For Quick Alerts
  ALLOW NOTIFICATIONS  
  For Daily Alerts

  'ಕಾಂತಾರ'ವನ್ನು ಹೊಗಳಿ, ದೊಡ್ಡ ಸಿನಿಮಾಗಳಿಗೆ ಟಾಂಗ್ ಕೊಟ್ಟ ರಾಮ್ ಗೋಪಾಲ್ ವರ್ಮಾ

  |

  ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ' ಸಿನಿಮಾ ನೂರು ಕೋಟಿ ಕಲೆಕ್ಷನ್ ದಾಟಿದೆ. ಸಿನಿಮಾವನ್ನು ಸಾಮಾನ್ಯ ಪ್ರೇಕ್ಷಕರಾದಿಯಾಗಿ ಸಿನಿಮಾ ತಂತ್ರಜ್ಞರು, ವಿಮರ್ಶಕರು ಸಹ ಮೆಚ್ಚಿದ್ದಾರೆ.

  ಹಲವು ಸ್ಟಾರ್ ನಟ-ನಟಿಯರು ಸಿನಿಮಾವನ್ನು ನೋಡಿ ಮೆಚ್ಚಿ ಕೊಂಡಾಡಿದ್ದಾರೆ. ಸುದೀಪ್, ಪ್ರಭಾಸ್, ಶಿಲ್ಪಾ ಶೆಟ್ಟಿ, ತಮಿಳಿನ ಕಾರ್ತಿ, ಧನುಶ್ ಇನ್ನೂ ಹಲವರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಇದೀಗ ಜನಪ್ರಿಯ ನಿರ್ದೇಶಕರೊಬ್ಬರು ಸಿನಿಮಾವನ್ನು ಮೆಚ್ಚಿಕೊಂಡಿರುವ ಜೊತೆಗೆ, 'ಕಾಂತಾರ' ಸಿನಿಮಾವನ್ನು ಹೆಸರಿಸಿ ಸ್ಟಾರ್ ನಟರ ಬಿಗ್‌ಬಜೆಟ್ ಸಿನಿಮಾಗಳಿಗೆ ಟಾಂಗ್ ನೀಡಿದ್ದಾರೆ.

   ರಿಷಬ್ ಶೆಟ್ಟಿ ಆಡಿದ ಆ ಮಾತು ಅವರನ್ನು ಎಲ್ಲಿಗೆ ತಂದು ನಿಲ್ಲಿಸಿದೆ? ರಿಷಬ್ ಶೆಟ್ಟಿ ಆಡಿದ ಆ ಮಾತು ಅವರನ್ನು ಎಲ್ಲಿಗೆ ತಂದು ನಿಲ್ಲಿಸಿದೆ?

  ಒಂದು ಕಾಲದ ಅದ್ಭುತ ನಿರ್ದೇಶಕ, ಈಗಿನ ಕಟು ವಿಮರ್ಶಕ ರಾಮ್ ಗೋಪಾಲ್ ವರ್ಮಾ, 'ಕಾಂತಾರ' ಸಿನಿಮಾವನ್ನು ವೀಕ್ಷಿಸಿದ್ದು ಸಿನಿಮಾವನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ. ''ಸಿನಿಮಾ ತಜ್ಞರೆಲ್ಲ ಸೇರಿಕೊಂಡು, ಕೇವಲ ಸೂಪರ್ ಸ್ಟಾರ್ ಸಿನಿಮಾಗಳು, ದೊಡ್ಡ ಬಜೆಟ್‌ನ ಸಿನಿಮಾಗಳು, ಅದ್ಧೂರಿ ವಿಎಫ್‌ಎಕ್ಸ್‌ಗಳುಳ್ಳ ಸಿನಿಮಾಗಳು ಮಾತ್ರವೇ ಜನರನ್ನು ಚಿತ್ರಮಂದಿರಕ್ಕೆ ಕರೆತರಬಲ್ಲವು ಎಂದು ನಿಶ್ಚಯಿಸಿರುವ ಸಮಯದಲ್ಲಿ ಯಾವುದೇ ದೊಡ್ಡ ಹೆಸರುಗಳುಳ್ಳ ನಟ, ತಂತ್ರಜ್ಞರ ಸಣ್ಣ ಸಿನಿಮಾ 'ಕಾಂತಾರ' ಸ್ಟಾರ್ ನಟರ ರೆಕಾರ್ಡ್‌ಗಳನ್ನು ಬ್ರೇಕ್ ಮಾಡುತ್ತಿದೆ'' ಎಂದಿದ್ದಾರೆ.

  'ಕಾಂತಾರ' ಸಿನಿಮಾವನ್ನು ಹೊಗಳಿರುವ ಜೊತೆಗೆ ಮತ್ತೊಂದು ಕನ್ನಡ ಸಿನಿಮಾ 'ಹೆಡ್ ಬುಷ್' ಸಿನಿಮಾದ ಟ್ರೈಲರ್ ಹಂಚಿಕೊಂಡು ತಲೆಗೆ ಹೊಡೆದಂಥಹಾ 'ಹೆಡ್‌ ಬುಷ್' ಸಿನಿಮಾದ ಟ್ರೈಲರ್ ಎಂದಿದ್ದಾರೆ. ಜೊತೆಗೆ ನಟ ಡಾಲಿ ಧನಂಜಯ್‌ಗೆ ಶುಭ ಹಾರೈಕೆಗಳನ್ನು ಸಹ ನೀಡಿದ್ದಾರೆ.

  ಈ ಹಿಂದೆ ನಿರ್ದೇಶಕ ಸೂರಿ ಮನವಿಗೆ ಸ್ಪಂದಿಸಿ ಅವರ ನಿರ್ದೇಶನದ 'ಟಗರು' ಸಿನಿಮಾ ವೀಕ್ಷಿಸಿದ್ದ ರಾಮ್ ಗೋಪಾಲ್ ವರ್ಮಾ, ಡಾಲಿ ಧನಂಜಯ್ ನಟನೆಯನ್ನು ಬಹುವಾಗಿ ಮೆಚ್ಚಿದ್ದಲ್ಲದೆ, ತೆಲುಗಿನಲ್ಲಿ 'ಭೈರವಗೀತಂ' ಸಿನಿಮಾ ಅವಕಾಶವನ್ನೂ ಅವರಿಗೆ ಕೊಡಿಸಿದ್ದರು. ಈಗ ಡಾಲಿಯ ಹೊಸ ಸಿನಿಮಾಕ್ಕೆ ಶುಭಾಷಯ ಕೋರಿದ್ದಾರೆ.

  English summary
  Movie director Ram Gopal Varma watched Kannada movie Kantara and praised it. He said small and tiny movie Kantara bringing people to theaters
  Monday, October 17, 2022, 22:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X