Don't Miss!
- News
Bengaluru traffic police: ನೆಟ್ಟಿಗರ ಮನಗೆದ್ದ ಬೆಂಗಳೂರು ಟ್ರಾಫಿಕ್ ಪೊಲೀಸರ ನೃತ್ಯ
- Finance
Adani Stocks: ಅದಾನಿ ಸಂಸ್ಥೆ ಮೌಲ್ಯ ಅರ್ಧದಷ್ಟು ಇಳಿಕೆ, 108 ಬಿಲಿಯನ್ ಡಾಲರ್ ನಷ್ಟ
- Technology
ನಿಮ್ಮ ರಕ್ಷಣೆಗೆ ನೆರವಾಗಲಿವೆ ಈ ಗ್ಯಾಜೆಟ್ಗಳು; ಮಹಿಳೆಯರಿಗಂತೂ ಅಗತ್ಯ!
- Automobiles
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- Sports
ಸ್ಪಿನ್ನರ್ಗಳ ವಿರುದ್ಧ ಪರದಾಡುವ ಕೊಹ್ಲಿಗೆ ಆಸಿಸ್ ಸರಣಿಗೂ ಮುನ್ನ ಪಠಾಣ್ 'ಆಕ್ರಮಣಕಾರಿ' ಸಲಹೆ!
- Lifestyle
ಗಂಡಾಗಿ ಬದಲಾಗಿದ್ದ ಮಂಗಳಮುಖಿ ಜಿಹಾದ್ ಈಗ ಗರ್ಭಿಣಿ: 8 ತಿಂಗಳ ಗರ್ಭಿಣಿ ಈ ಜಿಹಾದ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022ರಲ್ಲಿ ಗೆಲುವಿಗಿಂತ ಹೆಚ್ಚು ಸೋಲನ್ನೇ ಕಂಡ ಕರ್ನಾಟಕ ಮೂಲದ ತೆಲುಗು ನಟಿಯರು!
ಕೃತಿ ಶೆಟ್ಟಿ, ಪೂಜಾ ಹೆಗ್ಡೆ ಹಾಗೂ ರಶ್ಮಿಕಾ ಮಂದಣ್ಣ ಸದ್ಯ ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆ ಹೊಂದಿರುವ ನಟಿಯರಾಗಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ಈ ನಟಿಯರಿಗೆ ಟಾಲಿವುಡ್ ಮಾತ್ರವಲ್ಲದೇ ಇತೆರೆ ಚಿತ್ರರಂಗಗಳಿಂದಲೂ ಸಹ ಸಾಕಷ್ಟು ಆಫರ್‌ಗಳು ಹರಸಿ ಬರುತ್ತಿವೆ. ಇನ್ನು ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ ಈಗಾಗಲೇ ತೆಲುಗಿನ ಬಹುತೇಕ ಎಲ್ಲಾ ಪ್ರಸಕ್ತ ಸ್ಟಾರ್ ನಟರ ಜತೆ ನಟಿಸಿದ್ದು, ಕೃತಿ ಶೆಟ್ಟಿ ಕೂಡ ಸೆನ್ಸೇಷನ್ ಸೃಷ್ಟಿಸಿದ್ದಾರೆ.
ಇನ್ನು ಈ ಮೂವರೂ ನಟಿಯರಿಗೂ ನಮ್ಮ ಕರ್ನಾಟಕಕ್ಕೂ ನಂಟಿದೆ. ನಟಿ ರಶ್ಮಿಕಾ ಮಂದಣ್ಣ ಮೂಲತಃ ವಿರಾಜಪೇಟೆಯವರಾಗಿದ್ದು, ಮೊದಲಿಗೆ ಕನ್ನಡ ಚಿತ್ರರಂಗದಲ್ಲಿ ಮಿಂಚಿ ಸದ್ಯ ತೆಲುಗಿನಲ್ಲಿ ಸಕ್ರಿಯ ನಟಿಯಾಗಿದ್ದಾರೆ ಹಾಗೂ ಈ ವರ್ಷ ಬಾಲಿವುಡ್‌ಗೂ ಸಹ ಕಾಲಿಟ್ಟಿದ್ದಾರೆ. ಅತ್ತ ಪೂಜಾ ಹೆಗ್ಡೆ ಹಾಗೂ ಕೃತಿ ಶೆಟ್ಟಿ ಇಬ್ಬರೂ ಸಹ ಮಂಗಳೂರು ಬೆಡಗಿಯರು. ಕನ್ನಡದಲ್ಲಿ ಯಾವ ಚಿತ್ರಗಳಲ್ಲೂ ನಟಿಸದಿದ್ದರಲೂ ಸಹ ತೆಲುಗಿನಲ್ಲಿ ಭರ್ಜರಿ ಹೆಸರನ್ನೇ ಸಂಪಾದಿಸಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ ದೊಡ್ಡ ಹಿಟ್ ಚಿತ್ರಗಳನ್ನು ನೀಡಿದ್ದರೆ, ಕೃತಿ ಶೆಟ್ಟಿ ತನ್ನ ಮೊದಲ ಚಿತ್ರದಲ್ಲಿಯೇ ಸ್ಟಾರ್ ನಟಿಯ ಮಟ್ಟಕ್ಕೆ ಖ್ಯಾತಿ ಪಡೆದಿದ್ದರು. ಹೀಗೆ ಈ ಮೂವರು ಬೆಡಗಿಯರು ತೆಲುಗು ಚಿತ್ರರಂಗದಲ್ಲಿ ಕಳೆದ ವರ್ಷವೂ ಸಹ ಅಬ್ಬರಿಸಿದ್ದರು. ಆದರೆ ಈ ವರ್ಷ ಮಾತ್ರ ಈ ಮೂವರೂ ನಟಿಯರ ಪರಿಸ್ಥಿತಿ ಒಂದೇ ರೀತಿ ಇದೆ. ಹೌದು, ಮೂವರೂ ನಟಿಯರೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದು, ಈ ಪೈಕಿ ಬಹುತೇಕ ಎಲ್ಲಾ ಚಿತ್ರಗಳೂ ಸಹ ಮಕಾಡೆ ಮಲಗಿವೆ ಹಾಗೂ ಕೇವಲ ಎಂದು ಚಿತ್ರ ಮಾತ್ರ ಕೈಹಿಡಿದಿವೆ. ಈ ಕುರಿತಾದ ವಿವರ ಈ ಕೆಳಕಂಡಂತಿದೆ..

ಪೂಜಾ ಹೆಗ್ಡೆ
ಈ ವರ್ಷ ಬಿಡುಗಡೆಗೊಂಡ ಪೂಜಾ ಹೆಗ್ಡೆ ಅಭಿನಯದ ಮೊದಲ ಚಿತ್ರವೆಂದರೆ ರಾಧೆ ಶ್ಯಾಮ್. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಡಿಸಾಸ್ಟರ್ ಆಗಿ ಹೇಳ ಹೆಸರಿಲ್ಲದಂತೆ ಸೋಲನ್ನು ಅನುಭವಿಸಿತು. ಇನ್ನುಳಿದಂತೆ ಪೂಜಾ ಹೆಗ್ಡೆ ಅಭಿನಯದ ಆಚಾರ್ಯ ಕೂಡ ಮಕಾಡೆ ಮಲಗಿ ಹೀನಾಯವಾಗಿ ಸೋಲನ್ನು ಕಂಡಿತು ಹಾಗೂ ವರ್ಷಾಂತ್ಯದಲ್ಲಿ ತೆರೆಕಂಡ ಹಿಂದಿಯ ಸರ್ಕಸ್ ವಿಮರ್ಶೆ ಕೂಡ ಫ್ಲಾಪ್ ಎನ್ನುತ್ತಿವೆ. ಹೀಗೆ ಸಾಲು ಸಾಲು ಸೋಲು ಕಂಡ ಪೂಜಾ ಹೆಗ್ಡೆಗೆ ಈ ವರ್ಷ ಗೆಲುವನ್ನು ತಂದುಕೊಟ್ಟದ್ದು ವಿಜಯ್ ನಟನೆಯ ಬೀಸ್ಟ್ ಚಿತ್ರ ಮಾತ್ರ. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಬೀಸ್ಟ್ ಇನ್ನೂರು ಕೋಟಿ ಕ್ಲಬ್ ಸೇರಿ ಬಾಕ್ಸ್ ಆಫೀಸ್‌ನಲ್ಲಿ ಗೆಲುವು ಕಂಡಿತು.

ಕೃತಿ ಶೆಟ್ಟಿ
ಇನ್ನು ಕಳೆದ ವರ್ಷ ಉಪ್ಪೆನಾ ಹಾಗೂ ಶ್ಯಾಮ್ ಸಿಂಗಾರಾಯ್ ಮೂಲಕ ಬ್ಯಾಕ್ ಟು ಬ್ಯಾಕ್ ಗೆಲುವು ಕಂಡಿದ್ದ ಕೃತಿ ಶೆಟ್ಟಿ ಈ ವರ್ಷ ಮೂರು ಸೋಲುಗಳನ್ನು ಸಾಲು ಸಾಲಾಗಿ ಕಂಡಿದ್ದಾರೆ. ರಾಮ್ ಪೋತಿನೇನಿ ನಟನೆಯ ವಾರಿಯರ್, ನಿತಿನ್ ನಟನೆಯ ಮಾಚೆರ್ಲ ನಿಯೋಜಕವರ್ಗಂ ಹಾಗೂ ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಹೀಗೆ ಕೃತಿ ಶೆಟ್ಟಿ ನಟನೆಯ ಈ ಮೂರೂ ಚಿತ್ರಗಳೂ ಸಹ ನೆಲಕಚ್ಚಿದವು. ಆದರೆ ವರ್ಷದ ಆರಂಭದಲ್ಲಿ ತೆರೆಕಂಡ ಬಂಗಾರ್ರಾಜು ಮಾತ್ರ ಗೆಲುವು ತಂದುಕೊಟ್ಟಿತ್ತು.

ರಶ್ಮಿಕಾ ಮಂದಣ್ಣ
ತೆಲುಗು ಚಿತ್ರರಂಗದ ಓಡುವ ಜಿಂಕೆಯಾಗಿದ್ದ ರಶ್ಮಿಕಾ ಮಂದಣ್ಣ ಈ ವರ್ಷ ಸ್ಲೋ ಆಗಿರುವುದಂತೂ ನಿಜ. ಕಳೆದ ವರ್ಷ ಪುಷ್ಪ ಚಿತ್ರದ ಮೂಲಕ ದೊಡ್ಡ ಹಿಟ್ ನೀಡಿದ್ದ ರಶ್ಮಿಕಾ ಮಂದಣ್ಣ ಈ ವರ್ಷ ಮೂರು ಚಿತ್ರಗಳಲ್ಲಿ ನಟಿಸಿ ಇನ್ನೊಂದು ಚಿತ್ರದಲ್ಲಿ ಮಾತ್ರ ಗೆದ್ದಿದ್ದಾರೆ. ಶರ್ವಾನಂದ್ ನಟನೆಯ ಆಡವಾಳ್ಳು ಮೀಕು ಜೋಹಾರ್ಲು ಚಿತ್ರದ ಮೂಲಕ ಸೋಲನ್ನು ಕಂಡಿದ್ದ ರಶ್ಮಿಕಾ ಮಂದಣ್ಣ ಗುಡ್ ಬೈ ಎಂಬ ತನ್ನ ಮೊದಲ ಹಿಂದಿ ಚಿತ್ರದಲ್ಲೂ ಸಹ ಸೋತಿದ್ದರು. ಹೀಗೆ ಈ ವರ್ಷ ನಾಯಕಿಯಾಗಿ ನಟಿಸಿರುವ ಎರಡೂ ಚಿತ್ರಗಳಲ್ಲೂ ಸೋತ ರಶ್ಮಿಕಾ ಮಂದಣ್ಣ ದುಲ್ಕರ್ ಸಲ್ಮಾನ್ ಹಾಗೂ ಮೃಣಾಲ್ ನಟನೆಯ ಸೀತಾ ರಾಮಮ್ ಚಿತ್ರದಲ್ಲಿ ನಟಿಸಿದ್ದಳು. ಈ ಚಿತ್ರ ನೂರು ಕೋಟಿ ಗಳಿಸಿತ್ತು ಹಾಗೂ ಇದೊಂದೇ ಈ ವರ್ಷ ರಶ್ಮಿಕಾ ಮಂದಣ್ಣ ಹಿಟ್ ಚಿತ್ರ.