For Quick Alerts
  ALLOW NOTIFICATIONS  
  For Daily Alerts

  ಡಿಸೆಂಬರ್ 24 ಕ್ಕೆ ಚಿತ್ರಮಂದಿರಗಳಲ್ಲಿ 'ಮರ್ಡರ್'

  |

  'ಮರ್ಡರ್' ಸಿನಿಮಾ ಎಂದರೆ ಮೊದಲು ನೆನಪಿಗೆ ಬರುವುದು ಮಲ್ಲಿಕಾ ಶೆರಾವತ್, ಇಮ್ರಾನ್ ಅಶ್ಮಿ ನಟಿಸಿದ್ದ ಹಿಂದಿ ಸಿನಿಮಾ 'ಮರ್ಡರ್' ಆ ಸಿನಿಮಾ ಭಾರಿ ಮೋಡಿಯನ್ನು ಮಾಡಿತ್ತು.

  ಆದರೆ ಇದೀಗ ತೆಲುಗಿನಲ್ಲಿ ಹೊಸ 'ಮರ್ಡರ್' ಸಿನಿಮಾ ರೆಡಿಯಾಗಿದೆ. ಆದರೆ ಈ ಸಿನಿಮಾಕ್ಕೂ ಹಿಂದಿಯ 'ಮರ್ಡರ್' ಸಿನಿಮಾಕ್ಕೆ ಹೆಸರೊಂದು ಬಿಟ್ಟರೆ ಬೇರಾವುದೇ ಹೋಲಿಕೆ ಇಲ್ಲ.

  ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿರುವ 'ಮರ್ಡರ್' ಸಿನಿಮಾ ನಿಜ ಘಟನೆಯನ್ನು ಆಧರಿಸಿ ತಯಾರಾಗಿರುವ ಸಿನಿಮಾ. ಪ್ರಣಯ್-ಅಮೃತಾ ರ ಪ್ರೇಮ ಕತೆ ಹಾಗೂ ಮರ್ಯಾದಾ ಹತ್ಯೆಯನ್ನು ಆಧರಿಸಿ ಈ ಸಿನಿಮಾವನ್ನು ರಾಮ್‌ ಗೋಪಾಲ್ ವರ್ಮಾ ತೆರೆಗೆ ತರುತ್ತಿದ್ದಾರೆ.

  ಅಮೃತಾ ಹಾಗೂ ಪ್ರಣಯ್ ಪ್ರೀತಿಸಿ ಮದುವೆಯಾಗಿದ್ದರು. ಇದು ಅಮೃತಾ ತಂದೆಗೆ ಇಷ್ಟವಿರಲಿಲ್ಲ. 2019 ರ ಸೆಪ್ಟೆಂಬರ್ 14 ರಂದು ಅಮೃತಾ ಎದುರಿಗೇ ಪತಿ ಪ್ರಣಯ್ ನನ್ನು ಹಾಡಹಗಲೇ ವ್ಯಕ್ತಿಯೊಬ್ಬ ಕೊಚ್ಚಿ ಕೊಲೆ ಮಾಡುತ್ತಾನೆ. ಕೊಲೆಗೆ ಸುಫಾರಿ ಕೊಟ್ಟಿದ್ದಿದ್ದು ಅಮೃತಾಳ ತಂದೆ. ಪ್ರಕರಣದಲ್ಲಿ ಅಮೃತಾಳ ತಂದೆ ಜೈಲು ಪಾಲಾಗುತ್ತಾರೆ. ನಂತರ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪುತ್ತಾರೆ.

  ಇದೇ ನಿಜಘಟನೆಯನ್ನು ಆಧಾರವಾಗಿಟ್ಟುಕೊಂಡು ರಾಮ್ ಗೋಪಾಲ್ ವರ್ಮಾ 'ಮರ್ಡರ್' ಸಿನಿಮಾ ತೆಗೆದಿದ್ದು, ಸಿನಿಮಾವು ಡಿಸೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾವು ನಾಲ್ಕು ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಆಗಲಿದೆ. ಕನ್ನಡದಲ್ಲಿ 'ಮರ್ಡರ್' ಸಿನಿಮಾವನ್ನು 'ಲಕ್ಷ್ಮಿವೃಷಭಾಧ್ರಿ ಸಿನಿಮಾಸ್' ಮೂಲಕ ಬಿಡುಗಡೆ ಮಾಡುತ್ತಿದ್ದಾರೆ.

  English summary
  Ram Gopal Varma's murder movie will release on December 24 in four languages. Movie is based on real life story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X