For Quick Alerts
  ALLOW NOTIFICATIONS  
  For Daily Alerts

  ಕೊನೆ ಘಳಿಗೆಯಲ್ಲಿ ಥಿಯೇಟರ್‌ನಿಂದ ಹಿಂದೆ ಸರಿದ ರವಿತೇಜ ಕ್ರ್ಯಾಕ್, ಕಾರಣವೇನು?

  |

  ಎಲ್ಲ ಅಂದುಕೊಂಡಂತೆ ಆಗಿದ್ದರೆ ತೆಲುಗು ನಟ ರವಿತೇಜ ನಟಿಸಿರುವ ಕ್ರ್ಯಾಕ್ ಸಿನಿಮಾ ಜನವರಿ 9 ರಂದು ರಿಲೀಸ್ ಆಗಬೇಕಿತ್ತು. ಅದಕ್ಕೆ ಬೇಕಾದ ಎಲ್ಲ ತಯಾರಿ ನಡೆದಿತ್ತು. ಕೆಲವು ಕಡೆ ಟಿಕೆಟ್ ಬುಕ್ಕಿಂಗ್ ಸಹ ಮಾಡಲಾಗಿತ್ತು. ಇನ್ನೆನೂ ಶೋ ಆರಂಭವಾಯ್ತು ಎಂದು ಅಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

  ಕ್ರ್ಯಾಕ್ ಸಿನಿಮಾ ಇಂದು ಬಿಡುಗಡೆಯಾಗಿಲ್ಲ. ಕೊನೆ ಘಳಿಗೆಯಲ್ಲಿ ಕ್ರ್ಯಾಕ್ ಚಿತ್ರ ಚಿತ್ರಮಂದಿರದಿಂದ ಹಿಂದೆ ಸರಿದಿದೆ. ಚಿತ್ರದ ನಿರ್ಮಾಪಕರಿಗೆ ಹಣಕಾಸಿನ ಸಮಸ್ಯೆ ಎದುರಾಗಿದ್ದು, ಸಿನಿಮಾ ರಿಲೀಸ್ ಆಗದಂತೆ ತಡೆಹಿಡಿಯಲಾಗಿದೆ.

  ಕರ್ನಾಟಕದ ಚಿತ್ರಮಂದಿರಗಳಲ್ಲಿ ಪರಭಾಷೆ ಚಿತ್ರಗಳ 'ಸಂಕ್ರಾಂತಿ ಸಡಗರ'

  ಗೋಪಿಚಂದ್ ಮಾಲಿನೇನಿ ಈ ಚಿತ್ರ ನಿರ್ದೇಶಿಸಿದ್ದು, ಠಾಗೂರ್ ಮಧು ನಿರ್ಮಾಣ ಮಾಡಿದ್ದರು. ಆದರೆ, ಠಾಗೂರ್ ಮಧು ಹಾಗೂ ಫೈನಾನ್ಶಿಯರ್‌ಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಚಿತ್ರ ರಿಲೀಸ್‌ಗೂ ಮೊದಲೇ ಬಾಕಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ.

  ಈ ಹಿನ್ನೆಲೆ ಹಣ ಪಾವತಿ ಮಾಡಲಾಗದ ನಿರ್ಮಾಪಕರು ಚಿತ್ರ ಬಿಡುಗಡೆಯನ್ನು ತಾತ್ಕಲಿಕವಾಗಿ ಮುಂದೂಡಿದ್ದಾರೆ ಎಂದು ಹೇಳಲಾಗಿದೆ. ಆರಂಭದಲ್ಲಿ ಕ್ರ್ಯಾಕ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಬೇಕಿತ್ತು. ನಂತರ ಥಿಯೇಟರ್‌ನಲ್ಲಿ ಕ್ರ್ಯಾಕ್ ಬರಲು ನಿರ್ಧಾರ ಬದಲಾಯಿಸಿಕೊಳ್ತು.

  ರವಿತೇಜ ನಾಯಕರಾಗಿದ್ದು, ಶ್ರುತಿ ಹಾಸನ್ ನಾಯಕಿ. ವರಲಕ್ಷ್ಮಿ ಶರತ್ ಕುಮಾರ್, ಸಮುದ್ರಕಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ರಿಲೀಸ್ ಮುಂದೂಡಿಕೆಯಾಗಿದೆ. ಆದರೆ, ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮಾಹಿತಿ ಸಿಕ್ಕಿದೆ.

  English summary
  Telugu actor Ravi Teja Starrer Krack Movie release date postponed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X