For Quick Alerts
  ALLOW NOTIFICATIONS  
  For Daily Alerts

  180 ಕೋಟಿ ಬಜೆಟ್ನಲ್ಲಿ 'ಬಾಹುಬಲಿ'ಗಿಂತ ಅದ್ಭುತ ಚಿತ್ರ ಮಾಡ್ತಾರಂತೆ ಈ ಸ್ಟಾರ್

  |

  ಬಾಹುಬಲಿ ಸಿನಿಮಾ ಬಂದ್ಮೇಲೆ ಅಂತಹದೊಂದು ಸಿನಿಮಾ ಮಾಡಬೇಕು, ಅದಕ್ಕಿಂತ ಅತ್ಯುತ್ತಮವಾದ ಚಿತ್ರವೊಂದು ಮಾಡಬೇಕು ಎಂದು ಅನೇಕ ನಿರ್ಮಾಪಕ, ನಿರ್ದೇಶಕರು ಕನಸು ಕಾಣುತ್ತಿದ್ದಾರೆ. ಬಾಹುಬಲಿ ಬಳಿಕ ಅದೇ ಹಾದಿಯಲ್ಲಿ ಕೆಲವು ಚಿತ್ರಗಳು ಹೆಜ್ಜೆ ಕೂಡ ಇಟ್ಟವು.

  'ಪ್ರಭಾಸ್-ರಾಣಾರಂತೆ ನೀವು ಆಗ್ತೀರಾ' ಎಂದಿದ್ದಕ್ಕೆ ಯಶ್ ಏನಂದ್ರು.?'ಪ್ರಭಾಸ್-ರಾಣಾರಂತೆ ನೀವು ಆಗ್ತೀರಾ' ಎಂದಿದ್ದಕ್ಕೆ ಯಶ್ ಏನಂದ್ರು.?

  ಈಗ ತೆಲುಗಿನ ಖ್ಯಾತ ನಟ ಬಾಹುಬಲಿಗಿಂತ ಉತ್ತಮವಾದ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ. ಅದಕ್ಕಾಗಿ ಎಲ್ಲ ತಯಾರಿ ನಡೆಸಿದ್ದು, ಸುಮಾರು 180 ಕೋಟಿ ಬಜೆಟ್ ಎಂದು ಹೇಳಲಾಗಿದೆ.

  ಅಷ್ಟಕ್ಕೂ, ಆ ಚಿತ್ರ ಯಾವುದು? ಯಾರು ಈ ಸಿನಿಮಾ ಮಾಡುವುದು? ಎಂಬ ಮತ್ತಷ್ಟ ವಿವರಗಳು ಮುಂದೆ ಓದಿ...

  ರಾಣಾ ಕನಸಿನ ಪ್ರಾಜೆಕ್ಟ್

  ರಾಣಾ ಕನಸಿನ ಪ್ರಾಜೆಕ್ಟ್

  ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳದೇವನಾಗಿ ನಟಿಸಿ ಖ್ಯಾತಿ ಗಳಿಸಿಕೊಂಡ ರಾಣಾ ದಗ್ಗುಬಾಟಿ ಈಗ 180 ಕೋಟಿ ವೆಚ್ಚದಲ್ಲಿ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಈ ಚಿತ್ರವನ್ನ ಬಾಹುಬಲಿಗಿಂತ ಅದ್ಭುತವಾಗಿ ಮಾಡಲು ಪ್ಲಾನ್ ಮಾಡಿದ್ದಾರಂತೆ.

  'ಬಾಹುಬಲಿ'ಗಿಂತ ದೊಡ್ಡ ಸಿನಿಮಾದಲ್ಲಿ ಕಂಗನಾ, ಡೈರೆಕ್ಟರ್ ಅವರೇ.!'ಬಾಹುಬಲಿ'ಗಿಂತ ದೊಡ್ಡ ಸಿನಿಮಾದಲ್ಲಿ ಕಂಗನಾ, ಡೈರೆಕ್ಟರ್ ಅವರೇ.!

  ಹಿರಣ್ಯ ಕಶಿಪು ಸಿನಿಮಾ

  ಹಿರಣ್ಯ ಕಶಿಪು ಸಿನಿಮಾ

  ಹಿರಣ್ಯ ಕಶಿಪು ಕುರಿತು ಸಿನಿಮಾ ಮಾಡಲು ಚಿಂತಿಸಿದ್ದು, ಎರಡು ವರ್ಷದ ಹಿಂದೆಯೇ ಈ ಚಿತ್ರವನ್ನ ಘೋಷಿಸಿದ್ದಾರೆ. ಈ ಚಿತ್ರವನ್ನು ರಾಣಾ ಅವರ ತಂದೆ ಸುರೇಶ್ ಬಾಬು ನಿರ್ದೇಶನ ಮಾಡಲಿದ್ದಾರಂತೆ.

  ತಡವಾಗ್ತಿರುವುದೇಕೆ?

  ತಡವಾಗ್ತಿರುವುದೇಕೆ?

  ಎರಡು ವರ್ಷದ ಹಿಂದೆ ಘೋಷಿಸಿದ್ದರೂ ಇನ್ನು ಯಾಕೆ ಸಿನಿಮಾ ಆರಂಭವಾಗಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ರಾಣಾ ಅವರ ಅನಾರೋಗ್ಯದ ಕಾರಣ ಈ ಪ್ರಾಜೆಕ್ಟ್ ಗೆ ಇನ್ನು ಚಾಲನೆ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಸ್ವತಃ ರಾಣಾ ಮಾತನಾಡಿದ್ದು, ಬೇರೆಯದ್ದೇ ಕಾರಣ ನೀಡಿದ್ದಾರೆ.

  ಕೆಜಿಎಫ್, ಬಾಹುಬಲಿ ಗಳಿಕೆ ಬಗ್ಗೆ ಆಸಕ್ತಿಕರ ವಿಷಯ ಬಿಚ್ಚಿಟ್ಟ ಸುದೀಪ್ಕೆಜಿಎಫ್, ಬಾಹುಬಲಿ ಗಳಿಕೆ ಬಗ್ಗೆ ಆಸಕ್ತಿಕರ ವಿಷಯ ಬಿಚ್ಚಿಟ್ಟ ಸುದೀಪ್

  3ಡಿ ಮೇಕಿಂಗ್ ಸಿನಿಮಾ

  3ಡಿ ಮೇಕಿಂಗ್ ಸಿನಿಮಾ

  ''ತಡ ಆಗ್ತಿಲ್ಲ. ಎಲ್ಲ ತಯಾರಿ ನಡೆಯುತ್ತಿದೆ. ಆಧುನಿಕ ತಂತ್ರಜ್ಙಾನವನ್ನ ಬಳಸಲಾಗುತ್ತಿದ್ದು, ಒಳ್ಳೆಯ ಗುಣಮಟ್ಟದ ಚಿತ್ರ ನೀಡಲು ಕಾಯುತ್ತಿದ್ದೇವೆ. 3ಡಿ ಪ್ಲಾನ್ ಮಾಡುತ್ತಿದ್ದೇವೆ. ಲಾಸ್ ಏಂಜಲೀಸ್ ಕಂಪನಿ ಜೊತೆ ಕೈಜೋಡಿಸುತ್ತಿದ್ದೇವೆ. ಎಲ್ಲ ಅಂದುಕೊಂಡಂತೆ ಆದರೆ ಇನ್ನು 8 ತಿಂಗಳ ಪೂರ್ವ ತಯಾರಿ ಬೇಕಿದೆ'' ಎಂದು ರಾಣಾ ಹೇಳಿದ್ದಾರೆ.

  ಬಾಹುಬಲಿ ಚಿತ್ರಕ್ಕಿಂತ ಉತ್ತಮ

  ಬಾಹುಬಲಿ ಚಿತ್ರಕ್ಕಿಂತ ಉತ್ತಮ

  ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಒಂದು ಅದ್ಭುತ. ತಾಂತ್ರಿಕವಾಗಿ, ಕಲಾವಿದರು, ನಿರ್ದೇಶಕ ಎಲ್ಲವೂ ಚೆನ್ನಾಗಿತ್ತು. ಅಂತಹ ಚಿತ್ರವನ್ನ ನೋಡಿದ್ಮೇಲೆ ಅದಕ್ಕಿಂತ ಉತ್ತಮವಾಗಿ ಸಿನಿಮಾ ಪ್ರೆಸೆಂಟ್ ಮಾಡಬೇಕು ಎನ್ನುವುದು ನಮ್ಮ ಕನಸು'' ಎಂದು ರಾಣಾ ಅಭಿಪ್ರಾಯ ಪಟ್ಟಿದ್ದಾರೆ.

  English summary
  Telugu actor Rana Daggubati planning to do 180 crore budget movie better then Baahubali.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X