For Quick Alerts
  ALLOW NOTIFICATIONS  
  For Daily Alerts

  ಇಂಡಸ್ಟ್ರಿಗೆ ಕಾಲಿಟ್ಟು 35 ವರ್ಷಗಳ ಬಳಿಕ ನೂರು ಕೋಟಿ ಕ್ಲಬ್ ಸೇರಿದ ನಟ ರವಿತೇಜಾ!

  |

  ರವಿತೇಜಾ ತೆಲುಗಿನ ಎವರ್ ಗ್ರೀನ್ ಎನರ್ಜಿಟಿಕ್ ನಟ. ರಾಜಮೌಳಿ ರೀತಿಯ ನಿರ್ದೇಶಕರ ಜತೆ ಕೆಲಸ ನಿರ್ವಹಿಸಿರುವ ರವಿತೇಜಾ ಐವತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದರೂ ಸಹ ಇಲ್ಲಿಯವರೆಗೂ ಯಾವ ಚಿತ್ರವೂ ನೂರು ಕೋಟಿ ಕ್ಲಬ್ ಸೇರಿಯೇ ಇರಲಿಲ್ಲ. ನೂರು, ಇನ್ನೂರು ದಿನಗಳನ್ನು ಚಿತ್ರಮಂದಿರಗಳಲ್ಲಿ ಪೂರೈಸಿದ ಹಲವಾರು ಚಿತ್ರಗಳನ್ನು ನೀಡಿರುವ ರವಿತೇಜಾ ಈಗಿನ ಸಿನಿ ಕ್ಷೇತ್ರದಲ್ಲಿ ನೂರು ಕೋಟಿ ಕಲೆಕ್ಷನ್ ಮಾಡುವ ಚಿತ್ರ ನೀಡುವಲ್ಲಿ ಯಶಸ್ವಿಯಾಗಿರಲಿಲ್ಲ.

  ಇನ್ನು ಇತ್ತೀಚೆಗಿನ ದಿನಗಳಲ್ಲಿ ಕ್ರ್ಯಾಕ್ ಹೊರತುಪಡಿಸಿ ರವಿತೇಜಾ ನಟನೆಯ ಬೇರೆ ಯಾವ ಚಿತ್ರಗಳೂ ಸಹ ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿರಲಿಲ್ಲ. ಎಲ್ಲರೂ ರವಿತೇಜಾ ಕತೆ ಮುಗಿದ ಹಾಗೆ, ಇನ್ನೇನಿದ್ದರೂ ಕಡಿಮೆ ಬಜೆಟ್ ಸಿನಿಮಾಗಳನ್ನು ಮಾಡಿಕೊಂಡಿರಬೇಕಷ್ಟೇ ಎನ್ನುತ್ತಿರುವಾಗಲೇ ಈಗ ಧಮಾಕಾ ಮೂಲಕ ಗಟ್ಟಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ.

  ಕಳೆದ ಡಿಸೆಂಬರ್ 23ರಂದು ಬಿಡುಗಡೆಗೊಂಡ ಧಮಾಕಾ 14 ದಿನಗಳಲ್ಲಿ ನೂರು ಕೋಟಿ ಕ್ಲಬ್ ಸೇರಿದ್ದು, ರವಿತೇಜಾ ಸಿನಿ ಕೆರಿಯರ್‌ನಲ್ಲಿ ನೂರು ಕೋಟಿ ಕ್ಲಬ್ ಸೇರಿದ ಮೊದಲ ಚಿತ್ರ ಎಂಬ ಮೈಲಿಗಲ್ಲನ್ನು ನೆಟ್ಟಿದೆ. ಇನ್ನು ಧಮಾಕಾ ಎಕ್ಸ್‌ಪರಿಮೆಂಟ್ ಚಿತ್ರವೇನಲ್ಲ, ವಾವ್ ಎನಿಸುವಂತಹ ಕಂಟೆಂಟ್ ಅನ್ನೂ ಸಹ ಹೊಂದಿಲ್ಲ, ಇದೊಂದು ಪಕ್ಕಾ ತೆಲುಗು ಫ್ಲೇವರ್‌ನ ಸಿನಿಮಾ.

  ಹೌದು, ಧಮಾಕಾ ಬಿಡುಗಡೆಯಾದಾಗ ಪಡೆದುಕೊಂಡ ವಿಮರ್ಶೆ ಇಂತಹದ್ದೇ. ಸಾಧಾರಣಕ್ಕಿಂತ ಕಳಪೆ ಎಂಬ ವಿಮರ್ಶೆಗಳನ್ನು ವಿಮರ್ಶಕರು ನೀಡಿದರೂ ಸಹ ಧಮಾಕಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ನೂರು ಕೋಟಿ ಕ್ಲಬ್ ಸೇರಿ ಯಾರೂ ಊಹಿಸಿರದ ರೀತಿ ಅಬ್ಬರಿಸಿದೆ. ಚಿತ್ರದ ಕಾಮಿಡಿ, ಡಾನ್ಸ್ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್‌ಗಳಾಗಿ ಪರಿಣಮಿಸಿವೆ. ಈ ಮೂಲಕ ರವಿತೇಜಾ ಮಾತ್ರವಲ್ಲದೇ ಶ್ರೀಲೀಲಾ ಸಹ ನೂರು ಕೋಟಿ ಕ್ಲಬ್ ಸೇರಿದ್ದಾರೆ.

  English summary
  Ravi Teja and Sree Leela starrer Dhamaka crossed 100 crores gross at box office
  Saturday, January 7, 2023, 7:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X