twitter
    For Quick Alerts
    ALLOW NOTIFICATIONS  
    For Daily Alerts

    'ಕಾಂತಾರ ತೆಲುಗು' 3ನೇ ದಿನದ ಕಲೆಕ್ಷನ್ ಎಷ್ಟು? ಕೋಟಿಯನ್ನೂ ಮುಟ್ಟಲಿಲ್ಲ ಚಿರಂಜೀವಿಯ ಗಾಡ್‌ಫಾದರ್!

    |

    ಕನ್ನಡದಲ್ಲಿ ಅಬ್ಬರಿಸಿದ್ದ ಕಾಂತಾರ ಚಿತ್ರ ಇದೀಗ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬದಲಾಗಿದೆ. ಚಿತ್ರದ ಕಂಟೆಂಟ್ ಚಿತ್ರವನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ಚಿತ್ರ ವೀಕ್ಷಿಸಿದ ಪ್ರತಿಯೊಬ್ಬ ಸಿನಿ ಪ್ರೇಕ್ಷಕರು ಸಹ ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದು ಕಾಂತಾರ ಕಲೆಕ್ಷನ್ ಕೂಡ ಭರ್ಜರಿಯಾಗಿದೆ. ಚಿತ್ರ ಈಗಾಗಲೇ ನೂರು ಕೋಟಿ ಕ್ಲಬ್ ಸೇರಿದ್ದು ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಧಿಪತ್ಯ ಸಾಧಿಸುತ್ತಿದೆ.

    ಇನ್ನು ಕಾಂತಾರ ಚಿತ್ರದ ಅಬ್ಬರ ಎಷ್ಟರ ಮಟ್ಟಿಗೆ ಇದೆ ಎಂದರೆ ಈ ಚಿತ್ರಕ್ಕೂ ಮುನ್ನ ಬಿಡುಗಡೆಗೊಂಡ ಹಾಗೂ ನಂತರದ ವಾರದಲ್ಲಿ ಬಿಡುಗಡೆಗೊಂಡ ಚಿತ್ರಗಳಾವುವೂ ಕಾಂತರಕ್ಕೆ ಪೈಪೋಟಿ ನೀಡಲಾಗುತ್ತಿಲ್ಲ. ಕಾಂತಾರ ಜೊತೆ ಬಿಡುಗಡೆಗೊಂಡ ಪೊನ್ನಿಯಿನ್ ಸೆಲ್ವನ್ ತಮಿಳುನಾಡಿನಲ್ಲಿ ಗೆದ್ದಿದೆಯಾದರೂ ಕರ್ನಾಟದಲ್ಲಿ ಕಾಂತಾರ ಅಬ್ಬರಕ್ಕೆ ವಾಷ್ಔಟ್ ಆಗಿತ್ತು.

    'ಕಾಂತಾರ' ನೋಡಿ ರಿಪೋರ್ಟರ್ ರೀತಿ ಪ್ರೇಕ್ಷಕರ ರಿವ್ಯೂ ಕೇಳಿದ ನಟಿ: ಇದು ತುಳುನಾಡಿದ ಹೆಮ್ಮೆ ಎಂದ ಬೆಡಗಿ! 'ಕಾಂತಾರ' ನೋಡಿ ರಿಪೋರ್ಟರ್ ರೀತಿ ಪ್ರೇಕ್ಷಕರ ರಿವ್ಯೂ ಕೇಳಿದ ನಟಿ: ಇದು ತುಳುನಾಡಿದ ಹೆಮ್ಮೆ ಎಂದ ಬೆಡಗಿ!

    ಅತ್ತ ಕಾಂತಾರ ಕನ್ನಡದಲ್ಲಿ ಬಿಡುಗಡೆಗೊಂಡ ಐದು ದಿನಗಳ ಬಳಿಕ ಗಾಡ್‌ಫಾದರ್ ವಿಜಯದಶಮಿ ಪ್ರಯುಕ್ತ ಬಿಡುಗಡೆಗೊಂಡಿತ್ತು. ಒಳ್ಳೆಯ ಓಪನಿಂಗ್ ಪಡೆದುಕೊಂಡ ಗಾಡ್‌ಫಾದರ್ ಮೂರು ದಿನಗಳ ಬಳಿಕ ಸಾಧಾರಣ ಕಲೆಕ್ಷನ್ ಮಾಡುವತ್ತ ಕುಸಿದಿತ್ತು. ಹೀಗೆ ಸಾಧಾರಣ ಕಲೆಕ್ಷನ್ ಮಾಡಿ ಕುಂಟುತ್ತಾ ಸಾಗುತ್ತಿದ್ದ ಗಾಡ್‌ಫಾದರ್ ಚಿತ್ರ ಹತ್ತು ದಿನ ಪೂರೈಸುವ ಹೊತ್ತಿಗೆ ಕಾಂತಾರ ತೆಲುಗಿಗೆ ಡಬ್ ಆಗಿ ಬಿಡುಗಡೆಗೊಂಡಿತ್ತು. ಕಾಂತಾರ ಮೊದಲ ದಿನವೇ ತೆಲುಗು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಪರಿಣಾಮ ಗಾಡ್‌ಫಾದರ್ ಚಿತ್ರದ ಅಷ್ಟೂ ಇಷ್ಟು ಗಳಿಕೆಗೂ ಕೂಡ ಕಲ್ಲು ಬಿದ್ದಿತ್ತು. ಹೀಗೆ ಶನಿವಾರ ( ಅಕ್ಟೋಬರ್ 15 ) ಬಿಡುಗಡೆಗೊಂಡ ಕಾಂತಾರ ತೆಲುಗು ಅವತರಣಿಕೆ ಮೊದಲ ಮೂರು ದಿನ ಒಟ್ಟು ಎಷ್ಟು ಕೋಟಿ ಕಲೆಹಾಕಿದೆ ಎಂಬ ಮಾಹಿತಿ ಕೆಳಕಂಡಂತಿದೆ.

    ಕಾಂತಾರ ಮೂರನೇ ದಿನ ಗಳಿದ್ದೆಷ್ಟು?

    ಕಾಂತಾರ ಮೂರನೇ ದಿನ ಗಳಿದ್ದೆಷ್ಟು?

    ಕಾಂತಾರ ತೆಲುಗು ಅವತರಣಿಕೆ ತೆಲುಗು ರಾಜ್ಯಗಳಲ್ಲಿ ಮೊದಲ ದಿನ 3.95 ಕೋಟಿ ಕಲೆಕ್ಷನ್ ಮಾಡಿತ್ತು. ಇನ್ನು ಎರಡನೇ ದಿನ ಭಾನುವಾರವಾಗಿದ್ದ ಕಾರಣ ಅಂದು ಕಾಂತಾರ ತೆಲುಗು ಅವತರಣಿಕೆ ತೆಲುಗು ರಾಜ್ಯಗಳಲ್ಲಿ ಬರೋಬ್ಬರಿ 5.90 ಕೋಟಿ ಗಳಿಸಿತ್ತು. ಈ ಮೂಲಕ ಎರಡೇ ದಿನಗಳಲ್ಲಿ 9.85 ಕೋಟಿ ಕಲೆಹಾಕಿದ್ದ ಕಾಂತಾರ ಮೂರನೇ ದಿನ ( ಅಕ್ಟೋಬರ್ 17 ) 3.65 ಕಲೆಕ್ಷನ್ ಮಾಡಿದೆ. ಈ ಮೂಲಕ ಕಾಂತಾರ ತೆಲುಗು ಅವತರಣಿಕೆ ಮೊದಲ ಮೂರು ದಿನಗಳಲ್ಲಿ 13.50 ಕೋಟಿ ರೂಪಾಯಿಗಳನ್ನು ಕಲೆಹಾಕಿದೆ.

    ಗಾಡ್‌ಫಾದರ್‌ಗೆ ಬಿತ್ತು ಭಾರೀ ಹೊಡೆತ

    ಗಾಡ್‌ಫಾದರ್‌ಗೆ ಬಿತ್ತು ಭಾರೀ ಹೊಡೆತ

    ಇನ್ನು ಮಲಯಾಳಂ ರಿಮೇಕ್ ಚಿತ್ರ ಗಾಡ್‌ಫಾದರ್ ಕಾಂತಾರ ತೆಲುಗು ಅವತರಣಿಕೆ ಬಿಡುಗಡೆಯ ಬಳಿಕ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದೆ ಎನ್ನಬಹುದು. ಮೊದಲ ಹತ್ತು ದಿನಗಳಲ್ಲಿ 100.25 ಕೋಟಿ ಕಲೆಕ್ಷನ್ ಮಾಡಿದ್ದ ಗಾಡ್‌ಫಾದರ್ ಕಾಂತಾರ ತೆಲುಗು ಬಿಡುಗಡೆಯ ದಿನ 1.35 ಕೋಟಿ, ಭಾನುವಾರ ( ಅಕ್ಟೋಬರ್ 16 ) 1.85 ಕೋಟಿ ಗಳಿಸಿತ್ತು. ಇನ್ನು ನಿನ್ನೆ ಕಾಂತಾರ ಮೂರಕ್ಕೂ ಅಧಿಕ ಕೋಟಿ ಗಳಿಸಿದ್ದರೆ, ಗಾಡ್‌ಫಾದರ್ ಕೇವಲ 70 ಲಕ್ಷ ರೂಪಾಯಿ ಗಳಿಸಿದೆ. ಈ ಮೂಲಕ ಗಾಡ್‌ಫಾದರ್ ಕಾಂತಾರ ಬಿಡುಗಡೆಯ ನಂತರ ಮಕಾಡೆ ಮಲಗಿದೆ.

    ಕಂಟೆಂಟ್ ಈಸ್ ದಿ ಕಿಂಗ್ ಎಂದ ತೆಲುಗು ಪ್ರೇಕ್ಷಕರು

    ಕಂಟೆಂಟ್ ಈಸ್ ದಿ ಕಿಂಗ್ ಎಂದ ತೆಲುಗು ಪ್ರೇಕ್ಷಕರು

    ಇನ್ನು ತೆಲುಗು ರಾಜ್ಯಗಳಲ್ಲಿ ಕಾಂತಾರ ಅಬ್ಬರಿಸುತ್ತಿರುವುದರ ಕುರಿತು ಮಾತನಾಡಿರುವ ತೆಲುಗು ಸಿನಿ ಪ್ರೇಕ್ಷಕರು ಬಾಕ್ಸ್ ಆಫೀಸ್‌ನಲ್ಲಿ ಈಗ ಸ್ಟಾರ್ ಲೆಕ್ಕಾಚಾರ ಬರುವುದಿಲ್ಲ. ಚಿತ್ರದ ಆರಂಭದಲ್ಲಿ ಮಾತ್ರ ಕಲೆಕ್ಷನ್ ಮಾಡಲು ಸ್ಟಾರ್ ಇರಬೇಕು. ಆದರೆ ಚಿತ್ರದ ಕಂಟೆಂಟ್ ಚೆನ್ನಾಗಿದ್ದರೆ ಯಾವುದೇ ನಟನ ಚಿತ್ರವಾದರೂ ಗೆಲ್ಲಲಿದೆ ಎಂಬುದಕ್ಕೆ ಕಾಂತಾರವೇ ಉದಾಹರಣೆ ಎನ್ನುತ್ತಿದ್ದಾರೆ.

    English summary
    Kantara telugu version box office report: grossed 13.50 crores from 3 days. Read on
    Tuesday, October 18, 2022, 14:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X