಡ ರಾಮ್ ಗೋಪಾಲ್ ವರ್ಮಾ!
ತೆಲುಗು ನಟ ಮಹೇಶ್ ಬಾಬು ಬಾಲಿವುಡ್‌ನಲ್ಲಿ ಸಿನಿಮಾ ಮಾಡುವ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಕಾರಣ ಆಗಿದ್ದರು. ಮಹೇಶ್ ಬಾಬು ಬಾಲಿವುಡ್ ಹೇಳಿಕೆಯ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ಈಗ ವ್ಯಕ್ತವಾಗುತ್ತಿವೆ. ಬಾಲಿವುಡ್‌ನಲ್ಲೂ ಈ ಬಗ್ಗೆ ಚರ್ಚೆ ಹುಟ್ಟಿ ಕೊಂಡಿದೆ.
ಮಹೇಶ್ ಬಾಬು ಈ ಹೆಳಿಕೆಯ ಬಗ್ಗೆ ಈಗ ನಿರ್ದೇಶಕ ರಾಮ್ ಗೊಪಾಲ್ ವರ್ಮಾ ಮಾತನಾಡಿದ್ದಾರೆ. ಮಹೇಶ್ ಬಾಬು ಯಾವ ಅರ್ಥದಲ್ಲಿ ಆ ಹೇಳಿಕೆ ನೀಡಿದ್ದಾರೆ ಎಂದು ಅರ್ಥವೇ ಆಗುತ್ತಿಲ್ಲ ಎಂದು ಹೇಳುವುದರ ಜೊತೆಗೆ ರಾಮ್ ಗೋಪಾಲ್ ವರ್ಮಾ ಬಾಲಿವುಡ್ ಎಂದರೆ ಏನು ಎನ್ನುವುದನ್ನು, ತಮ್ಮ ಅರ್ಥದಲ್ಲಿ ಹೇಳಿದ್ದಾರೆ.
ನಾನು
ಎಲ್ಲಾ
ಭಾಷೆಯನ್ನು
ಪ್ರೀತಿಸುತ್ತೇನೆ:
ಯೂಟರ್ನ್
ಹೊಡೆದ
ಮಹೇಶ್
ಬಾಬು
ಮಾಧ್ಯಮ ಒಂದಕ್ಕೆ ನೀಡಿರುವ ಪ್ರತಿಕ್ರಿಯೆಯಲ್ಲಿ ರಾಮ್ ಗೋಪಾಲ್ ವರ್ಮಾ "ಒಬ್ಬ ನಟನಾಗಿ ಇದು ಅವರ ಆಯ್ಕೆಯಾಗಿದೆ. ಆದರೆ ಬಾಲಿವುಡ್ ಅವರನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳಿರುವುದು, ನನಗೆ ಅರ್ಥವಾಗಲಿಲ್ಲ. ಅವರ ಮಾತಿನ ಅರ್ಥವನ್ನು ಅರ್ಥಮಾಡಿಕೊಳ್ಳಲು ನನಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಇತ್ತೀಚಿನ ದಕ್ಷಿಣ ಭಾರತದ ಚಲನಚಿತ್ರಗಳನ್ನು ನೋಡಿದರೆ, ಡಬ್ ಮಾಡಿ ಸಿನಿಮಾಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಆ ಚಿತ್ರಗಳೂ ಹೆಚ್ಚಿನ ಹಣವನ್ನು ಗಳಿಸಿವೆ.
ಬಾಲಿವುಡ್
ಯಾವತ್ತಿದ್ದರೂ
ಬಾಲಿವುಡ್,
ಮಹೇಶ್
ಬಾಬು
ಹೇಳಿಕೆಗೆ
ಸುನೀಲ್
ಶೆಟ್ಟಿ
ಟಾಂಗ್
"ಹಾಗೆಯೇ, ಬಾಲಿವುಡ್ ಎನ್ನುವುದು ಒಂದು ಕಂಪನಿಯಲ್ಲ. ಇದು ಮಾಧ್ಯಮಗಳು ನೀಡುವ ಲೇಬಲ್. ವೈಯಕ್ತಿಕವಾಗಿ ಸಿನಿಮಾ ಕಂಪನಿ ಅಥವಾ ನಿರ್ಮಾಣ ಸಂಸ್ಥೆಯು ನಿರ್ದಿಷ್ಟ ವೆಚ್ಚದಲ್ಲಿ ಚಿತ್ರ ಮಾಡಲು ನಿಮ್ಮನ್ನು ಕೇಳುತ್ತದೆ, ಹಾಗಾಗಿ ಅವರು ಬಾಲಿವುಡ್ ಅನ್ನು ಹೇಗೆ ಸಾಮಾನ್ಯೀಕರಿಸುತ್ತಾರೆ? ನನಗೆ ಅದು ಅರ್ಥವಾಗುತ್ತಿಲ್ಲ. ಬಾಲಿವುಡ್ ಒಂದು ಕಂಪನಿಯಲ್ಲ, ಆದ್ದರಿಂದ ಅವರ ಮಾತುಗಳು ಅರ್ಥವಾಗುತ್ತಿಲ್ಲ" ಎಂದಿದ್ದಾರೆ.
Sarkaru
Vaari
Paata
Movie
Review:
ಹಣದ
ಹಿಂದೆ
ಬಿದ್ದ
ಮಹೇಶ್
ಬಾಬು,
ಗೆಲ್ಲೋದು
ಯಾರು?

ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸುವ ಬಗ್ಗೆ ಕೇಳಿದಾಗ ಮಹೇಶ್ ಬಾಬು "ಬಾಲಿವುಡ್ ನನ್ನನ್ನು ನಿಭಾಯಿಸಲು ಸಾಧ್ಯವಿಲ್ಲ. ನನಗೆ ಹಿಂದಿಯಲ್ಲಿ ಸಾಕಷ್ಟು ಆಫರ್‌ಗಳು ಬಂದಿವೆ. ಆದರೆ ಅವರು ನನ್ನನ್ನು ಭರಿಸಲು ಸಾಧ್ಯವಿಲ್ಲ. ಹೀಗಾಗಿ ಅಲ್ಲಿ ಕೆಲಸ ಮಾಡುತ್ತಾ ನನ್ನ ಸಮಯವನ್ನು ವ್ಯರ್ಥ ಮಾಡಲು ನಾನು ಬಯಸುವುದಿಲ್ಲ. ನನಗೆ ಇಲ್ಲಿ ಸಿಗುವ ಸ್ಟಾರ್ ಡಮ್ ಮತ್ತು ಗೌರವ ದೊಡ್ಡದಾಗಿದೆ. ಹಾಗಾಗಿ ನನ್ನ ಇಂಡಸ್ಟ್ರಿ ಬಿಟ್ಟು ಬೇರೆ ಇಂಡಸ್ಟ್ರಿಗೆ ಹೋಗುವ ಬಗ್ಗೆ ನಾನು ಯೋಚಿಸಿಲ್ಲ" ಎಂದು ಹೇಳಿದ್ದರು.