For Quick Alerts
  ALLOW NOTIFICATIONS  
  For Daily Alerts

  ರಾಮ್ ಗೋಪಾಲ್ ವರ್ಮಾ ಭವಿಷ್ಯ ನಿಜವಾಗುವುದೇ?

  |

  ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಭವಿಷ್ಯವೊಂದನ್ನು ನುಡಿದಿದ್ದರು. ಅದೀಗ ಬಹುತೇಕ ನಿಜವಾಗುತ್ತಿದೆ. ಪಕ್ಕಾ ನಿಜವಾಗುವ ದಿನ ದೂರವಿಲ್ಲ. ಇದೀಗ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಎಸ್ ಎಸ್ ರಾಜಮೌಳಿ ನಿರ್ದೇಶನ ಹಾಗೂ ಕನ್ನಡದ ಕಿಚ್ಚ ಸುದೀಪ್ ನಟನೆಯ ತೆಲುಗು ಚಿತ್ರ 'ಈಗ' ಬಗ್ಗೆ ವರ್ಮಾ ಈ ಕೆಳಗಿನಂತೆ ಭವಿಷ್ಯ ನುಡಿದಿದ್ದರು...

  "ತೆಲುಗಿನ 100 ಕೋಟಿ ಕ್ಲಬ್ ಸ್ಥಾಪಿಸಲಿರುವ ಚಿತ್ರ ಈಗ" ಎಂಬುದೇ ರಾಮ್ ಗೋಪಾಲ್ ವರ್ಮಾ ನುಡಿದಿದ್ದ ಭವಿಷ್ಯ. ಅದು ಬಹುತೇಕ ನಿಜವಾಗಿದೆ ಎನ್ನಲಿಕ್ಕೆ ಕಾರಣ, ಬಿಡುಗಡೆಯಾದ ಒಂದೇ ವಾರದಲ್ಲಿ ಈ ಚಿತ್ರದ ಒಟ್ಟೂ ಗಳಿಕೆ ರು. 56 ಕೋಟಿ ಮೀರಿತ್ತು. ಎರಡನೇ ವಾರಾಂತ್ಯದ ಈ ಹೊತ್ತಿನಲ್ಲಿ ಇದರ ಕಲೆಕ್ಷನ್ ನೂರರ ಸಮೀಪ ಹೋಗಿರುವ ಸಂಭವವಿದೆ.

  ಇಷ್ಟರಲ್ಲೇ ವರ್ಮಾರ ಭವಿಷ್ಯ ನಿಜವಾಗುವ ಸೂಚನೆ ಈ ಮೂಲಕ ದಟ್ಟವಾಗಿದೆ. ಎರಡನೇ ವಾರಾಂತ್ಯದ ಬಾಕ್ಸ್ ಆಫೀಸ್ ವರದಿ ತಲುಪಿದ ತಕ್ಷಣವೇ ರಾಮ್ ಗೋಪಾಲ್ ವರ್ಮಾರ ಭವಿಷ್ಯ ನಿಜವಾಗಿದೆ ಎಂಬ ಘೋಷಣೆ ಮೊಳಗಿದರೂ ಅಚ್ಚರಿಯಿಲ್ಲ. ಯಾವುದೇ ಕಾರಣಕ್ಕೂ ಈ ಚಿತ್ರ ನೂರು ಕೋಟಿ ಗಳಿಸದೇ ತೆರೆಯಿಂದ ಮರೆಯಾಗಲಾರದು ಎಂಬುದು ಚಿತ್ರಜಗತ್ತಿನ ಎಲ್ಲಾ ಪಂಡಿತರ ಅಭಿಪ್ರಾಯ.

  ಬಾಲಿವುಡ್ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತಿಗೆ ಬಾಲಿವುಡ್ಡಿನಲ್ಲಿ ಮಾತ್ರವಲ್ಲದೇ ಆಲ್ ಇಂಡಿಯಾ ಲೆವೆಲ್ ನಲ್ಲಿ ಭಾರೀ ಬೆಲೆಯಿದೆ. ವರ್ಮಾ ಹಿಂದೆಮುಂದೆ ಯೋಚಿಸದೇ ಮಾತನಾಡುವ ವ್ಯಕ್ತಿ ಅಲ್ಲವೇ ಅಲ್ಲ. ಹೀಗಿರುವಾಗ ಎಲ್ಲಾ ತಿಳಿದೇ ಮಾತನಾಡಿದ್ದಾರೆ ವರ್ಮಾ. ವರ್ಮಾ ಮಾತಿನಿಂದಲೇ ಬಾಲಿವುಡ್ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿತ್ತು ಎಂದರೂ ತಪ್ಪೇನಿಲ್ಲ.

  ಅಂದಹಾಗೆ, ಕಿಚ್ಚ ಸುದೀಪ್ ಈಗ ಚಿತ್ರಕ್ಕಿಂತ ಮೊದಲು ಹಿಂದಿಯಲ್ಲಿ ವರ್ಮಾ ನಿರ್ದೇಶನದ ಭೂತ್, ಫೂಂಕ್, ರಣ್ ಅಲ್ಲದೇ ತೆಲುಗು ಚಿತ್ರ ರಕ್ತ ಚರಿತ್ರದಲ್ಲೂ ನಟಿಸಿದ್ದರು. ಹೀಗಾಗಿ ಸುದೀಪ್ ಆಯ್ಕೆಗಳು, ನಟನಾ ಸಾಮರ್ಥ್ಯ ಹಾಗೂ ವ್ಯಕ್ತಿತ್ವದ ಬಗ್ಗೆ ವರ್ಮಾರಿಗೆ ಇನ್ನಿಲ್ಲದ ಭರವಸೆ. ಇನ್ನು ರಾಜಮೌಳಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ!. ಒಟ್ಟಿನಲ್ಲಿ ವರ್ಮಾ ಭವಿಷ್ಯ ನಿಜವಾಗುವ ದಿನ ಯಾವುದೆಂಬುದಷ್ಟೇ ಬಾಕಿ. (ಒನ್ ಇಂಡಿಯಾ ಕನ್ನಡ)

  English summary
  Bollywood famous director Ram Gopal Varma Predicted before itself the release of present successfully running Telugu movie 'Eega'. Kichcha Sudeep already acted 4 movies of Varma direction. So, Varma knows Sudeep performance very well and the SS Rajmouli too. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X