For Quick Alerts
  ALLOW NOTIFICATIONS  
  For Daily Alerts

  ರಾಣಾ ದಗ್ಗುಬಾಟಿ ಮದುವೆ ಸಂಭ್ರಮ: ಗೈರಾಗಲಿದ್ದಾನೆ ಆಪ್ತ ಗೆಳೆಯ

  |

  ರಾಣಾ ದಗ್ಗುಬಾಟಿ -ಮಿಹಿಕಾ ಬಜಾಜ್ ಮದುವೆಗೆ ಸಕಲ ತಯಾರಿಯೂ ನಡೆದಿದ್ದು, ಇನ್ನೆರಡು ದಿನದಲ್ಲಿ ರಾಣಾ ದಗ್ಗುಬಾಟಿ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ.

  KGF Garuda ಖ್ಯಾತಿಯ RamChandra , Chapter 2 ಬಗ್ಗೆ ಹೇಳೋದೇನು - Part 1 | Filmibeat Kannada

  ಮಾರ್ಚ್‌ನಲ್ಲಿ ಎಂಗೇಜ್ ಆಗಿದ್ದ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಆಗಸ್ಟ್ 8 ರಂದು ಹಸೆಮಣೆ ಏರಲಿದ್ದಾರೆ. ಮದುವೆ ಸಂಭ್ರಮಕ್ಕಾಗಿ ರಾಣಾ ದಗ್ಗುಬಾಟಿ ಕುಟುಂಬದವರ ಒಡೆತನದ ರಾಮಾನಾಯ್ಡು ಸ್ಟುಡಿಯೋವನ್ನು ಸಕಲವಾಗಿ ಸಜ್ಜುಗೊಳಿಸಲಾಗಿದೆ.

  ಕುತೂಹಲ ಮೂಡಿಸಿದ ಕಂಗನಾ ರಣಾವತ್ ಮತ್ತು ರಾಣಾ ದಗ್ಗುಬಾಟಿ ಮಾತುಕತೆಕುತೂಹಲ ಮೂಡಿಸಿದ ಕಂಗನಾ ರಣಾವತ್ ಮತ್ತು ರಾಣಾ ದಗ್ಗುಬಾಟಿ ಮಾತುಕತೆ

  ಕೊರೊನಾ ಮಿತಿ ಮೀರಿರುವ ಕಾರಣ ಸಕಲ ಮುಂಜಾಗೃತೆಗಳ ನಡುವೆ, ಸೀಮಿತ ಅತಿಥಿಗಳ ಮುಂದೆ ಮದುವೆ ನಡೆಯಲಿದೆ. ರಾಣಾ ದಗ್ಗುಬಾಟಿಯ ಆಪ್ತ ಮಿತ್ರರೊಬ್ಬರು ಮದುವೆಗೆ ಹಾಜರಾಗದೇ ಇರುವುದು ದಗ್ಗುಬಾಟಿಗೆ ಬೇಸರ ತರಲಿದೆ.

  ರಾಣಾ ಆಪ್ತ ಗೆಳೆಯ ಮದುವೆಗೆ ಗೈರು

  ರಾಣಾ ಆಪ್ತ ಗೆಳೆಯ ಮದುವೆಗೆ ಗೈರು

  ರಾಣಾ ದಗ್ಗುಬಾಟಿ ವಿವಾಹಕ್ಕೆ ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್‌.ಎಸ್.ರಾಜಮೌಳಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅವರಿಗೆ ಕೊರೊನಾ ಪಾಸಿಟಿವ್ ಆಗಿರುವ ಕಾರಣ ರಾಜಮೌಳಿ ಮದುವೆಗೆ ಬರಲಾಗುತ್ತಿಲ್ಲ. ರಾಣಾ-ರಾಜಮೌಳಿ ಆಪ್ತ ಗೆಳೆಯರು ಆದರೆ ಗೆಳೆಯನ ಮದುವೆಗೆ ರಾಜಮೌಳಿ ಗೈರಾಗುವ ಅನಿವಾರ್ಯತೆ ಎದುರಾಗಿದೆ..

  ರಾಣಾ ದಗ್ಗುಬಾಟಿ ಮದುವೆ ವಿಚಾರ ಕೇಳಿ ಮಾಜಿ ಪ್ರೇಯಸಿ ಶಾಕ್ ಆದರಂತೆರಾಣಾ ದಗ್ಗುಬಾಟಿ ಮದುವೆ ವಿಚಾರ ಕೇಳಿ ಮಾಜಿ ಪ್ರೇಯಸಿ ಶಾಕ್ ಆದರಂತೆ

  ಹೋಟೆಲ್‌ನಲ್ಲಿ ನಡೆಸಲು ನಿಶ್ಚಯಿಸಲಾಗಿತ್ತು

  ಹೋಟೆಲ್‌ನಲ್ಲಿ ನಡೆಸಲು ನಿಶ್ಚಯಿಸಲಾಗಿತ್ತು

  ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಮದುವೆಯನ್ನು ಹೈದರಾಬಾದ್‌ನ ಐಶಾರಾಮಿ ತಾಜ್ ಫಲಕ್‌ನಾಮಾ ಹೋಟೆಲ್‌ನಲ್ಲಿ ಮಾಡಲು ನಿಶ್ಚಯಿಸಲಾಗಿತ್ತು. ಆದರೆ ಹೈದರಾಬಾದ್‌ನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿರುತ್ತಿರುವ ಕಾರಣ ಮದುವೆ ಸ್ಥಳ ಬದಲಾಯಿಸಿ, ಹೈದರಾಬಾದ್ ಹೊರವಲಯದ ರಾಮಾನಾಯ್ಡು ಸ್ಟುಡಿಯೋ ದಲ್ಲಿ ಮದುವೆ ಮಾಡಲಾಗುತ್ತಿದೆ.

  ಮದುವೆಗೆ 30 ಮಂದಿಗಷ್ಟೆ ಆಹ್ವಾನ

  ಮದುವೆಗೆ 30 ಮಂದಿಗಷ್ಟೆ ಆಹ್ವಾನ

  ರಾಣಾ ಮದುವೆ ಬಗ್ಗೆ ಮಾತನಾಡಿರುವ ತಂದೆ ಸುರೇಶ್, 'ಮದುವೆಗೆ ಕೇವಲ 30 ಮಂದಿಗಷ್ಟೆ ಆಹ್ವಾನವಿದೆ. ಕೊರೊನಾ ಪ್ರಕರಣ ದಿನೇ-ದಿನೇ ಹೆಚ್ಚಾಗುತ್ತಿದೆ. ಇಂಥಹಾ ಸಂದರ್ಭದಲ್ಲಿ ಮದುವೆಗೆ ಬಂದ ಅತಿಥಿಗಳ ಆರೋಗ್ಯ ಕೆಡುವುದು ನಮಗೆ ಇಷ್ಟವಿಲ್ಲ' ಎಂದಿದ್ದಾರೆ.

  ಹೊಸ ರೀತಿಯ ರಾಣಾ ದಗ್ಗುಬಾಟಿ-ಮಿಹಿಕಾ ಬಜಾಜ್ ಲಗ್ನ ಪತ್ರಿಕೆಹೊಸ ರೀತಿಯ ರಾಣಾ ದಗ್ಗುಬಾಟಿ-ಮಿಹಿಕಾ ಬಜಾಜ್ ಲಗ್ನ ಪತ್ರಿಕೆ

  ಎಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ

  ಎಲ್ಲರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ

  ಮದುವೆಯಲ್ಲಿ ಭಾಗವಹಿಸುವ ಎಲ್ಲರೂ ಮೊದಲೇ ಕೊರೊನಾ ಪರೀಕ್ಷೆಗೆ ಒಳಪಡುತ್ತಾರೆ. ನೆಗೆಟಿವ್ ಇದ್ದದವರಷ್ಟೆ ಮದುವೆಯಲ್ಲಿ ಭಾಗವಹಿಸುತ್ತಾರೆ. ಮದುವೆ ಮಂಟಪವನ್ನೂ ಸಹ ಮೊದಲೇ ಪೂರ್ಣವಾಗಿ ಸ್ಯಾನಿಟೈಸ್ ಮಾಡಿರುತ್ತೇವೆ ಎಂದು ಅವರು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿಸಿದರು.

  English summary
  Actor Rana Daggubati marriage on August 08. Only 30 people invited to the marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X