For Quick Alerts
  ALLOW NOTIFICATIONS  
  For Daily Alerts

  ಸಾಯಿ ಪಲ್ಲವಿ ರಿಜೆಕ್ಟ್ ಮಾಡಿದ ಚಿತ್ರಕ್ಕೆ ರಶ್ಮಿಕಾ ನಾಯಕಿ: ಯಾವ ಸಿನಿಮಾ?

  |

  ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಇದೀಗ ಮತ್ತೊಂದು ತೆಲುಗು ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ತೆಲುಗು ನಟ ಶರ್ವಾನಂದ್ ಅಭಿನಯದ ಹೊಸ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

  ಶರ್ವಾನಂದ್ ನಟನೆಯ ಹೊಸ ಸಿನಿಮಾದ ಹೆಸರು ಅದವಲ್ಲು ಮೇಕು. ಈ ಚಿತ್ರದಲ್ಲಿ ಪ್ರೇಮಂ ಸುಂದರಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೆ ಸಾಯಿ ಅಭಿನಯಿಸುವುದು ಬಹುತೇಕ ಖಚಿತವಾಗಿತ್ತು. ಆದರೀಗ ಚಿತ್ರದಲ್ಲಿ ದಿಢೀರ್ ಬದಲಾವಣೆಯಾಗಿದೆ. ನಟಿ ಸಾಯಿ ಪಲ್ಲವಿ ಸಿನಿಮಾದಿಂದ ಹೊರಹೋಗಿದ್ದಾರೆ. ಸಾಯಿ ಪಲ್ಲವಿ ಜಾಗಕ್ಕೆ ನಟಿ ರಶ್ಮಿಕಾ ಮಂದಣ್ಣರನ್ನು ಆಯ್ಕೆ ಮಾಡಿ ಅಚ್ಚರಿ ಮೂಡಿಸಿದೆ ಸಿನಿಮಾತಂಡ.

  ಪುಟ್ಟ ಮಕ್ಕಳಿಗೆ ಮೆಹಂದಿ ಹಾಕಿ ಸಂಭ್ರಮಿಸಿದ ಸಾಯಿ ಪಲ್ಲವಿ: ಸಮಂತಾ ಹೇಳಿದ್ದೇನು?

  ಸಾಯಿ ಪಲ್ಲವಿ ಮತ್ತು ಶರ್ವಾನಂದ್ ಈ ಮೊದಲು ಪಡಿ ಪಡಿ ಲೇಚೆ ಮನಸು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇಬ್ಬರ ಕೆಮಿಸ್ಟ್ರಿ ಚಿತ್ರಪ್ರೇಕ್ಷಕರ ಮನಗೆದ್ದಿತ್ತು. ಇದೀಗ ಮತ್ತೊಮ್ಮೆ ಇಬ್ಬರನ್ನು ತೆರೆಮೇಲೆ ನೋಡಲು ಕಾತರರಾಗಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

  ರಶ್ಮಿಕಾ ಮತ್ತು ಶರ್ವಾನಂದ್ ಚಿತ್ರ ದಸರಾ ಪ್ರಯುಕ್ತ ಅಕ್ಟೋಬರ್ 25ರಂದು ಅಧಿಕೃತವಾಗಿ ಲಾಂಚ್ ಆಗುತ್ತಿದೆ. ಚಿರುಪತಿಯಲ್ಲಿ ಪೂಜೆ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ಸಿಗಲಿದೆ. ಶರ್ವಾನಂದ್ ಸದ್ಯ ಚಿತ್ರದ ಚಿತ್ರೀಕರಣಕ್ಕೆಂದು ತಿರುಪತಿಯಲ್ಲಿದ್ದಾರೆ. ಅಲ್ಲಿಂದನೆ ಪೂಜಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

  Arjun Sarja delighted with Happy News : 20 ವರ್ಷ ಆದ್ಮೇಲೆ ಚಿರು ಮಗನನ್ನು ನಾನೇ ಲಾಂಚ್ ಮಾಡ್ತೀನಿ

  ಸದ್ಯ ರಶ್ಮಿಕಾ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶರ್ವಾನಂದ್ ಸಹ ಬೇರೆ ಪ್ರೋಜೆಕ್ಟ್ ನಲ್ಲಿ ನಿರತರಾಗಿದ್ದಾರೆ. ಹಾಗಾಗಿ ಮುಂದಿನ ವರ್ಷದಿಂದ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

  English summary
  Actress Rashmika Mandanna replaces Sai Pallavi in Sharwanand next film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X