For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಚಿತ್ರಮಂದಿರದಲ್ಲಿ ಕಾಂತಾರ ಹವಾ; ತೆಲುಗು ಬುಕಿಂಗ್ ಹೇಗಿದೆ, ಮೊದಲ ದಿನ ಎಷ್ಟು ಕೋಟಿ?

  |

  ಕಳೆದ ಸೆಪ್ಟೆಂಬರ್ 30ರಂದು ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡ ಕಾಂತಾರ ಚಿತ್ರ ಭರ್ಜರಿ ಯಶಸ್ಸು ಸಾಧಿಸಿದೆ. ಕಾಡಿನ ಜನರ ಕತೆಗೆ ಭೂತಕೋಲ ಹಾಗೂ ದೈವದ ಅಂಶಗಳನ್ನು ಬೆರೆಸಿದ ರಿಷಬ್ ಶೆಟ್ಟಿ ನಿರ್ದೇಶನದ ಜತೆಗೆ ನಟನೆಯಲ್ಲಿಯೂ ಜಯಭೇರಿ ಬಾರಿಸಿದ್ದಾರೆ.

  ಮೊದಲಿಗೆ ಕಾಂತಾರ ಚಿತ್ರತಂಡ ಪ್ಯಾನ್ ಇಂಡಿಯಾ ಬಿಡುಗಡೆ ಮಾಡುವ ಚಿಂತನೆಯನ್ನು ಹೊಂದಿರಲಿಲ್ಲ. ಆದರೆ ಕಾಂತಾರ ಚಿತ್ರವನ್ನು ಕನ್ನಡದಲ್ಲಿಯೇ ವೀಕ್ಷಿಸಿದ ಪರಭಾಷಾ ಸಿನಿ ರಸಿಕರು ಇಂಥ ಒಳ್ಳೆಯ ಕಥೆ ಇರುವ ಚಿತ್ರವನ್ನು ಪ್ಯಾನ್ ಇಂಡಿಯಾ ಬಿಡುಗಡೆ ಮಾಡಿ ಎಲ್ಲಾ ಭಾಷೆಯ ವೀಕ್ಷಕರು ಸಹ ಚಿತ್ರವನ್ನು ನೋಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

  ಹೀಗೆ ಇಂಥ ಅಭಿಪ್ರಾಯಗಳು ದೊಡ್ಡಮಟ್ಟದಲ್ಲಿ ವ್ಯಕ್ತವಾದ ಕಾರಣ ಹೊಂಬಾಳೆ ಫಿಲ್ಮ್ಸ್ ಇದೀಗ ಕಾಂತಾರ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲು ಮುಂದಾಗಿದೆ. ನಿನ್ನೆಯಷ್ಟೇ ( ಅಕ್ಟೋಬರ್ 14 ) ಕಾಂತಾರ ಹಿಂದಿ ಅವತರಣಿಕೆ ಬಿಡುಗಡೆಗೊಂಡಿದ್ದು, ಇಂದು ( ಅಕ್ಟೋಬರ್ 15 ) ತೆಲುಗು ಹಾಗೂ ತಮಿಳಿನಲ್ಲಿ ಕಾಂತಾರ ತೆರೆಕಂಡಿದೆ. ಕಾಂತಾರ ಹಿಂದಿ ಮೊದಲನೇ ದಿನ ಸಾಧಾರಣ ಬುಕಿಂಗ್ ಕಂಡಿದ್ದು, ತೆಲುಗು ಅವತರಣಿಕೆಯ ಬುಕಿಂಗ್ ಹೇಗಿದೆ ಮತ್ತು ಮೊದಲ ದಿನ ಚಿತ್ರ ಎಷ್ಟು ಗಳಿಸಬಹುದು ಎಂಬುದರ ಕುರಿತ ಮಾಹಿತಿ ಕೆಳಕಂಡಂತಿದೆ.

   ಎಎಂಬಿ ಚಿತ್ರಮಂದಿರದಲ್ಲಿ ಕಾಂತಾರ ಸೋಲ್ಡ್ ಔಟ್

  ಎಎಂಬಿ ಚಿತ್ರಮಂದಿರದಲ್ಲಿ ಕಾಂತಾರ ಸೋಲ್ಡ್ ಔಟ್

  ಹೈದರಾಬಾದ್‌ನ ಗಚ್ಚಿಬೌಲಿಯಲ್ಲಿರುವ ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್ ಚಿತ್ರಮಂದಿರದಲ್ಲಿ ಕಾಂತಾರ ಚಿತ್ರದ ಮೊದಲ ದಿನದ 6 ಪ್ರದರ್ಶನಗಳು ಸಹ ಸೋಲ್ಡ್ ಔಟ್ ಆಗಿವೆ. ನಗರದ ಪ್ರತಿಷ್ಠಿತ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಒಂದಾಗಿರುವ ಈ ಎಎಂಬಿಯಲ್ಲಿ ಟಿಕೆಟ್ ದರ ತುಸು ದುಬಾರಿಯೇ. ಕಾಂತಾರ ಚಿತ್ರಕ್ಕೂ ಸಹ ಈ ಚಿತ್ರಮಂದಿರದಲ್ಲಿ 350 ಹಾಗೂ 295 ರೂಪಾಯಿಗಳ ದುಬಾರಿ ಟಿಕೆಟ್ ದರವೇ ಇತ್ತು. ಆದರೂ ಸಹ ಕಾಂತಾರ ಚಿತ್ರದ ಟಿಕೆಟ್ ಸಂಪೂರ್ಣ ಸೋಲ್ಡ್ ಔಟ್ ಆಗಿವೆ. ಈ ಮೂಲಕ ಕೆಜಿಎಫ್ ಚಾಪ್ಟರ್ 2 ಬಳಿಕ ಮತ್ತೊಂದು ಕನ್ನಡದಿಂದ ತೆಲುಗಿಗೆ ಡಬ್ ಆದ ಚಿತ್ರದ ಟಿಕೆಟ್‌ಗಳು ಈ ಚಿತ್ರಮಂದಿರದಲ್ಲಿ ಮೊದಲ ದಿನದ ಎಲ್ಲಾ ಪ್ರದರ್ಶನಗಳಲ್ಲಿಯೂ ಸೋಲ್ಡ್ ಔಟ್ ಆಗಿದೆ.

   ಹೈದರಾಬಾದ್‌ನ ಬಹುತೇಕ ಮಲ್ಟಿಪ್ಲೆಕ್ಸ್ ಸೋಲ್ಡ್ ಔಟ್

  ಹೈದರಾಬಾದ್‌ನ ಬಹುತೇಕ ಮಲ್ಟಿಪ್ಲೆಕ್ಸ್ ಸೋಲ್ಡ್ ಔಟ್

  ಎಎಂಬಿ ಸಿನಿಮಾಸ್ ಮಾತ್ರವಲ್ಲದೆ ಹೈದರಾಬಾದ್ ನಗರದ ಪ್ರಮುಖ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಾದ ಪಿವಿಆರ್, ಐನಾಕ್ಸ್ ಹಾಗೂ ಸಿನಿಪೊಲಿಸ್ ಪ್ರದರ್ಶನಗಳೂ ಕೂಡ ಸೋಲ್ಡ್ ಔಟ್ ಆಗುತ್ತಿವೆ. ಗಚ್ಚಿಬೌಲಿ, ಪಂಜಗುಟ್ಟ, ಅಮೀರ್ ಪೇಟ್, ಮಲ್ಲಾಪುರ್, ಮಾದಾಪುರ, ನಿಜಾಂಪೇಟೆ ಹಾಗೂ ಮುಂತಾದ ಏರಿಯಾಗಳಲ್ಲಿ ಕಾಂತಾರ ಟಿಕೆಟ್ ನಿಜಕ್ಕೂ ಅತ್ಯದ್ಬುತವಾಗಿ ಸೋಲ್ಡ್ ಔಟ್ ಆಗಿವೆ.

   ತೆಲುಗು ರಾಜ್ಯಗಳ ಇತರೆ ನಗರಗಳಲ್ಲಿ ಅದ್ಭುತ ರೆಸ್ಪಾನ್ಸ್

  ತೆಲುಗು ರಾಜ್ಯಗಳ ಇತರೆ ನಗರಗಳಲ್ಲಿ ಅದ್ಭುತ ರೆಸ್ಪಾನ್ಸ್

  ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಉಳಿದ ಪ್ರಮುಖ ನಗರಗಳಾದ ವಿಶಾಖಪಟ್ಟಣದ ಕಿನ್ನೆರ,ಶಾರದಾ ಹಾಗೂ ಐನಾಕ್ಸ್ ಚಿತ್ರಮಂದಿರಗಳಲ್ಲಿ ಕಾಂತಾರ ತೆಲುಗು ಚಿತ್ರದ ಟಿಕೆಟ್ ಸೋಲ್ಡ್ ಔಟ್ ಆಗಿವೆ. ತಿರುಪತಿ ಚಿತ್ರಮಂದಿರಗಳಲ್ಲಿಯೂ ಸಹ ಕಾಂತಾರ ಚಿತ್ರದ ಟಿಕೆಟ್ ವೇಗವಾಗಿ ಮಾರಾಟವಾಗುತ್ತಿವೆ. ಚಿತ್ತೂರು ಜಿಲ್ಲೆಯ ಚಿತ್ರಮಂದಿರಗಳಲ್ಲಿ ಕಾಂತಾರ ಚಿತ್ರದ ಬುಕ್ಕಿಂಗ್ ಸಾಮಾನ್ಯವಾಗಿದೆ. ಗುಂಟೂರು ನಗರದಲ್ಲಿ ಕಾಂತಾರ ಬುಕಿಂಗ್ ಜೋರಾಗಿದೆ. ವಾರಂಗಲ್ ನಗರದಲ್ಲಿಯೂ ಕಾಂತಾರ ಒಳ್ಳೆಯ ಬುಕಿಂಗ್ ಕಂಡಿದೆ.

   ಮೊದಲ ದಿನವೇ 1.5 ಕೋಟಿ ಗಳಿಕೆ ಪಕ್ಕಾ ಎನ್ನುತ್ತಿದ್ದಾರೆ ಬಾಕ್ಸ್ ಆಫೀಸ್ ಪಂಡಿತರು

  ಮೊದಲ ದಿನವೇ 1.5 ಕೋಟಿ ಗಳಿಕೆ ಪಕ್ಕಾ ಎನ್ನುತ್ತಿದ್ದಾರೆ ಬಾಕ್ಸ್ ಆಫೀಸ್ ಪಂಡಿತರು

  ಇನ್ನು ಕಾಂತಾರ ತೆಲುಗು ಅವತರಣಿಕೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಒಟ್ಟು 305ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ. ಸದ್ಯ ಕಾಂತಾರ ಚಿತ್ರಕ್ಕಿರುವ ವಿಮರ್ಶೆ ಹಾಗೂ ಬುಕಿಂಗ್ ನೋಡಿದರೆ ಕಾಂತಾರ ತೆಲುಗು ಅವತರಣಿಕೆ ಮೊದಲನೇ ದಿನ ನಿರಾಯಾಸವಾಗಿ 1.5 ಕೋಟಿ ಗಳಿಕೆ ಮಾಡಲಿದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ತಿಳಿಸಿದ್ದಾರೆ.

  English summary
  Rishab Shetty starrer Kantara Telugu Day 1 advance booking and estimation collection report. Take a look
  Saturday, October 15, 2022, 14:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X