For Quick Alerts
  ALLOW NOTIFICATIONS  
  For Daily Alerts

  'ಅವತಾರ್ 2' ಅನ್ನು ಸಿನಿಮಾ ಎಂದು ಕರೆಯುವುದೇ ಅಪರಾಧ: ಹೀಗಂದಿದ್ಯಾಕೆ ರಾಮ್ ಗೋಪಾಲ್ ವರ್ಮಾ

  By ಫಿಲ್ಮಿಬೀಟ್ ಡೆಸ್ಕ್
  |

  ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಚಿತ್ರ ವಿಚಿತ್ರ ಟ್ವೀಟ್‌ಗಳಿಂದ ಆಗಾಗ್ಗೆ ಸುದ್ದಿಗೆ ಬರುತ್ತಿರುತ್ತಾರೆ. ಸದಾ ಒಬ್ಬರಲ್ಲ ಒಬ್ಬರ ಮೇಲೆ ಋಣಾತ್ಮಕ ಟ್ವೀಟ್ ಮಾಡುವುದು, ಟೀಕೆ ಮಾಡುವುದು ಮಾಡುತ್ತಲೇ ಇರುತ್ತಾರೆ.

  'RRR' ಸಿನಿಮಾವನ್ನು ಸಹ ಅದು ಸಿನಿಮಾ ಅಲ್ಲ ಅದೊಂದು 'ದುಡ್ಡಿರುವವರ ಇವೆಂಟ್' ಎಂದಿದ್ದರು ರಾಮ್ ಗೋಪಾಲ್ ವರ್ಮಾ, ನಿರ್ದೇಶಕ ರಾಜಮೌಳಿಯನ್ನು ಸಹ ಟೀಕಿಸಿದ್ದರು. ಈಗ ಅದೇ ರಾಮ್ ಗೋಪಾಲ್ ವರ್ಮಾ, 'ಅವತಾರ್: ದಿ ವೇ ಆಫ್ ವಾಟರ್' ಸಿನಿಮಾವನ್ನು ನೋಡಿದ್ದು, ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  'ಅವತಾರ್: ದಿ ವೇ ಆಫ್ ವಾಟರ್' ಸಿನಿಮಾದ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ''ಅವತಾರ್ 2 ' ಸಿನಿಮಾದಲ್ಲಿ ಮಿಂದೆಂದ್ದೆ. 'ಅವತಾರ್: ದಿ ವೇ ಆಫ್ ವಾಟರ್' ಅನ್ನು ಸಿನಿಮಾ ಎಂದು ಕರೆಯುವುದು ಅಪರಾಧ. ಏಕೆಂದರೆ ಇದೊಂದು ಜೀವನದಲ್ಲಿ ಒಮ್ಮೆ ಮಾತ್ರ ದೊರಕಬಹುದಾದ ಅನುಭವ. ಅತ್ಯದ್ಭತವಾದ ವಿಎಫ್‌ಎಕ್ಸ್, ಮೈನವಿರೇಳಿಸುವ ಆಕ್ಷನ್. ಸಿನಿಮಾ ನೋಡುವಾಗ ಯಾವುದೋ ಬೇರೆ ಲೋಕವನ್ನೋ, ಥೀಮ್ ಪಾರ್ಕ್ ಅನ್ನೋ ಪ್ರವೇಶಿಸಿದ ಅನುಭವ ಆಗುತ್ತದೆ. ಈ ಮಾತನ್ನು ನಾನು ದ್ವಂದ್ವಾರ್ಥದಲ್ಲಿ ಹೇಳಿಲ್ಲ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.

  ಸಿನಿಮಾ ಒಂದನ್ನು ರಾಮ್ ಗೋಪಾಲ್ ವರ್ಮಾ ಹೊಗಳುವುದು ಬಹಳ ಅಪರೂಪ. 'RRR' ಸಿನಿಮಾವನ್ನೇ ಅವರು ಟೀಕಿಸಿದ್ದರು. ಟೀಕೆ ಮಾಡುತ್ತಲೇ ಪ್ರಚಾರ ಗಳಿಸಿಕೊಂಡವರು ವರ್ಮಾ, ನಟ ಚಿರಂಜೀವಿ, ಪವನ್ ಕಲ್ಯಾಣ್, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಇನ್ನೂ ಹಲವರ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಸುದ್ದಿಯಲ್ಲಿರುತ್ತಿದ್ದರು ವರ್ಮಾ. ಈಗ ಅಂಥಹವರೇ 'ಅವತಾರ್ 2' ಸಿನಿಮಾವನ್ನು ಹೊಗಳಿರುವುದು ಆಶ್ಚರ್ಯ ತಂದಿದೆ.

  'ಅವತಾರ್ 2' ಸಿನಿಮಾ ನಿನ್ನೆ (ಡಿಸೆಂಬರ್ 16) ರಂದು ವಿಶ್ವದಾದ್ಯಂತ ಬಿಡುಗಡೆ ಆಗಿದ್ದು ಸಿನಿಮಾದ ಬಗ್ಗೆ ಭಾರಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೇಮ್ಸ್ ಕ್ಯಾಮರನ್ ನಿರ್ದೇಶನದ ಈ ಸಿನಿಮಾದಲ್ಲಿ ಅದ್ಭುತವಾದ ಲೋಕವನ್ನು ತೋರಿಸಲಾಗಿದೆ. ಹದಿಮೂರು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ 'ಅವತಾರ್' ಸಿನಿಮಾದ ಮೊದಲ ಭಾಗದಲ್ಲಿ ಪ್ಯಾಂಡೋರಾದ ಅದ್ಭುತ ಲೋಕವನ್ನು ಜೇಮ್ಸ್ ಕ್ಯಾಮರುನ್ ಕಟ್ಟಿಕೊಟ್ಟಿದ್ದರು. ಈಗ 'ಅವತಾರ್: ದಿ ವೇ ಆಫ್ ವಾಟರ್' ಮೂಲಕ ಸಾಗರದಾಳದ ಲೋಕವನ್ನು ತೆರೆದಿಟ್ಟಿದ್ದಾರೆ.

  English summary
  Director Ram Gopal Varma said it is crime to call Avatar 2 as movie. Avatar 2 is not just a movie it is a life time experience.
  Sunday, December 18, 2022, 7:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X