Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಅಪ್ಪು' ಸಿನಿಮಾ ಕಥೆ ಮುಂದುವರೆಯುತ್ತಾ? ರವಿತೇಜಾ ಮಗ ಹೀರೊ ಆಗಿ ನಟನೆ?
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೀರೊ ಆಗಿ ಎಂಟ್ರಿ ಕೊಟ್ಟ ಸಿನಿಮಾ ಅಪ್ಪು. ಪುರಿ ಜಗನ್ನಾಥ್ ನಿರ್ದೇಶನದ ಈ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅಣ್ಣಾವ್ರ ಮುದ್ದಿನ ಮಗನಿಗೆ ಹೀರೊ ಆಗಿ ದೊಡ್ಡ ಬ್ರೇಕ್ ಕೊಟ್ಟಿತ್ತು.
'ಅಪ್ಪು' ಸಿನಿಮಾ ಮುಂದೆ 'ಈಡಿಯಟ್' ಹೆಸರಿನಲ್ಲಿ ತೆಲುಗಿಗೂ ರೀಮೆಕ್ ಆಗಿತ್ತು. ರವಿತೇಜಾ ಹೀರೊ ಆಗಿ ನಟಿಸಿದ್ದರು. ಸ್ವತಃ ಪುರಿ ಜಗನ್ನಾಥ್ ತೆಲುಗು ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದರು. ಅಲ್ಲೂ ಸಿನಿಮಾ ಹಿಟ್ ಆಗಿ ರವಿತೇಜಾಗೆ ಹೀರೊ ಆಗಿ ದೊಡ್ಡಮಟ್ಟದ ಸಕ್ಸಸ್ ಸಿಕ್ಕಿತ್ತು. ಇದೇ ಸಿನಿಮಾ ಮೂಲಕ ರಕ್ಷಿತಾ ಟಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದರು. ಒಂದು ಸಿಂಪಲ್ ಕಥೆಯನ್ನು ಬಹಳ ವಿಭಿನ್ನವಾಗಿ ಕಟ್ಟಿಕೊಟ್ಟಿ ನಿರ್ದೇಶಕರು ಸಕ್ಸಸ್ ಕಂಡಿದ್ದರು.
ಮನೆ
ಅಡವಿಟ್ಟು
ಕೋಟ್ಯಂತರ
ಸಾಲ
ಪಡೆದ
ಪ್ರಭಾಸ್!
ಅಂಥಹಾ
ಕಷ್ಟ
ಏನು
ಬಂತು?
ಸದ್ಯ ಟಾಲಿವುಡ್‌ನಲ್ಲಿ 'ಈಡಿಯಟ್' ಸೀಕ್ವೆಲ್ ಬಗ್ಗೆ ಗುಸುಗುಸು ಶುರುವಾಗಿತ್ತು. 20 ವರ್ಷಗಳ ನಂತರ ಈ ಸಿನಿಮಾ ಕಥೆಯನ್ನು ಮುಂದುವರೆಸುತ್ತಾರೆ, ಚಿತ್ರದಲ್ಲಿ ರವಿತೇಜಾ ಬದಲು ಅವರ ಮಗ ಮಹಾದಾನ್ ಭೂಪತಿ ರಾಜು ನಟಿಸ್ತಾರೆ ಎನ್ನಲಾಗಿತ್ತು.

'ಈಡಿಯಟ್' ಸೀಕ್ವೆಲ್?
ಕಳೆದ ಕೆಲ ದಿನಗಳಿಂದ 'ಈಡಿಯಟ್' ಸೀಕ್ವೆಲ್ ಬರುತ್ತೆ. ಈ ಸಿನಿಮಾ ಮೂಲಕ ರವಿತೇಜಾ ಮಗ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿತ್ತು. 'ವಾಲ್ತೇರು ವೀರಯ್ಯ' ಪ್ರಮೋಷನ್‌ನಲ್ಲಿ ಭಾಗವಹಿಸಿದ್ದ ರವಿತೇಜಾಗೆ ಇದೇ ಪ್ರಶ್ನೆ ಎದುರಾಗಿತ್ತು. ಇದನ್ನು ಕೇಳಿ ಅಚ್ಚರಿ ವ್ಯಕ್ತಪಡಿಸಿದ ರವಿತೇಜಾ, ಯಾರು ಹೇಳಿದ್ರು? ಹೀಗೊಂದು ಸುದ್ದಿ ಕೇಳಿದ್ದು ಇದೇ ಮೊದಲು. ನನ್ನ ಮಗನನ್ನು ಹೀರೊ ಮಾಡಿ 'ಈಡಿಯಟ್' ಕಥೆ ಮುಂದುವರೆಸುವ ಐಡಿಯಾ ಇಲ್ಲವೇ ಇಲ್ಲ ಎಂದಿದ್ದಾರೆ.

ಬಾಲನಟನಾಗಿ ಮಹಾದಾನ್
ರವಿತೇಜಾ ಪುತ್ರ ಮಹಾದಾನ್ ಭೂಪತಿ ರಾಜು ಈಗಾಗಲೇ ಬಾಲನಟನಾಗಿ ಬಣ್ಣ ಹಚ್ಚಿದ್ದಾನೆ. ರವಿತೇಜಾ ನಟನೆಯ 'ರಾಜಾ ದಿ ಗ್ರೇಟ್' ಚಿತ್ರದಲ್ಲಿ ಬಾಲ್ಯದ ರಾಜಾ ಪಾತ್ರದಲ್ಲಿ ಮಹದಾನ್ ಬಣ್ಣ ಹಚ್ಚಿದ್ದ. 'ಈಡಿಯಟ್' ಸೀಕ್ವೆಲ್ ಅಲ್ಲದೇ ಇದ್ದರೂ ಬೇರೆ ಸಿನಿಮಾ ಮೂಲಕ ಇಂಡಸ್ಟ್ರಿ ಬರ್ತಾನೆ ಎಂದು ಟಾಲವುಡ್ ಮಂದಿ ಹೇಳುತ್ತಿದ್ದಾರೆ.

ಫ್ಯಾಮಿಲಿ ಎಂಟರ್‌ಟೈನರ್ 'ಈಡಿಯಟ್'
ಕನ್ನಡದಲ್ಲಿ ಸಕ್ಸಸ್ ಕಂಡ 'ಅಪ್ಪು' ಸಿನಿಮಾ ತೆಲುಗು ಸೇರಿ 4 ಭಾಷೆಗಳಿಗೆ ರೀಮೆಕ್ ಆಗಿತ್ತು. ಅವತ್ತಿನ ಕಾಲಕ್ಕೆ ಇದು ನ್ಯೂ ಏಜ್ ಲವ್ ಸ್ಟೋರಿ ಅನ್ನಿಸಿಕೊಂಡಿತ್ತು. ಎಮೋಷನ್, ಕಾಮಿಡಿ, ಲವ್ ಎಲ್ಲವನ್ನು ಮಿಕ್ಸ್ ಮಾಡಿ ಪಕ್ಕಾ ಯೂತ್‌ಫುಲ್ ಎಂಟರ್‌ಟೈನರ್ ಆಗಿ ಚಿತ್ರವನನ್ನು ತೆರೆಗೆ ತರಲಾಗಿತ್ತು. ಹೀರೊ ಕ್ಯಾರೆಕ್ಟರೈಸೇಷನ್, ಮಿಡ್ಲ್ ಕ್ಲಾಸ್ ಫ್ಯಾಮಿಲಿ ಯುವಕನಾಗಿ ರವಿತೇಜಾ ಆಟಿಟ್ಯೂಡ್ ಇಂಪ್ರೆಸ್ ಮಾಡಿತ್ತು. ಕಾನ್ಸ್‌ಸ್ಟೇಬಲ್ ಮಗ ಪೊಲೀಸ್ ಕಮೀಷನರ್ ಮಗಳನ್ನು ಪ್ರೀತಿಸಬಾರದಾ? ಪ್ರೀತಿಸಿದ್ರೆ ತಪ್ಪೇನು? ಎನ್ನುವ ಸಣ್ಣ ಎಳೆ ಇಟ್ಟುಕೊಂಡು ಸಿನಿಮಾ ಮಾಡಿದ್ದರು.

'ವಾಲ್ತೇರು ವೀರಯ್ಯ' ಆಗಿ ರವಿತೇಜಾ
ಸದ್ಯ ರವಿತೇಜಾ 'ವಾಲ್ತೇರು ವೀರಯ್ಯ' ಸಿನಿಮಾದಲ್ಲಿ ಚಿರಂಜೀವಿ ಜೊತೆ ನಟಿಸಿದ್ದಾರೆ. ಬಾಬಿ ನಿರ್ದೇಶನದ ಈ ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬರ್ತಿದೆ. ಚಿತ್ರದಲ್ಲಿ ವೀರಯ್ಯ ಆಗಿ ರವಿತೇಜಾ ನಟಿಸಿದ್ದಾರೆ ಎನ್ನಲಾಗ್ತಿದೆ. ಚಿತ್ರಕ್ಕೆ ಹೀರೊ ಚಿರಂಜೀವಿ ಆದರೂ ರವಿತೇಜಾ ಪಾತ್ರ ಹೈಲೆಟ್ ಆಗುತ್ತೆ ಎನ್ನಲಾಗ್ತಿದೆ. ಈಗಾಗಲೇ ಮಾಸ್ ಮಹಾರಾಜನ ಸ್ಪೆಷಲ್ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ.