ಸಂಕ್ರಾಂತಿ ಹಬ್ಬದ ದಿನ ರಾಣಾ ದಗ್ಗುಬಾಟಿ ಕೈಹಿಡಿದು ಬಂದ ಸಾಯಿ ಪಲ್ಲವಿ

ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸಂಕ್ರಾಂತಿ ಹಬ್ಬದ ದಿನ ರಾಣಾ ದಗ್ಗುಬಾಟಿ ಕೈ ಹಿಡಿದು ಹೊರಟಿದ್ದಾರೆ. ಇತ್ತೀಚಿಗೆ ಸಾಯಿ ಪಲ್ಲವಿ ಲವ್ ಸ್ಟೋರಿ ರಿವೀಲ್ ಮಾಡಿ, ನಟ ನಾಗ ಚೈತನ್ಯ ಜೊತೆ ಬರಿಗಾಲಿನಲ್ಲಿ ಓಡಿ ಹೋಗಿರುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗತ್ತು. ಇದೀಗ ಸಾಯಿ ಪಲ್ಲವಿ, ರಾಣಾ ಜೊತೆ ಹೊರಟಿದ್ದಾರೆ.

ಅಂದಹಾಗೆ ಇದು ವಿರಾಟ ಪರ್ವಂ ಸಿನಿಮಾದ ಲುಕ್. ಹೌದು, ಸಾಯಿ ಪಲ್ಲವಿ ಮತ್ತು ರಾಣಾ ದಗ್ಗುಬಾಟಿ ನಟನೆಯ ವಿರಾಟ ಪರ್ವಂ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ವೇಣು ಉಡುಗುಲ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

ಸದ್ಯ ರಿಲೀಲ್ ಆಗಿರುವ ಪೋಸ್ಟರ್ ಮತ್ತು ಈ ಹಿಂದೆ ಬಿಡುಗಡೆಯಾಗಿರುವ ಪೋಸ್ಟ್ ಗಳು ನೋಡಿದ್ರೆ ಸಿನಿಮಾ ನಕ್ಸಲಿಸಂ ಬಗ್ಗೆ ಇರುವ ಸಿನಿಮಾ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ನಕ್ಸಲೈಟ್ ಕಾಸ್ಟ್ಯೂಮ್ ನಲ್ಲಿ ರಾಣಾ ದಗ್ಗುಬಾಟಿ ಕೈ ಹಿಡಿದಿರುವ ಸಾಯಿ ಪಲ್ಲವಿ ಇಬ್ಬರು ನಡೆದುಕೊಂಡು ಹೋಗುತ್ತಿದ್ದಾರೆ.

Rana Daggubati and Sai Pallavis Virata Parvam new poster release

ಸಂಕ್ರಾಂತಿ ಮುಂಚಿತವಾಗಿ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು, ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಪಾತ್ರ, ಗಾಯಕ ಮತ್ತು ಸಾಮಾಜಿಕ ಕಾರ್ಯಕರ್ತೆ ಬೆಲ್ಲಿ ಲಲಿತಾ ಅವರ ಸ್ಫೂರ್ತಿ ಎಂದು ಹೇಳಲಾಗುತ್ತಿದೆ.

ಇನ್ನು ಚಿತ್ರದಲ್ಲಿ ನಂದಿತಾ ದಾಸ್, ಬಾಲಿವುಡ್ ನಟಿ ಟಬು, ಪ್ರಿಯಮಣಿ, ಈಶ್ವರಿ ರಾವ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಪೋಸ್ಟರ್ ಗಳ ಮೂಲಕವೇ ಭಾರಿ ಕುತೂಹಲ ಮೂಡಿಸಿರುವ ಈ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.

ರಾಣಾ ದಗ್ಗುಬಾಟಿ ಸದ್ಯ ಹಾಥಿ ಮೇರೆ ಸಾಥಿ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಹಿಂದೆ ಜೊತೆಗೆ ತಮಿಳು ಮತ್ತು ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ಇನ್ನು ನಟಿ ಸಾಯಿ ಪಲ್ಲವಿ ಬಹು ನಿರೀಕ್ಷೆಯ ಲವ್ ಸ್ಟೋರಿ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇತ್ತೀಚಿಗಷ್ಟೆ ಟೀಸರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ವಿರಾಟ ಪರ್ವಂ ಮೂಲಕ ಸದ್ದು ಮಾಡುತ್ತಿದ್ದಾರೆ.

More from Filmibeat

English summary
Rana Daggubati and Sai Pallavi starrer Virata Parvam movie new poster release for Sankranti Festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X