For Quick Alerts
  ALLOW NOTIFICATIONS  
  For Daily Alerts

  ಫಿಲ್ಮ್ ಸ್ಟುಡಿಯೋದಲ್ಲಿ ಮದುವೆಯಾದ ರಾಣಾ: VR ತಂತ್ರಜ್ಞಾನದ ಮೂಲಕ ಭಾಗಿಯಾಗಿದ್ದ ಸ್ನೇಹಿತರು

  |

  ಟಾಲಿವುಡ್ ನ ಖ್ಯಾತ ನಟ ಬಾಹುಬಲಿಯ ಬಲ್ಲಾಳ ದೇವ ಇತ್ತೀಚಿಗೆ ಬಹುಕಾಲದ ಗೆಳತಿ ಮಿಹೀಕಾ ಬಜಾಜ್ ಜೊತೆ ಸಪ್ತಪದಿ ತುಳಿದಿದ್ದಾರೆ. ಕೊರೊನಾ ಲಾಕ್ ಡೌನ್ ಕಾರಣ ರಾಣಾ ತೀರ ಸರಳವಾಗಿ ಮದುವೆಯಾಗಿದ್ದಾರೆ. ಕೇವಲ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮಿಹೀಕಾಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.

  ಲಾಕ್ ಡೌನ್ ಮದುವೆ ಬಗ್ಗೆ ನಟ ರಾಣಾ ಮೊದಲ ಬಾರಿಗೆ ಮಾತನಾಡಿದ್ದಾರೆ. ಇತ್ತೀಚಿಗೆ ರಾಣಾ ದಗ್ಗುಬಾಟಿ ಬಾಲಿವುಡ್ ನಟಿ ನೇಹಾ ಧೂಪಿಯಾ ಅವರ 'ನೋ ಫಿಲ್ಟರ್ ನೇಹಾ' ಕಾರ್ಯಕ್ರಮದಲ್ಲಿ ರಾಣಾ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ರಾಣಾ ಲಾಕ್ ಡೌನ್ ಮದುವೆ ಅನುಭವವನ್ನು ಹಂಚಿಕೊಂಡಿದ್ದಾರೆ.

  ರಾಣಾ ದಗ್ಗುಬಾಟಿ ಹನಿಮೂನ್‌ಗಾಗಿ ಈ ಸ್ಥಳ ಆಯ್ಕೆ ಮಾಡಿದ್ದರು!ರಾಣಾ ದಗ್ಗುಬಾಟಿ ಹನಿಮೂನ್‌ಗಾಗಿ ಈ ಸ್ಥಳ ಆಯ್ಕೆ ಮಾಡಿದ್ದರು!

  ಫಿಲ್ಮ್ ಸ್ಟುಡಿಯೋದಲ್ಲಿ ಮದುವೆ

  ಫಿಲ್ಮ್ ಸ್ಟುಡಿಯೋದಲ್ಲಿ ಮದುವೆ

  ರಾಣಾ ಮತ್ತು ಮಿಹೀಕಾ ಬಜಾಜ್ ಇಬ್ಬರು ರಮಾನೈಡು ಫಿಲ್ಮ್ ಸ್ಟುಡಿಯೋದಲ್ಲಿ ಮದುವೆಯಾಗಿದ್ದಾರೆ. ಕೇವಲ 30 ಜನ ಆಪ್ತರ ಸಮ್ಮುಖದಲ್ಲಿ ರಾಣಾ ಹಸೆಮಣೆ ಏರಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಮದುವೆಗೆ ಫಿಲ್ಮ್ ಸ್ಟುಡಿಯೋ ಆಯ್ಕೆಯ ಉಪಾಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  ಮೇಕಪ್ ಇಲ್ಲದೆ ಬಂದು ಒಂದೊಳ್ಳೆ ಸಂದೇಶ ಕೊಟ್ಟ Madhubala | Filmibeat Kannada
  ನನ್ನ ಪ್ಲಾನ್ ಎಲ್ಲರಿಗೂ ಇಷ್ಟವಾಯಿತು

  ನನ್ನ ಪ್ಲಾನ್ ಎಲ್ಲರಿಗೂ ಇಷ್ಟವಾಯಿತು

  ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆಯಾಗಲು ಫಿಲ್ಮ್ ಸ್ಟುಡಿಯೋ ಉತ್ತಮವಾದ ಜಾಗ ಎಂದು ರಾಣಾ ಹೇಳಿದ್ದಾರೆ. 'ಯಾವುದೇ ಚಿತ್ರೀಕರಣ ಇರಲಿಲ್ಲ, ಕಡಿಮೆ ಸದಸ್ಯರು ಮತ್ತು ಸಾಮಾಜಿಕ ಅಂತರ ಎಲ್ಲವನ್ನು ಪರಿಗಣಿಸಿದರೆ ಫಿಲ್ಮ್ ಸ್ಟುಡಿಯೋ ಉತ್ತಮ ಸ್ಥಳವೆನಿಸಿತು. ಹಾಗಾಗಿ ಅಲ್ಲೇ ಮದುವೆಯಾಗಲು ನಿರ್ಧರಿಸಿದೆವು. ಈ ಪ್ಲಾನ್ ಎಲ್ಲರಿಗೂ ಇಷ್ಟವಾಯಿತು. ನನ್ನ ಮನೆಯಿಂದ ಕೇವಲ 5 ನಿಮಿಷ ಅಷ್ಟೆ. 30ಕ್ಕಿಂತ ಕಡಿಮೆ ಜನ ಮದುವೆಯಲ್ಲಿ ಭಾಗಿಯಾಗಿದ್ದರು.' ಎಂದು ಹೇಳಿದ್ದಾರೆ.

  English summary
  Rana Daggubati & Miheeka's Wedding at a film studio; guests were part of the wedding through VR Technology.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X