For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ಎಂಥಹಾ ವ್ಯಕ್ತಿ: ಎರಡನೇ ಪತ್ನಿ ಬಿಚ್ಚಿಟ್ಟ ಮಾಜಿ ಪತಿಯ ವ್ಯಕ್ತಿತ್ವ

  |

  ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತಿಯಾಗಿ ಚರ್ಚೆಯಲ್ಲಿರುವ ನಟರಲ್ಲಿ ಪವನ್ ಕಲ್ಯಾಣ್ ಪ್ರಮುಖರು. ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಪವನ್ ಕಲ್ಯಾಣ್‌ರ ಸಿನಿಮಾ, ರಾಜಕೀಯದ ಜೊತೆಗೆ ಖಾಸಗಿ ಜೀವನವೂ ಚರ್ಚೆಗೆ ವಿಷಯವಾಗಿದೆ.

  ಅದರಲ್ಲಿಯೂ ಪವನ್ ಕಲ್ಯಾಣ್, ರಾಜಕೀಯಕ್ಕೆ ಧುಮುಕಿದ ಮೇಲಂತೂ ರಾಜಕೀಯ ವಿರೋಧಿಗಳು ಪವನ್‌ರನ್ನು ಹಣಿಯಲು ಅವರ ಖಾಸಗಿ ಜೀವನದ ವಿಷಯವನ್ನು ಹೆಚ್ಚಿಗೆ ಬಳಸುತ್ತಿದ್ದಾರೆ. ಮೂರು ಮದುವೆಯಾದವ, ವಿದೇಶಿ ಹೆಣ್ಣಿನ ಮೋಹಕ್ಕೆ ಸಿಲುಕಿದವ ಇನ್ನೂ ಹಲವು ಆರೋಪಗಳನ್ನು ಮಾಡುತ್ತಿರುತ್ತಾರೆ.

  ಈ ನಡುವೆ ಪವನ್ ಕಲ್ಯಾಣ್‌ರ ಎರಡನೇ ಪತ್ನಿ ರೇಣು ದೇಸಾಯಿ ಪವನ್ ಕಲ್ಯಾಣ್ ಜೊತೆಗಿನ ದಾಂಪತ್ಯದ ಅನುಭವ ಹಾಗೂ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ. ಪವನ್ ಹಾಗೂ ರೇಣು ದೇಸಾಯಿ ವಿಚ್ಛೇದನ ನಡೆದಾಗ ರೇಣು ದೇಸಾಯಿ ಮೇಲೆ ಪವನ್ ಅಭಿಮಾನಿಗಳು ವಾಗ್ದಾಳಿ ನಡೆಸಿದ್ದರು. ಹಾಗಾಗಿ ವಿಚ್ಛೇದನದ ಬಗ್ಗೆ ರೇಣು ದೇಸಾಯಿಯ ಮಾತು ಮಹತ್ವದ್ದಾಗಿದೆ.

  ಸ್ನೇಹಿತರಂತೆ ಇದ್ದೆವು ಎಂದಿರುವ ರೇಣು

  ಸ್ನೇಹಿತರಂತೆ ಇದ್ದೆವು ಎಂದಿರುವ ರೇಣು

  ತಮಿಳು ಟಿವಿ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರೇಣು ದೇಸಾಯಿ, ''ನಾನು ಮತ್ತು ಪವನ್ ಕಲ್ಯಾಣ್ ಗಂಡ-ಹೆಂಡತಿಯಂತೆ ಎಂದೂ ಇರಲಿಲ್ಲ. ನಾವಿಬ್ಬರೂ ಗೆಳೆಯರಂತೆ ಇದ್ದೆವು. ನಾನು ಸಾಮಾನ್ಯ ಗೃಹಿಣಿ ಆಗಿರಲಿಲ್ಲ ಆಗ. ನಾನು ಪವನ್ ಕಲ್ಯಾಣ್‌ಗೆ ಚಿತ್ರೀಕರಣ ಸೆಟ್‌ನಲ್ಲಿ ಸಹಾಯಕಿಯಾಗಿಯೂ ಕೆಲಸ ಮಾಡುತ್ತಿದ್ದೆ. ಅವರ ಉಡುಪುಗಳನ್ನು ಡಿಸೈನ್ ಮಾಡುತ್ತಿದ್ದೆ. ಪವನ್ ನನಗೆ ಪತಿಯಾಗಿರುವುದಕ್ಕಿಂತಲೂ ಗೆಳೆಯರಾಗಿದ್ದರು'' ಎಂದು ಹೊಗಳಿದ್ದಾರೆ.

  2018 ರಲ್ಲಿ ಬೇರೆಯನ್ನೇ ಹೇಳಿದ್ದರು ರೇಣು

  2018 ರಲ್ಲಿ ಬೇರೆಯನ್ನೇ ಹೇಳಿದ್ದರು ರೇಣು

  ಆದರೆ ಇದೇ ರೇಣು ದೇಸಾಯಿ 2018 ರಲ್ಲಿ ನೀಡಿದ್ದ ಸಂದರ್ಶನದಲ್ಲಿ ಪವನ್ ಕಲ್ಯಾಣ್ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದರು. ವಿಚ್ಛೇದನಕ್ಕೆ ನಾನೇ ಕಾರಣ ಎಂದು ಪವನ್ ಅಭಿಮಾನಿಗಳು ನನ್ನನ್ನು ವಿನಾಕಾರಣ ದೂರಿದರು. ಅವರ ಕೆಲವು ಅಭಿಮಾನಿಗಳು ಬೆದರಿಕೆ ಸಹ ಹಾಕಿದ್ದರು. ವಿಚ್ಛೇದನಕ್ಕೆ ನಾನು ಮಾತ್ರವೇ ಕಾರಣವಲ್ಲ ಎಂದು ಪತ್ರಿಕಾ ಹೇಳಿಕೆ ಕೊಡಿ ಎಂದು ನಾನು ಪವನ್‌ ಅವರನ್ನು ಕೇಳಿಕೊಂಡೆ ಆದರೆ ಅವರು ಕೊಡಲಿಲ್ಲ'' ಎಂದಿದ್ದರು ರೇಣು ದೇಸಾಯಿ.

  ಎಂಟು ವರ್ಷ ಲಿವ್‌ ಇನ್ ರಿಲೇಶನ್‌

  ಎಂಟು ವರ್ಷ ಲಿವ್‌ ಇನ್ ರಿಲೇಶನ್‌

  ರೇಣು ದೇಸಾಯಿ ಹಾಗೂ ಪವನ್ ಕಲ್ಯಾಣ್ ಸತತ ಎಂಟು ವರ್ಷ ಲಿವ್‌ ಇನ್ ರಿಲೇಶನ್‌ನಲ್ಲಿದ್ದರು. ಬಳಿಕ 2009 ರಲ್ಲಿ ಶಾಸ್ತ್ರೀಯವಾಗಿ ವಿವಾಹವಾದರು. ಆ ಬಳಿಕ ಮತ್ತೆ 2012 ರಲ್ಲಿ ವಿಚ್ಛೇದನ ಪಡೆದು ದೂರಾದರು. ರೇಣು ದೇಸಾಯಿ ಹಾಗೂ ಪವನ್ ಕಲ್ಯಾಣ್‌ಗೆ ಅಕಿರಾ ನಂದಾ ಹಾಗೂ ಆದ್ಯ ಹೆಸರಿನ ಮಕ್ಕಳಿದ್ದಾರೆ. ಆ ಬಳಿಕ ಪವನ್ ಕಲ್ಯಾಣ್ ರಷ್ಯಾದ ಅನ್ನಾ ಲೆಜ್ನೇವಾರನ್ನು ವಿವಾಹವಾದರು. ಅವರಿಂದ ಮಾರ್ಕ್ ಶಂಕರ್ ಹಾಗೂ ಪೋಲೇನಾ ಅಂಜನಾ ಹೆಸರಿನ ಮಕ್ಕಳನ್ನು ಪಡೆದಿದ್ದಾರೆ.

  ಐದು ಕೋಟಿ ನೀಡಿ ವಿಚ್ಛೇದನ ಪಡೆದ ಪವನ್ ಕಲ್ಯಾಣ್

  ಐದು ಕೋಟಿ ನೀಡಿ ವಿಚ್ಛೇದನ ಪಡೆದ ಪವನ್ ಕಲ್ಯಾಣ್

  ಪವನ್ ಕಲ್ಯಾಣ್‌ರ ಮೊದಲ ವಿವಾಹವೂ ಭಾರಿ ವಿವಾದಕ್ಕೆ ಕಾರಣವಾಗಿತ್ತು. 1997 ರಲ್ಲಿ ನಂದಿನಿ ಎಂಬುವರನ್ನು ಪವನ್ ಕಲ್ಯಾಣ್ ವಿವಾಹವಾಗಿದ್ದರು. ಆದರೆ ಅವರಿಬ್ಬರ ನಡುವಿನ ದಾಂಪತ್ಯ ಸರಿ ಬರಲಿಲ್ಲ. 2001 ರಲ್ಲಿ ಪವನ್ ಕಲ್ಯಾಣ್, ರೇಣು ದೇಸಾಯಿ ಜೊತೆ ಲಿವ್‌ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಆಗ ನಂದಿನಿ ಪವನ್ ಕಲ್ಯಾಣ್ ವಿರುದ್ಧ ಪ್ರಕರಣ ದಾಖಲಿಸಿದರು. ಆ ಪ್ರಕರಣ ಸಾಬೀತಾಗಲಿಲ್ಲ. ಬಳಿಕ ಪವನ್ ಕಲ್ಯಾಣ್, ನಂದಿನಿ ಅವರಿಂದ ವಿಚ್ಛೇದನ ಬಯಸಿ ಅರ್ಜಿ ಹಾಕಿದರು. ಕೊನೆಗೆ ಆಗಿನ ಕಾಲಕ್ಕೆ ಐದು ಕೋಟಿ ಜೀವನಾಂಶ ನೀಡಿ ವಿಚ್ಛೇದನ ಪಡೆದುಕೊಂಡರು.

  English summary
  Renu Desai talks about her relationship and divorce with Pawan Kalyan. She said we both are were just like friends.
  Saturday, November 19, 2022, 11:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X