For Quick Alerts
  ALLOW NOTIFICATIONS  
  For Daily Alerts

  ರಾಣಾ ದಗ್ಗುಬಾಟಿ ಹನಿಮೂನ್‌ಗಾಗಿ ಈ ಸ್ಥಳ ಆಯ್ಕೆ ಮಾಡಿದ್ದರು!

  |

  ತೆಲುಗು ನಟ ರಾಣಾ ದಗ್ಗುಬಾಟಿ ಆಗಸ್ಟ್ 8 ರಂದು ಹೈದರಾಬಾದ್‌ನಲ್ಲಿ ಮಿಹೀಕಾ ಬಜಾಜ್ ಅವರನ್ನು ವಿವಾಹವಾದರು. ರಾಮನಾಯ್ಡು ಸ್ಟುಡಿಯೋದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕೇವಲ 30 ಅತಿಥಿಗಳು ಮಾತ್ರ ಭಾಗವಹಿಸಿದ್ದರು. ಕುಟುಂಬಸ್ಥರು, ಆಪ್ತರು ಮಾತ್ರ ರಾಣಾ ಮದುವೆಗೆ ಹೋಗಿದ್ದರು.

  Ayogya ಸಿನಿಮಾದಲ್ಲಿ Satish Neenasam ಕೆಂಡದ ಮೇಲೆ ಓಡಿದ್ದು ಹೇಗೆ ನೋಡಿ|Ayogya song Making| Oneindia Kannada

  ಬಹಳ ಅದ್ಧೂರಿಯಾಗಿ ಮದುವೆಯಾಗಬೇಕು ಎಂದು ಪ್ಲಾನ್ ಮಾಡಿದ್ದ ರಾಣಾ ಆಸೆಗೆ ಕೊರೊನಾ ವೈರಸ್ ಬ್ರೇಕ್ ಹಾಕಿತ್ತು. ಆದರೂ, ಸ್ಟುಡಿಯೋದಲ್ಲಿ ವಿಜೃಂಭಣೆಯಿಂದಲೇ ರಾಣಾ ವಿವಾಹ ಜರುಗಿತು.

  ಫೋಟೊಗಳು: ರಾಣಾ ದಗ್ಗುಬಾಟಿ-ಮಿಹೀಕಾ ಬಜಾಜ್ ಮದುವೆ ಸಂಭ್ರಮಫೋಟೊಗಳು: ರಾಣಾ ದಗ್ಗುಬಾಟಿ-ಮಿಹೀಕಾ ಬಜಾಜ್ ಮದುವೆ ಸಂಭ್ರಮ

  ಲಾಕ್‌ಡೌನ್‌ ಮುಗಿದಿತ್ತು, ಪ್ರವಾಸ ಹಾಗೂ ವಿದೇಶಕ್ಕೂ ಹೋಗುವ ಅನುಮತಿ ಸಿಕ್ಕಿದೆ. ಹಾಗಾಗಿ, ಹನಿಮೂನ್‌ಗೆ ರಾಣಾ ದಂಪತಿ ಎಲ್ಲಿ ಹೋಗಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿತ್ತು. ಅದಕ್ಕೆ ಉತ್ತರವನ್ನು ಸ್ವತಃ ರಾಣಾ ನೀಡಿದ್ದಾರೆ.

  ಎಲ್ಲ ಅಂದುಕೊಂಡಂತೆ ಆಗಿದ್ದರೆ ಬಾಹುಬಲಿ ಖ್ಯಾತಿಯ ನಟ ತನ್ನ ಹನಿಮೂನ್‌ಗಾಗಿ ನೆದರ್‌ಲ್ಯಾಂಡ್‌ ರಾಜಧಾನಿ ಆಮ್ಸ್ಟರ್‌ಡ್ಯಾಮ್ (Amsterdam) ತೆರಳಲು ನಿರ್ಧರಿಸಿದ್ದರು. ಆದರೆ, ಕೊರೊನಾ ಭೀತಿಯಿರುವುದರಿಂದ ಆ ಪ್ಲಾನ್ ಕೈಬಿಟ್ಟರಂತೆ.

  ಅಂದ್ಹಾಗೆ, ಈ ವಿಚಾರವನ್ನು ನೇಹಾ ಧೂಪಿಯಾ ಅವರ ಟಿವಿ ಶೋನಲ್ಲಿ ಬಹಿರಂಗಪಡಿಸಿದ್ದಾರೆ. ನೇಹಾ ಧೂಪಿಯಾ ನಡೆಸಿಕೊಡುವ 'ನೋ ಫಿಲ್ಟರ್ ನೇಹಾ' ಸೀಸನ್ 5ರಲ್ಲಿ ರಾಣಾ ಪಾಲ್ಗೊಂಡಿದ್ದು, ಅದರ ಪ್ರೋಮೋ ಬಿಡುಗಡೆಯಾಗಿದೆ. ಈ ಕಾರ್ಯಕ್ರಮದಲ್ಲಿ ನೇಹಾ, ರಾಣಾ ಹನಿಮೂನ್ ಬಗ್ಗೆ ಕೇಳಿದ್ದಾರೆ.

  ಲಾಕ್‌ಡೌನ್ ಇಲ್ಲ ಅಂದಿದ್ದರೆ ಹನಿಮೂನ್‌ಗೆ ಎಲ್ಲಿ ಹೋಗ್ತಿದ್ರಿ? ಎಂದು ನೇಹಾ ಕೇಳಿದ್ದಕ್ಕೆ, ''ಲಾಕ್‌ಡೌನ್ ಇಲ್ಲ ಅಂದಿದ್ದರೆ ನಾನು ಆಮ್ಸ್ಟರ್‌ಡ್ಯಾಮ್‌ನಲ್ಲಿ ಇರ್ತಿದ್ದೆ' ಎಂದಿದ್ದಾರೆ. ಅದಕ್ಕೆ, ನೇಹಾ ''ಇದು ಒಳ್ಳೆಯ ಸ್ಥಳ'' ಎಂದಿದ್ದಾರೆ.

  ಈ ಕಾರ್ಯಕ್ರಮ ಇನ್ನೂ ಪ್ರಸಾರವಾಗಿಲ್ಲ. ಶೀಘ್ರದಲ್ಲಿ ಈ ಶೋ ಟಿವಿಯಲ್ಲಿ ಪ್ರಸಾರವಾಗಲಿದೆ. ಇನ್ನುಳಿದಂತೆ ಅರಣ್ಯಂ ಎಂಬ ಚಿತ್ರದಲ್ಲಿ ರಾಣಾ ನಟಿಸುತ್ತಿದ್ದಾರೆ. ಅದರ ಜೊತೆಗೆ ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ಹೊಸ ಸಿನಿಮಾಗಳನ್ನು ಮಾಡುತ್ತಿದ್ದಾರೆ.

  English summary
  Telugu actor Rana Daggubati wishes to go to Amsterdam with wife Miheeka Bajaj for Honeymoon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X