For Quick Alerts
  ALLOW NOTIFICATIONS  
  For Daily Alerts

  ತೆಲುಗು ನಟ ರಾಣಾ ಪತ್ನಿ ಮಿಹಿಕಾ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಎಂಟ್ರಿ!

  |

  'ಬಾಹುಬಲಿ' ಚಿತ್ರದ ನಂತರ ರಾಣಾ ದಗ್ಗುಬಾಟಿ ಕ್ರೇಜ್ ಸಹ ಹೆಚ್ಚಾಯ್ತು. ರಾಣಾ ಮದುವೆ, ಪ್ರೀತಿ, ಗರ್ಲ್‌ ಫ್ರೆಂಡ್ ವಿಚಾರವಾಗಿಯೂ ಬಹಳ ಸುದ್ದಿಯಾದರು. ಅಂತಿಮವಾಗಿ ಆಗಸ್ಟ್ 8, 2020 ರಂದು ಮಿಹಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  ಈಗಾಗಲೇ ತಿಳಿದಿರುವಂತೆ ಮಿಹಿಕಾಗೂ ಚಿತ್ರರಂಗಕ್ಕೂ ಯಾವ ನಂಟು ಇಲ್ಲ. ಆದರೆ, ರಾಣಾ ಜೊತೆ ವಿವಾಹ ಆದ ಬಳಿಕ ಟಾಲಿವುಡ್ ಇಂಡಸ್ಟ್ರಿಯಲ್ಲಿ ಹೊಸ ಸುದ್ದಿ ಚರ್ಚೆಯಲ್ಲಿದೆ. ಮಿಹಿಕಾ ರಾಣಾ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ, ಹೀರೋಯಿನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ವರದಿಯಾಗಿದೆ. ಇದು ಸಹಜವಾಗಿ ಥ್ರಿಲ್ ಹೆಚ್ಚಿಸಿದೆ. ಈ ಸುದ್ದಿ ಬಗ್ಗೆ ರಾಣಾ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

  ರಾಣಾ ದಗ್ಗುಬಾಟಿ ಭಾವಿ ಪತ್ನಿ ಮಿಹಿಕಾ ಬಜಾಜ್ ಯಾರು? ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆರಾಣಾ ದಗ್ಗುಬಾಟಿ ಭಾವಿ ಪತ್ನಿ ಮಿಹಿಕಾ ಬಜಾಜ್ ಯಾರು? ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ

  ರಾಣಾ ಜೋಡಿಯಾಗಿ ಮಿಹಿಕಾ?

  ರಾಣಾ ಜೋಡಿಯಾಗಿ ಮಿಹಿಕಾ?

  ರಾಣಾ ದಗ್ಗುಬಾಟಿ ಪತ್ನಿ ಮಿಹಿಕಾ ಸಹ ಸಿನಿ ಜಗತ್ತಿಗೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ರಾಣಾ ಚಿತ್ರದಲ್ಲೇ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ವಿಷಯ ಕೇಳಿ ಟಾಲಿವುಡ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ನಿಜ ಜೀವನದ ಜೋಡಿ ತೆರೆಮೇಲೂ ಜೋಡಿಯಾಗ್ತಾರಾ ಎಂದು ಖುಷಿಯಾಗಿದ್ದಾರೆ.

  ಸ್ಪಷ್ಟನೆ ನೀಡಿದ ರಾಣಾ

  ಸ್ಪಷ್ಟನೆ ನೀಡಿದ ರಾಣಾ

  ಮಿಹಿಕಾ ಚಿತ್ರರಂಗ ಪ್ರವೇಶದ ಕುರಿತು ರಾಣಾ ದಗ್ಗುಬಾಟಿ ಸ್ಪಷ್ಟನೆ ನೀಡಿದ್ದಾರೆ. ''ನಿಜ ಹೇಳಬೇಕು ಅಂದ್ರೆ ಆಕೆಗೆ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಎಂಬ ಆಸಕ್ತಿಯೇ ಇಲ್ಲ. ನಟನೆ ಮೇಲೆ ಸ್ವಲ್ಪವೂ ಆಕೆಗೆ ಆಸಕ್ತಿ ಇಲ್ಲ'' ಎಂದು ರಾಣಾ ವಂದತಿಗೆ ಬ್ರೇಕ್ ಹಾಕಿದ್ದಾರೆ. ''ಆಕೆಯ ಸಂಪೂರ್ಣ ಗಮನ ಇವೆಂಟ್ ಮ್ಯಾನೇಜ್‌ಮೆಂಟ್ ಕಡೆ ಇದೆ'' ಎಂದು ರಾಣಾ ತಿಳಿಸಿದ್ದಾರೆ.

  ಮಿಹಿಕಾ ಬಜಾರ್ ಕುರಿತು

  ಮಿಹಿಕಾ ಬಜಾರ್ ಕುರಿತು

  ಮಿಹಿಕಾ ಬಜಾಜ್ ವೃತ್ತಿಯಲ್ಲಿ ಉದ್ಯಮಿ. ಲಂಡನ್ ನ ಚೆಲ್ಸಿಯಾ ಆರ್ಟ್ ಅಂಡ್ ಡಿಸೈನ್ ವಿಶ್ವವಿದ್ಯಾನಿಲಯದಲ್ಲಿ ಈವೆಂಟ್ ಮತ್ತು ವೆಡ್ಡಿಂಗ್ ಪ್ಲಾನ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆನಂತರ ಮಿಹಿಕಾ ಮುಂಬೈನ ಆರ್ಕಿಟ್ರೆಕ್ಟರ್ ಸ್ಕೂಲ್ ನಲ್ಲಿ ಇಂಟಿರಿಯರ್ ಡಿಸೈನ್ ನಲ್ಲಿ ಡಿಪ್ಲೊಮ ಕೋರ್ಸ್ ಸಹ ಮಾಡಿದ್ದಾರೆ.

  ಈವೆಂಟ್ ಮ್ಯಾನೇಜರ್ ಆಗಿ ಕೆಲಸ

  ಈವೆಂಟ್ ಮ್ಯಾನೇಜರ್ ಆಗಿ ಕೆಲಸ

  ಇಂಟಿರಿಯರ್ ಡೆಸೈನ್ ಆಗಿ ಕೆಲಸ ಮಾಡುತ್ತಿದ್ದ ಮಿಹಿಕಾ ನಂತರ ತನ್ನದೆ ಆದ ಸ್ವಂತ ಕಂಪನಿಯನ್ನು ಪ್ರಾರಂಭಿಸಿದ್ದಾರೆ. 2017ರಲ್ಲಿ ಡ್ಯೂ ಡ್ರಾಪ್ ಡಿಸೈನ್ ಎನ್ನುವ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ಸ್ಥಾಪಿಸಿದ್ದಾರೆ. ಭಾರತದ ದೊಡ್ಡ ದೊಡ್ಡ ಮದುವೆ ಸಮಾರಂಭದ ಈವೆಂಟ್ ಗಳನ್ನು ಈ ಕಂಪನಿ ಮಾಡುತ್ತಿದೆ. ಚಿತ್ರರಂಗದ ಹಿನ್ನಲೆ ಇಲ್ಲದಿದ್ದರು, ಭಾರತೀಯ ಚಿತ್ರರಂಗದ ಖ್ಯಾತ ಸ್ಟಾರ್ಸ್ ಗಳ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ.

  ಜ್ಯುವೆಲ್ಲರಿ ಉದ್ಯಮಿ ಪುತ್ರಿ

  ಜ್ಯುವೆಲ್ಲರಿ ಉದ್ಯಮಿ ಪುತ್ರಿ

  ಮಿಹಿಕಾ ಬಜಾಜ್ ಖ್ಯಾತ ಜ್ಯುವೆಲ್ಲರಿ ಡೆಸೈನರ್ ಮತ್ತು ಉದ್ಯಮಿ ಬಂಟಿ ಬಜಾಜ್ ಮಗಳು. ಅವರು ಪ್ರಸಿದ್ಧ ಆಭರಣ ಮಳಿಗೆ ಕ್ರಾಸಲಾ ಮಾಲಿಕರಾಗಿದ್ದಾರೆ. ಸಹೋದರ ಸಮರ್ತ್, ಕ್ರಾಸಲಾ ಮಳಿಗೆಯನ್ನು ನೋಡಿಕೊಳ್ಳುತ್ತಿದ್ದಾರೆ. ಬಂಟಿ ಮೊದಲು ಈವೆಂಟ್ ಮ್ಯಾನೇಜ್ಮೆಂಟ್ ಪ್ರಾರಂಭಿಸಿ ದೊಡ್ಡ ಮದುವೆ ಸಮಾರಂಭಗಳ ಈವೆಂಟ್ ನಡೆಸಿಕೊಡುತ್ತಿದ್ದರು. ಆ ನಂತರ ಜ್ಯುವೆಲ್ಲರಿ ಡಿಸೈನರ್ ಆಗಿ ಖ್ಯಾತಿಗಳಿಸಿದ್ದಾರೆ.

  English summary
  Latest buzz in tollywood, Rana daggubati wife Miheeka will enter to Film industry. but, rana refused this news. my wife not interested in films said rana

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X