For Quick Alerts
  ALLOW NOTIFICATIONS  
  For Daily Alerts

  ಆ ಸಿನಿಮಾದಿಂದಾಗಿ ಸಂಭಾವನೆ ಹೆಚ್ಚಿಸಿಕೊಳ್ಳುತ್ತಿರುವ ರವಿತೇಜ

  |

  ಮಾಸ್ ಮಹಾರಾಜ ಖ್ಯಾತಿಯ ರವಿತೇಜ ಅನಾರೋಗ್ಯದ ಬಳಿಕ ಮತ್ತೆ ಸಿನಿಮಾಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

  ಜನವರಿ 09 ರಂದು ರವಿತೇಜ ನಟನೆಯ ಹೊಸ ಸಿನಿಮಾ 'ಕ್ರ್ಯಾಕ್' ಬಿಡುಗಡೆ ಆಗಲಿದ್ದು. ಈ ಸಿಸನಿಮಾ ಮೇಲೆ ರವಿತೇಜ ಗೆ ಭಾರಿ ನಿರೀಕ್ಷೆಗಳಿವೆ. ಎಷ್ಟೆಂದರೆ, ಈ ಸಿನಿಮಾ ಹಿಟ್ ಆದನಂತರ ತಮ್ಮ ಸಂಭಾವನೆ ಏರಿಸಿಕೊಳ್ಳಬೇಕು ಎಂದುಕೊಂಡಿದ್ದಾರಂತೆ ರವಿತೇಜ.

  'ಕ್ರ್ಯಾಕ್' ಸಿನಿಮಾ ಪಕ್ಕಾ ಇಂಡಸ್ಟ್ರಿ ಹಿಟ್ ಆಗುತ್ತದೆ. ಆಗ ಸಂಭಾವನೆ ಏರಿಸಿಕೊಳ್ಳುತ್ತೇನೆ ಎಂದಿರುವ ರವಿತೇಜ, ಸಿನಿಮಾ ಹಿಟ್ ಆಗುವವರೆಗೆ ಯಾವುದೇ ಹೊಸ ಪ್ರಾಜೆಕ್ಟ್ ಸಹ ಒಪ್ಪಿಕೊಳ್ಳುತ್ತಿಲ್ಲವಂತೆ.

  ಸಂಭಾವನೆ ಏರಿಸಿಕೊಳ್ಳಲು ನಿರ್ಧರಿಸಿರುವ ರವಿತೇಜ

  ಸಂಭಾವನೆ ಏರಿಸಿಕೊಳ್ಳಲು ನಿರ್ಧರಿಸಿರುವ ರವಿತೇಜ

  ತೆಲುಗಿನ ಸ್ಟಾರ್ ನಟರ ಪೈಕಿ ರವಿತೇಜ ತುಸು ಕಡಿಮೆ ಸಂಭಾವನೆ ಪಡೆಯುತ್ತಿದ್ದಾರೆ. ಹಾಗಾಗಿ ಈಗ ಸಂಭಾವನೆ ಏರಿಸಿಕೊಳ್ಳಲು ನಿರ್ಧರಿಸಿರುವ ರವಿತೇಜ, ಸಂಭಾವನೆ ಕಡಿಮೆ ಎಂಬ ಕಾರಣಕ್ಕೆ ಎರಡು ಸಿನಿಮಾಗಳಿಂದ ಹಿಂದೆ ಸರಿದಿದ್ದಾರೆ.

  ಇಬ್ಬರ ಸಿನಿಮಾ ನಿರಾಕರಿಸಿರುವ ರವಿತೇಜ

  ಇಬ್ಬರ ಸಿನಿಮಾ ನಿರಾಕರಿಸಿರುವ ರವಿತೇಜ

  ನಿರ್ದೇಶಕ ಮಾರುತಿ ಮತ್ತು ನಿರ್ದೇಶಕ ನಕ್ಕಿನಿ ತ್ರಿನಾಥ ರಾವ್ ಅವರುಗಳು ರವಿತೇಜ ಗೆ ಕತೆ ಹೇಳಿದ್ದರು. ರವಿತೇಜ ಸಹ ಒಪ್ಪಿದ್ದರು, ಆದರೆ ಸಂಭಾವನೆ ವಿಷಯದಲ್ಲಿ ರವಿತೇಜ ಅಸಮಾಧಾನಗೊಂಡು ಸಿನಿಮಾಗಳಿಂದ ಹಿಂದೆ ಸರಿದಿದ್ದಾರೆ.

  ಸಿನಿಮಾ ಹಿಟ್‌ಗಾಗಿ ಕಾಯುತ್ತಿರುವ ರವಿತೇಜ

  ಸಿನಿಮಾ ಹಿಟ್‌ಗಾಗಿ ಕಾಯುತ್ತಿರುವ ರವಿತೇಜ

  ಸಂಭಾವನೆ ಏರಿಸಿಕೊಳ್ಳಲು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿರುವ ರವಿತೇಜ, ಕ್ರ್ಯಾಕ್ ಸಿನಿಮಾದ ಮೇಲೆ ಭರವಸೆ ಇಟ್ಟು ಕೂತಿದ್ದಾರೆ. ಕ್ರ್ಯಾಕ್ ಸಿನಿಮಾ ಹಿಟ್ ಆದರೆ, ಪ್ರಸ್ತುತ ಇರುವ ಸಂಭಾವನೆ ಮೇಲೆ 35-40% ಹೆಚ್ಚುವರಿ ಸಂಭಾವನೆಗೆ ಬೇಡಿಕೆ ಇಡಲಿದ್ದಾರೆ.

  ಶ್ರುತಿ ಹಾಸನ್ ನಾಯಕಿ

  ಶ್ರುತಿ ಹಾಸನ್ ನಾಯಕಿ

  ರವಿತೇಜ ನಟನೆಯ ಕ್ರ್ಯಾಕ್ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ.ಜೊತೆಗೆ ವಿಜಯಲಕ್ಷ್ಮಿ ಶರತ್‌ಕುಮಾರ್, ಸಮುದ್ರಕಿಣಿ ಸಹ ಸಿನಿಮಾದಲ್ಲಿದ್ದಾರೆ. ಸಿನಿಮಾವನ್ನು ಗೋಪಿಚಂದ್ ಮಲಿನೇನಿ ನಿರ್ದೇಶಿಸಿದ್ದಾರೆ. ನಿರ್ಮಾಣ ಬಿ.ಮಧು ಅವರದ್ದು.

  English summary
  Telugu actor Raviteja planing to high his remuneration after the release of his movie Krack.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X