For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಮನೆಯಲ್ಲಿ ಕಳ್ಳತನಕ್ಕೆ ಯತ್ನ!

  |

  ಸ್ಟಾರ್ ನಟ ಮಹೇಶ್ ಬಾಬು ಮನೆಯಲ್ಲಿ ವ್ಯಕ್ತಿಯೊಬ್ಬ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಘಟನೆ ನಡೆದು ಎರಡು ದಿನವಾಗಿದ್ದು, ಕಳ್ಳತನಕ್ಕೆ ಯತ್ನಿಸಿದ್ದ ವ್ಯಕ್ತಿ ಇದೀಗ ಆಸ್ಪತ್ರೆ ಸೇರಿದ್ದಾನೆ!

  ಮಹೇಶ್ ಬಾಬು ಅವರ ಜೂಬ್ಲಿ ಹಿಲ್ಸ್ ರಸ್ತೆಯ ರಸ್ತೆ ಸಂಖ್ಯೆ 81 ರಲ್ಲಿರುವ ಐಶಾರಾಮಿ ಮನೆಗೆ ನುಗ್ಗಿ ಕಳ್ಳತನ ಮಾಡಲು ಒಡಿಶಾ ಮೂಲದ ವ್ಯಕ್ತಿಯೊಬ್ಬ ಯತ್ನಿಸಿದ್ದ. ಮೂವತ್ತು ಅಡಿ ಎತ್ತರವಿರುವ ಮನೆಯ ಕಾಂಪೌಂಡ್ ಏರಿದ್ದ ಬಳಿಕ ಮನೆಯ ಕಡೆಗೆ ಇಳಿಯಲು ಯತ್ನಿಸಿ ಕಾಂಪೌಂಡ್‌ನಿಂದ ಬಿದ್ದು ಗಾಯಗೊಂಡಿದ್ದಾನೆ.

  ಘಟನೆ ನಡೆದಾಗ ಮಹೇಶ್ ಬಾಬು ಹಾಗೂ ಅವರ ಕುಟುಂಬ ಮನೆಯಲ್ಲಿಯೇ ಇತ್ತಂತೆ. ವ್ಯಕ್ತಿ ಬಿದ್ದ ಶಬ್ದ ಕೇಳಿ ಮನೆಯ ಸೆಕ್ಯೂರಿಟಿ ಗಾರ್ಡ್‌ಗಳು ಓಡಿಬಂದಿದ್ದಾರೆ. ಕಾಂಪೌಂಡ್‌ನಿಂದ ಬಿದ್ದ ವ್ಯಕ್ತಿ ಗಾಯಗೊಂಡಿದ್ದ ಕಾರಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆತನ ಕಾಲಿಗೆ ತೀವ್ರ ಗಾಯಗಳಾಗಿವೆ ಎನ್ನಲಾಗಿದೆ.

  ಇತ್ತೀಚೆಗಷ್ಟೆ ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ನಿಧನ ಹೊಂದಿದ್ದರು. ಅದೇ ದುಃಖದಲ್ಲಿದ್ದ ಸೂಪರ್ ಸ್ಟಾರ್ ಕುಟುಂಬ ಮನೆಯೊಳಗೆ ಇತ್ತು. ಈ ಸಂದರ್ಭದಲ್ಲಿಯೇ ಈ ಘಟನೆ ನಡೆದಿದೆ. ಮನೆ ಕಳ್ಳತನಕ್ಕೆ ಬಂದಿದ್ದ ವ್ಯಕ್ತಿಯ ಆಸ್ಪತ್ರೆ ಖರ್ಚುಗಳನ್ನು ಮಹೇಶ್ ಬಾಬು ಅವರೇ ಭರಿಸುತ್ತಿದ್ದಾರೆ ಎಂದು ತೆಲುಗು ಮಾಧ್ಯಮವೊಂದು ವರದಿ ಮಾಡಿದೆ.

  ಮಹೇಶ್ ಬಾಬು ಪ್ರಸ್ತುತ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ತ್ರಿವಿಕ್ರಮ್ ನಿರ್ದೇಶಿಸಿದ್ದ 'ಅತಡು' ಹಾಗೂ 'ಖಲೇಜ' ಸಿನಿಮಾಗಳಲ್ಲಿ ಮಹೇಶ್ ಬಾಬು ನಟಿಸಿದ್ದರು. 'ಅತಡು' ಸಿನಿಮಾ ಸೂಪರ್ ಹಿಟ್ ಆಗಿತ್ತು. 'ಖಲೇಜ' ಸಾಧಾರಣ ಹಿಟ್ ಎನಿಸಿಕೊಂಡಿತ್ತು. ತ್ರಿವಿಕ್ರಮ್ ಶ್ರೀನಿವಾಸ್ ಸಿನಿಮಾದ ಬಳಿಕ ಮಹೇಶ್ ಬಾಬು, ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಸಿನಿಮಾಕ್ಕಾಗಿ ದೊಡ್ಡ ಯೋಜನೆಯನ್ನು ಮಹೇಶ್ ಬಾಬು ಹಾಕಿಕೊಂಡಿದ್ದಾರೆ.

  English summary
  Robbery attempt at Mahesh Babu's Hyderabad Jubli Hills house. But Thiefe gets injured.
  Saturday, October 1, 2022, 13:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X