For Quick Alerts
  ALLOW NOTIFICATIONS  
  For Daily Alerts

  ತೆಲುಗು ಹಾಸ್ಯನಟ, ನಾಯಕ ನಟನ ಮೇಲೆ ಅತ್ಯಾಚಾರ ಆರೋಪ

  |

  ತೆಲುಗು ಹಾಸ್ಯನಟ ಕೃಷ್ಣುಡು ಹಾಗೂ ಟಿವಿ ನಿರೂಪಕ ಹಾಗೂ ನಾಯಕ ನಟ ಪ್ರದೀಪ್ ಮಾಚಿರಾಜು ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ.

  ಅದ್ದೂರಿಯಾಗಿ ನಡೀತು ಯಶ್ ಮಗನ ನಾಮಕರಣ | Filmibeat Kannada

  ತಿಂಗಳ ಹಿಂದೆ ಯುವತಿಯೊಬ್ಬಾಕೆ ಬರೋಬ್ಬರಿ 140 ಜನರ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದರು. ಆ ದೂರಿನಲ್ಲಿ 'ವಿನಾಯಕುಡು' ಸಿನಿಮಾ ನಾಯಕ ಕೃಷ್ಣುಡು ಹಾಗೂ 'ಮುಪ್ಪೈ ರೋಜುಲೋ ಪ್ರೇಮಿಂಚಡಂ ಎಲಾ' ಸಿನಿಮಾದ ನಾಯಕ ಹಾಗೂ ಪ್ರಸಿದ್ಧ ಟಿವಿ ನಿರೂಪಕ ಪ್ರದೀಪ್ ಮಾಚಿರಾಜು ಹೆಸರು ಸಹ ನಮೂದಾಗಿದೆ.

  ಅತ್ಯಾಚಾರದ ಬೆದರಿಕೆ ಹಾಕಿದ ವ್ಯಕ್ತಿ: ನಟಿ ಖುಷ್ಬೂ ಮಾಡಿದ್ದೇನು ಗೊತ್ತೇ?

  ಇದೇ ತಿಂಗಳ ಪ್ರಾರಂಭದಲ್ಲಿ ಮರಿಯಾಲಗುಡದ ಯುವತಿಯೊಬ್ಬಾಕೆ ವಿವಿಧ ಕ್ಷೇತ್ರಗಳ 140 ಮಂದಿಯ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರದ ಆರೋಪ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

  ಒಮ್ಮೆ ನನಗೆ ಕರೆ ಮಾಡಿದ್ದಳು: ಕೃಷ್ಣುಡು

  ಒಮ್ಮೆ ನನಗೆ ಕರೆ ಮಾಡಿದ್ದಳು: ಕೃಷ್ಣುಡು

  ಈ ಬಗ್ಗೆ ಮಾತನಾಡಿರುವ ನಟ ಕೃಷ್ಣುಡು, 'ನನಗೆ ಒಮ್ಮೆ ಆಕೆಯ ಮೊಬೈಲ್‌ನಿಂದ ಕರೆ ಬಂದಿತ್ತು, ಅಂದೇ ಆಕೆಯ ಮಾತಿನ ಬಗ್ಗೆ ಅನುಮಾನ ಬಂದು, ಸ್ಕ್ರೀನ್ ಶಾಟ್ ಇಟ್ಟುಕೊಂಡಿದ್ದೆ. ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದೆ' ಎಂದಿದ್ದಾರೆ.

  ಪ್ರದೀಪ್ ನಂಬರ್ ಸಹ ನನ್ನ ಬಳಿ ಇಲ್ಲ: ಕೃಷ್ಣುಡು

  ಪ್ರದೀಪ್ ನಂಬರ್ ಸಹ ನನ್ನ ಬಳಿ ಇಲ್ಲ: ಕೃಷ್ಣುಡು

  'ನಾನು ಆಕೆಯನ್ನು ನಿರೂಪಕ, ನಟ, ಪ್ರದೀಪ್‌ ಗೆ ಪರಿಚಯ ಮಾಡಿಸಿದ್ದೇನೆ ಎನ್ನಲಾಗುತ್ತಿದೆ. ಆದರೆ ನನ್ನ ಬಳಿ ಪ್ರದೀಪ್ ನಂಬರ್ ಸಹ ಇಲ್ಲ. ನಾನು ಆ ಯುವತಿಯನ್ನು ಒಮ್ಮೆಯೂ ಭೇಟಿಯಾಗಿಲ್ಲ. ಆ ಯುವತಿಯನ್ನು ಮುಖತಃ ನೋಡಿಯೇ ಇಲ್ಲ' ಎಂದಿದ್ದಾರೆ ಕೃಷ್ಣುಡು.

  ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಸಹಾಯಕ ನಿರ್ದೇಶಕ ವಿರುದ್ಧ ದೂರು

  140 ಮಂದಿಯಿಂದ 5000 ಬಾರಿ ಅತ್ಯಾಚಾರ

  140 ಮಂದಿಯಿಂದ 5000 ಬಾರಿ ಅತ್ಯಾಚಾರ

  ಯುವತಿ ನೀಡಿದ್ದ ದೂರಿನಂತೆ ಕೆಲವು ವರ್ಷಗಳ ಹಿಂದೆ ಕೃಷ್ಣುಡು ಹಾಗೂ ಪ್ರದೀಪ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರಂತೆ. 140 ಮಂದಿ ವಿವಿಧ ಸಮಯದಲ್ಲಿ ನನ್ನ ಮೇಲೆ 5000 ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು ಆಕೆ ದೂರು ನೀಡಿದ್ದಾರೆ.

  ಎಫ್‌ಐಆರ್ ದಾಖಲಾಗಿದೆ

  ಎಫ್‌ಐಆರ್ ದಾಖಲಾಗಿದೆ

  ವಿವಿಧ ಕ್ಷೇತ್ರದ ವ್ಯಕ್ತಿಗಳ ಮೇಲೆ ದೂರು ನೀಡಿರುವ ಯುವತಿ, ನಟರು, ಪತ್ರಕರ್ತರು, ವಕೀಲರು, ವೈದ್ಯರು, ವಿದ್ಯಾರ್ಥಿ ನಾಯಕರು, ರಾಜಕಾರಣಿಗಳ ಪಟ್ಟಿಯನ್ನೇ ಪೊಲೀಸರಿಗೆ ನೀಡಿದ್ದಾರೆ. ಎಫ್‌ಐಆರ್ ದಾಖಲಾಗಿದ್ದು ವಿಚಾರಣೆ ಜಾರಿಯಲ್ಲಿದೆ.

  English summary
  Rape alligations on Telugu comedy actor Krishnudu and TV anchor Pradeep Machiraju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X