For Quick Alerts
  ALLOW NOTIFICATIONS  
  For Daily Alerts

  ಸ್ವಾತಂತ್ರ್ಯ ದಿನಾಚರಣೆಗೆ ಪವನ್ ಕಲ್ಯಾಣ್-ರಾಣಾ ಅಭಿಮಾನಿಗಳಿಗೆ ಸಿಕ್ತಿದೆ ಬಿಗ್ ಸರ್ಪ್ರೈಸ್

  |

  ವಕೀಲ್ ಸಾಬ್ ಚಿತ್ರದ ಸೂಪರ್ ಸಕ್ಸಸ್ ಬಳಿಕ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತೊಂದು ರಿಮೇಕ್ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಮಲಯಾಳಂನ ಸೂಪರ್ ಹಿಟ್ 'ಅಯ್ಯಪನುಂ ಕೋಶಿಯುಂ' ಚಿತ್ರವನ್ನು ತೆಲುಗಿನಲ್ಲಿ ರಿಮೇಕ್ ಮಾಡುತ್ತಿದ್ದಾರೆ. ಈಗಾಗಲೇ ಎಲ್ಲಾ ತಯಾರಿ ನಡೆದಿದ್ದು ಚಿತ್ರೀಕರಣ ಸಹ ಪ್ರಾರಂಭವಾಗಿದೆ. ಅಂದಹಾಗೆ ಚಿತ್ರದ ಟೈಟಲ್ ಮಾತ್ರ ಇನ್ನು ರಿವೀಲ್ ಆಗಿರಲಿಲ್ಲ. ಆದರೀಗ ಶೀರ್ಷಿಕೆ ಬಹಿರಂಗ ಪಡಿಸುವ ಸಮಯ ಹತ್ತಿರ ಬಂದಿದೆ.

  ಪವನ್ ಕಲ್ಯಾಣ್ ಜೊತೆ ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ಕೂಡ ನಟಿಸುತ್ತಿದ್ದಾರೆ. ಇಬ್ಬರ ನಡುವಿನ ಕಥೆ ಇದಾಗಿದ್ದು, ಪವನ್ ಮತ್ತು ರಾಣಾ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ಸಿನಿಮಾ ಘೋಷಣೆಯಾಗಿ ತಿಂಗಳೇ ಕಳೆದಿದೆ. ಆದರೆ ಚಿತ್ರದಿಂದ ಯಾವುದೇ ಮಾಹಿತಿ ಬಹಿರಂಗವಾಗಿರಲಿಲ್ಲ. ಇದೀಗ ಚಿತ್ರದ ಬಗ್ಗೆ ಅಪ್ ಡೇಟ್ ಸಿಕ್ಕಿದೆ.

  ಪವನ್ ಕಲ್ಯಾಣ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಟಿ ರಮ್ಯಶ್ರೀಪವನ್ ಕಲ್ಯಾಣ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಟಿ ರಮ್ಯಶ್ರೀ

  ಬಹುನಿರೀಕ್ಷೆಯ ಸಿನಿಮಾದ ಟೈಟಲ್ ಬಿಡುಗಡೆ ದಿನಾಂಕವನ್ನು ಬಹಿರಂಗ ಪಡಿಸಿದೆ ಸಿನಿಮಾತಂಡ. ಅಂದಹಾಗೆ 'ಅಯ್ಯಪನುಂ ಕೋಶಿಯುಂ' ತೆಲುಗು ರಿಮೇಕ್ ನ ಶೀರ್ಷಿಕೆ ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ ಬಹಿರಂಗ ಗೊಳಿಸುತ್ತಿದೆ ಸಿನಿಮಾತಂಡ.

  ಸದ್ಯ ಚಿತ್ರದಿಂದ ಒಂದು ಪೋಸ್ಟರ್ ಬಿಡುಗಡೆ ಮಾಡಿದ್ದು, ಪವರ್ ಸ್ಟಾರ್ ಲುಂಗಿ ಧರಿಸಿ ನಡೆದುಕೊಂಡು ಹೋಗುತ್ತಿದ್ದಾರೆ. ಚಿತ್ರದಲ್ಲಿ ಪವನ್ ಕಲ್ಯಾಣ್ ಭೀಲ್ಲ ನಾಯಕ್ ಎನ್ನುವ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆಗಸ್ಟ್ 15 ಬೆಳಗ್ಗೆ 9.45ಕ್ಕೆ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ಅನಾವರಣವಾಗಲಿದೆ. ಚಿತ್ರಕ್ಕೆ ಸಾಗರ್ ಕೆ ಚಂದ್ರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಸ್ಕ್ರಿಪ್ಟ್ ಮಾಡಿದ್ದಾರೆ.

  ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿ ತಿಂಗಳಾಗಿತ್ತು. ಆದರೆ ಲಾಕ್ ಡೌನ್ ಕರಾಣದಿಂದ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಪ್ರಾರಂಭ ಮಾಡಿದ್ದು, ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣದಲ್ಲಿ ಇಬ್ಬರು ನಟರು ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಸದ್ಯ ರಿವೀಲ್ ಆಗಿರುವ ಮಾಹಿತಿ ಪ್ರಕಾರ ಅಯ್ಯಪ್ಪನಂ ಕೊಶಿಯಮ್ ಸಿನಿಮಾದ ತೆಲುಗು ರಿಮೇಕ್ ಟೈಟಲ್ 'ಪರಶುರಾಮ ಕೃಷ್ಣಮೂರ್ತಿ' ಎಂದು ನಾಮಕರಣ ಮಾಡಲಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

  Rana Daggubati and Pawan Kalyan starrer new movie title will release on Independence Day.

  'ಅಯ್ಯಪ್ಪನುಮ್ ಕೋಶಿಯುಮ್' ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಬಿಜು ಮೆನನ್ ನಟಿಸಿದ್ದರು. ಸಚಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಬಿಜೆ ಮೆನನ್ ಪತ್ನಿ ಪಾತ್ರದಲ್ಲಿ ಗೌರಿ ನಂದಾ ನಟಿಸಿದ್ದರು. ಪೃಥ್ವಿರಾಜ್ ಪಾತ್ರದಲ್ಲಿ ರಾಣಾ ಕಾಣಿಸಿಕೊಳ್ಳುತ್ತಿದ್ದಾರೆ, ಬಿಜು ಮೆನನ್ ಪಾತ್ರದಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. ಮಲಯಾಳಂ ಸಿನಿಮಾ 2020ರ ಫೆಬ್ರವರಿ 7 ರಂದು ತೆರೆಕಂಡಿತ್ತು.

  2021 ಸೆಕೆಂಡ್ ಹಾಫ್ ಮೇಲೆ ಕಣ್ಣಿಟ್ಟ ನಟ ರಾಣಾ ದಗ್ಗುಬಾಟಿ2021 ಸೆಕೆಂಡ್ ಹಾಫ್ ಮೇಲೆ ಕಣ್ಣಿಟ್ಟ ನಟ ರಾಣಾ ದಗ್ಗುಬಾಟಿ

  ಅಂದಹಾಗೆ ಈ ಬಹುನಿರೀಕ್ಷೆಯ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿಗೆ ಬರುವ ಸಾಧ್ಯತೆ ಇದೆ. ಈಗಾಗಲೇ ಸಂಕ್ರಾಂತಿಗೆ ತೆಲುಗಿನ ಬಹುನಿರೀಕ್ಷೆಯ ಸಿನಿಮಾಗಳಾದ ಪ್ರಭಾಸ್ ನಟನೆಯ ರಾಧೆ-ಶ್ಯಾಮ್ ಮತ್ತು ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ ಸಿನಿಮಾ ಕೂಡ ಮುಂದಿನ ವರ್ಷ ಸಂಕ್ರಾಂತಿಗೆ ತೆರೆಗೆ ಬರ್ತಿದೆ.

  ರಾಣಾ ದಗ್ಗುಬಾಟಿ ಸದ್ಯ ಈ ಸಿನಿಮಾ ಜೊತೆಗೆ 'ಹಾತಿ ಮೇರೆ ಸಾತಿ' ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ವಿರಾಟ ಪರ್ವಂ' ಸಿನಿಮಾ ಕೂಡ ಜೊತೆಯಲ್ಲಿದೆ. ಇನ್ನು ಪವನ್ ಕಲ್ಯಾಣ್ 'ಹರಿ ಹರ ಮಲ್ಲು' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಐತಿಹಾಸಿಕ ಸಿನಿಮಾ ಇದಾಗಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಪವನ್ ಕಲ್ಯಾಣ್ ಕೊನೆಯದಾಗಿ 'ವಕೀಲ್ ಸಾಬ್' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ 'ಅಯ್ಯಪ್ಪನುಮ್ ಕೋಶಿಯುಮ್' ರಿಮೇಕ್ ಮೂಲಕ ಬರ್ತಿದ್ದಾರೆ.

  English summary
  Telugu Actor Rana Daggubati and Pawan Kalyan starrer new movie title will release on Independence Day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X