For Quick Alerts
  ALLOW NOTIFICATIONS  
  For Daily Alerts

  'KGF - 2' ಕಲೆಕ್ಷನ್ ದಾಖಲೆ ಮುರಿಯಲು 'RRR'ಗೆ ಕೊನೆ ಛಾನ್ಸ್: ಜಪಾನ್‌ನಲ್ಲಿ ಹೇಗಿದೆ ಗೊತ್ತಾ ರಾಮ್‌-ಭೀಮ್ ಕ್ರೇಜ್?

  |

  ರಾಜಮೌಳಿ ಮಾಸ್ಟರ್‌ಪೀಸ್ 'RRR' ಆರ್ಭಟ ಇನ್ನು ಕಮ್ಮಿ ಆಗಿಲ್ಲ. ಇದೀಗ ಜಪಾನ್‌ನಲ್ಲಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ಎಪಿಕ್ ಆಕ್ಷನ್ ಡ್ರಾಮಾ ಜಪಾನ್ ಭಾಷೆಗೆ ಡಬ್ ಆಗಿದ್ದು, ಇದೇ ಶುಕ್ರವಾರ ಅಲ್ಲಿ ಸಿನಿಮಾ ತೆರೆಗಪ್ಪಳಿಸ್ತಿದೆ. ಈಗಾಗಲೇ ಮೌಳಿ, ಚರಣ್ ಹಾಗೂ ಎನ್‌ಟಿಆರ್ ಸಿನಿಮಾ ಪ್ರಮೋಷನ್‌ಗಾಗಿ ಹೋಗಿದ್ದಾರೆ. ಅಭಿಮಾನಿಗಳಿಂದ 'RRR' ಸ್ಟಾರ್ಸ್‌ಗೆ ಭರ್ಜರಿ ಸ್ವಾಗತವೇ ಸಿಕ್ಕಿದೆ.

  ನಟ ರಾಮ್‌ಚರಣ್ ತೇಜಾ ಪತ್ನಿ ಉಪಾಸನಾ ಜೊತೆಗೆ ಜಪಾನ್‌ಗೆ ಹೋಗಿದ್ದರೆ ಜ್ಯೂ. ಎನ್‌ಟಿಆರ್ ಇಬ್ಬರು ಮಕ್ಕಳ ಜೊತೆ ಹೋಗಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 'RRR' ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ದೊಡ್ಡಮಟ್ಟದ ಪ್ರಮೋಷನ್‌ಗೆ ಚಿತ್ರತಂಡ ಮುಂದಾಗಿದೆ. ಚರಣ್‌- ಉಪಾಸನಾ ದಂಪತಿ ಜಪಾನ್ ಅಭಿಮಾನಿಗಳ ಜೊತೆ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿ ಎಂಜಾಯ್ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊವನ್ನು ಉಪಾಸನಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

  RRR ಆಸ್ಕರ್‌ ರೇಸ್ ಶುರು: ಹದಿನೈದು ವಿಭಾಗದಲ್ಲಿ ಪರಿಗಣಿಸಲು ಅಭಿಯಾನRRR ಆಸ್ಕರ್‌ ರೇಸ್ ಶುರು: ಹದಿನೈದು ವಿಭಾಗದಲ್ಲಿ ಪರಿಗಣಿಸಲು ಅಭಿಯಾನ

  ಮಾರ್ಚ್ 25ಕ್ಕೆ ರಿಲೀಸ್ ಆಗಿದ್ದ 'RRR' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 1000 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ರಾಮ್‌-ಭೀಮ್ ಬ್ರೋಮ್ಯಾನ್ಸ್ ಸಿನಿಪ್ರೇಕ್ಷಕರನ್ನು ರಂಜಿಸಿತ್ತು. ರಾಜಮೌಳಿ ನಿರ್ದೇಶನ ಚರಣ್- ತಾರಕ್ ಪರ್ಫಾರ್ಮೆನ್ಸ್, ಗ್ರಾಫಿಕ್ಸ್ ಎಲ್ಲವೂ ತೆರೆಮೇಲೆ ಅದ್ಭುತ ಅನುಭವ ನೀಡಿತ್ತು.

  1200 ಕೋಟಿ ರೂ. ಬಾಚಿದ್ದ 'RRR'

  1200 ಕೋಟಿ ರೂ. ಬಾಚಿದ್ದ 'RRR'

  ಆಂಧ್ರದ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಹಾಗೂ ಕೋಮುರಂ ಭೀಮ್ ಪಾತ್ರಗಳನ್ನು ಬಳಸಿಕೊಂಡು ಒಂದು ಕಾಲ್ಪನಿಕ ಕಥೆ ಹೇಳಿ ರಾಜಮೌಳಿ ಸಕ್ಸಸ್ ಕಂಡಿದ್ದರು. ಅವರ ಪ್ರಯತ್ನಕ್ಕೆ ಮೆಚ್ಚುವೆ ವ್ಯಕ್ತವಾಗಿತ್ತು. ಇನ್ನು ಸೀತಾರಾಮರಾಜು ಪಾತ್ರದಲ್ಲಿ ಚರಣ್, ಕೋಮುರಂ ಭೀಮ್ ಆಗಿ ತಾರಕ್ ಪೈಪೋಟಿಗೆ ಬಿದ್ದು ನಟಿಸಿದ್ದರು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ 5 ಭಾಷೆಗಳಲ್ಲಿ ರಿಲೀಸ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. 1200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು.

  ಅಮೆರಿಕಾದಲ್ಲಿ ಆರ್‌ಆರ್‌ಆರ್ ವಿಶೇಷ ಪ್ರದರ್ಶನ; ಸ್ಕ್ರೀನ್ ಮುಂದೆ ಕುಣಿದ ವೀಕ್ಷಕರು!ಅಮೆರಿಕಾದಲ್ಲಿ ಆರ್‌ಆರ್‌ಆರ್ ವಿಶೇಷ ಪ್ರದರ್ಶನ; ಸ್ಕ್ರೀನ್ ಮುಂದೆ ಕುಣಿದ ವೀಕ್ಷಕರು!

  ಹಾಲಿವುಡ್ ಮಂದಿ ಮನಗೆದ್ದ ಸಿನಿಮಾ

  ಹಾಲಿವುಡ್ ಮಂದಿ ಮನಗೆದ್ದ ಸಿನಿಮಾ

  ಸಿಲ್ವರ್ ಸ್ಕ್ರೀನ್‌ ಮೇಲೆ ಮಾತ್ರವಲ್ಲ 'RRR' ಸಿನಿಮಾ ಓಟಿಟಿಯಲ್ಲೂ ಸಖತ್ ಸದ್ದು ಮಾಡಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಿದ್ದ ಸಿನಿಮಾ ಜಗತ್ತಿನ ಮೂಲೆ ಮೂಲೆ ತಲುಪಿತ್ತು. ಹಾಲಿವುಡ್ ಪ್ರೇಕ್ಷಕರು, ಫಿಲ್ಮ್ ಮೇಕರ್ಸ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಸೋಶಿಯಲ್ ಮೀಡಿಯಾ ಮೂಲಕ ತಂಡಕ್ಕೆ ಬಹುಪರಾಕ್ ಹೇಳಿದ್ದರು. ಇದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿತ್ತು.

  ಆಸ್ಕರ್‌ ರೇಸ್‌ನಲ್ಲಿ ರಾಜಮೌಳಿ 'RRR'

  ಆಸ್ಕರ್‌ ರೇಸ್‌ನಲ್ಲಿ ರಾಜಮೌಳಿ 'RRR'

  ದೇಶ ವಿದೇಶದಲ್ಲಿ ಸದ್ದು ಮಾಡಿದ್ದ 'RRR' ಸಿನಿಮಾ ಈ ಬಾರಿ ಆಸ್ಕರ್ ಪ್ರಶಸ್ತಿ ಗೆಲ್ಲುತ್ತದೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಭಾರತದಿಂದ ಅಧಿಕೃತವಾಗಿ ಆಸ್ಕರ್​ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ ಆಗುವಲ್ಲಿ 'ಆರ್​ಆರ್​ಆರ್​' ಚಿತ್ರ ವಿಫಲವಾಯಿತು. ಇದರಿಂದ ಅಭಿಮಾನಿಗಳಿಗೆ ಸಖತ್​ ಬೇಸರ ಆಗಿತ್ತು. ಗುಜರಾತಿ ಭಾಷೆಯ 'ಚೆಲ್ಲೋ ಶೋ' ಸಿನಿಮಾ ಆಸ್ಕರ್​ ಸ್ಪರ್ಧೆಗೆ ಭಾರತದಿಂದ ಆಯ್ಕೆ ಆಗಿದೆ. ಸದ್ಯ ಬೆನ್ನಲ್ಲೇ 'RRR' ತಂಡ For Your Consideration ಕ್ಯಾಂಪೇನ್​ ಮೂಲಕ ಆಸ್ಕರ್​ ಸ್ಪರ್ಧೆಗೆ ಎಂಟ್ರಿ ನೀಡಲು ಪ್ರಯತ್ನಿಸುತ್ತಿದೆ. ಈಗಾಗಲೇ ಅಭಿಯಾನಕ್ಕೆ ಸಿದ್ಧತೆ ನಡೀತಿದೆ.

  'KGF - 2' ದಾಖಲೆ ಮುರಿಯುತ್ತಾ 'RRR' ?

  'KGF - 2' ದಾಖಲೆ ಮುರಿಯುತ್ತಾ 'RRR' ?

  ದೂರದ ಜಪಾನ್‌ನಲ್ಲೂ 'RRR' ಚಿತ್ರದ 'ನಾಟು ನಾಟು' ಸಾಂಗ್ ಕ್ರೇಜ್ ಜೋರಾಗಿದೆ. ಅಲ್ಲಿನ ಸಿನಿರಸಿಕರು 'ನಾಟು ನಾಟು' ಕವರ್‌ ವರ್ಷನ್ ಸಾಂಗ್ ಶೇರ್ ಮಾಡಿದ್ದಾರೆ. ಆ ವಿಡಿಯೋ ಈಗ ಫುಲ್ ವೈರಲ್ ಆಗಿದೆ. ಈಗಾಗಲೇ ಕೆಲ ದಕ್ಷಿಣಭಾರತದ ಸಿನಿಮಾಗಳು ಜಪಾನ್ ದೇಶದಲ್ಲಿ ರಿಲೀಸ್ ಆಗಿದ್ದವು. ಇದೇ ಶುಕ್ರವಾರ ಜಪಾನ್‌ನಲ್ಲಿ 'RRR' ಸಿನಿಮಾ ರಿಲೀಸ್ ಆಗುತ್ತಿದೆ. ಕಲೆಕ್ಷನ್ ವಿಚಾರದಲ್ಲಿ 'RRR'ಗಿಂತ KGF- 2 ಕಲೆಕ್ಷನ್ ಜಾಸ್ತಿಇದೆ. ರಾಮ್‌-ಭೀಂಮ್ ಜಪಾನ್‌ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿ ರಾಕಿಭಾಯ್ ದಾಖಲೆ ಮುರಿತ್ತಾರಾ ಕಾದು ನೋಡಬೇಕು.

  English summary
  Ramcharan and Jr Ntr have landed in Japan for RRR promotions. SS Rajamouli Directed period action drama is set to release in Japan on Friday, the makers announced. Know More.
  Wednesday, October 19, 2022, 20:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X