For Quick Alerts
  ALLOW NOTIFICATIONS  
  For Daily Alerts

  ಮದುವೆಯಾಗಲಿದ್ದಾರೆ ರಾಣಾ ದಗ್ಗುಬಾಟಿ: ಯುವತಿ ಯಾರು?

  |

  ತೆಲುಗು ಸಿನಿರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ರಾಣಾ ದಗ್ಗುಬಾಟಿ ಕೊನೆಗೂ ಎಂಗೇಜ್ ಆಗಿದ್ದಾರೆ. ಹಲವು ನಟಿಯರೊಂದಿಗೆ ಹೆಸರು ಕೇಳಿಬಂದ ಕೊನೆಗೆ ಸಿನಿಮಾ ಹಿನ್ನೆಲೆ ಇಲ್ಲದ ಯುವತಿಗೆ ದಗ್ಗುಬಾಟಿ ಮಾರುಹೋಗಿದ್ದಾರೆ.

  ಇವರೆಲ್ಲಾ ಕನ್ನಡ ಸಿನಿಮಾಗಳ ಮೂಲಕವೇ ಸೂಪರ್ ಸ್ಟಾರ್ ಆದವರು | Super Star Hailed From Sandalwood

  'ಕೊನೆಗೂ ಅವಳು ಓಕೆ ಎಂದಳು' ಎಂದು ರಾಣಾ ದಗ್ಗುಬಾಟಿ ಇಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ತಮ್ಮ ಪ್ರೀತಿಯ ಹುಡುಗಿಯ ಚಿತ್ರವನ್ನೂ ಹಾಕಿದ್ದಾರೆ.

  ತಮನ್ನಾ, ಬಿಪಾಷಾ ಬಸು ಸೇರಿದಂತೆ ಹಲವು ನಟಿಯರೊಂದಿಗೆ ರಾಣಾ ದಗ್ಗುಬಾಟಿ ಹೆಸರು ಕೇಳಿಬಂದಿತ್ತು. ಆದರೆ ಅದೆಲ್ಲಕ್ಕೂ ತಿಲಾಂಜಲಿ ಇಟ್ಟು, ಮಿಹಿಕಾ ಬಜಾಜ್ ಎಂಬು ಯುವತಿಯ ಪ್ರೇಮಪಾಶಕ್ಕೆ ಸಿಲುಕಿದ್ದಾರೆ ಬಾಹುಬಲಿಯ ಬಲ್ಲಾಳ ದೇವ.

  ರಾಣಾ ದಗ್ಗುಬಾಟಿ ಮದುವೆಯಾಗುವ ಯುವತಿ ಇವರೇ

  ರಾಣಾ ದಗ್ಗುಬಾಟಿ ಮದುವೆಯಾಗುವ ಯುವತಿ ಇವರೇ

  ರಾಣಾ ದಗ್ಗುಬಾಟಿ ಎಂಗೇಜ್ ಆಗಿರುವ ಮಿಹಿಕಾ ಬಜಾಜ್ ಗೆ ಯಾವ ಸಿನಿಮಾ ಹಿನ್ನೆಲೆಯೂ ಇಲ್ಲವೆನ್ನಲಾಗುತ್ತಿದೆ. ಪ್ರಾಥಮಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ ಮಿಹಿಕಾ ಫ್ಯಾಷನ್ ಡಿಸೈನರ್ ಅಂತೆ.

  ಖ್ಯಾತ ಫ್ಯಾಶನ್ ಡಿಸೈನರ್ ಮಿಹಿಕಾ ಬಜಾಜ್

  ಖ್ಯಾತ ಫ್ಯಾಶನ್ ಡಿಸೈನರ್ ಮಿಹಿಕಾ ಬಜಾಜ್

  ಮಿಹಿಕಾ ಬಜಾಜ್, ಹೈದರಾಬಾದ್‌ ನ ಪ್ರಖ್ಯಾತ ಡಿಸೈನರ್ ಸ್ಟುಡಿಯೋ, 'ಡ್ಯು ಡ್ರಾಪ್ ಡಿಸೈನ್ ಸ್ಟುಡಿಯೋ' ದ ಸಂಸ್ಥಾಪಕಿ. ಇವರ ಫ್ಯಾಶನ್ ಡಿಸೈನ್‌ಗೆ ಭಾರಿ ಬೇಡಿಕೆ ಇದೆಯಂತೆ.

  ಪ್ರೇಯಸಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ

  ಪ್ರೇಯಸಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ

  ರಾಣಾ ದಗ್ಗುಬಾಟಿ ತಮ್ಮ ಪ್ರೇಯಸಿಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಕೂಡಲೇ ನಟ-ನಟಿಯರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಹನ್ಸಿಕಾ ಮೋಟ್ವಾನಿ, ಸಮಂತಾ, ಕಾಜಲ್ ಅಗರ್ವಾಲ್, ಎನ್‌ಟಿಆರ್ ಇನ್ನೂ ಹಲವರು ಶುಭಾಶಯಗಳನ್ನು ಕೋರಿದ್ದಾರೆ.

  ಸಿನಿಮಾ ಕುಟುಂಬದ ದೊಡ್ಡ ಹಿನ್ನೆಲೆ

  ಸಿನಿಮಾ ಕುಟುಂಬದ ದೊಡ್ಡ ಹಿನ್ನೆಲೆ

  35 ವರ್ಷ ವಯಸ್ಸಿನ ರಾಣಾ ದಗ್ಗುಬಾಟಿ, ಅಕ್ಕಿನೇನಿ ಹಾಗೂ ದಗ್ಗುಬಾಟಿ ಕುಟುಂಬವೆರಡಕ್ಕೂ ಸಂಬಂಧವುಳ್ಳವರು. ರಾಣಾ ದಗ್ಗುಬಾಟಿಗೆ ನಟ ವೆಂಕಟೇಶ್ ಮತ್ತು ನಾಗಾರ್ಜುನ ಇಬ್ಬರೂ ಚಿಕ್ಕಪ್ಪಂದಿರೇ.

  English summary
  Rana Daggubati announced he is in relationship and going to marry soon. He reveled photo of her lady love.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X