Just In
Don't Miss!
- News
ಅಳಿಯನಿಗೆ ಜೈಲು: ಚುನಾವಣೆ ಸಮೀಪದಲ್ಲಿಯೇ ಕೇರಳ ಸಿಎಂ ಪಿಣರಾಯಿಗೆ ಆಘಾತ
- Finance
ಚಿನ್ನದ ಬೆಲೆ ಕೊಂಚ ಇಳಿಕೆ: ಮಾರ್ಚ್ 03ರ ಬೆಲೆ ಎಷ್ಟಿದೆ?
- Automobiles
ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಫೋಕ್ಸ್ವ್ಯಾಗನ್ ಟಿಗ್ವಾನ್ ಎಸ್ಯುವಿ
- Sports
'ಭಾರತ-ಇಂಗ್ಲೆಂಡ್ 4ನೇ ಟೆಸ್ಟ್ನಲ್ಲಿ ನಾನು ಇಂಗ್ಲೆಂಡ್ಗೆ ಚಿಯರ್ ಮಾಡ್ತೇನೆ'
- Education
Karnataka SSLC Exam 2021 Time Table: ಎಸ್ಎಸ್ಎಲ್ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ
- Lifestyle
ಮಾರ್ಚ್ ನಲ್ಲಿದೆ ಕಷ್ಟ ನಿವಾರಿಸುವ ಫಾಲ್ಗುಣ ಅಮವಾಸ್ಯೆ, ಯಾಕಿಷ್ಟು ಮಹತ್ವ ಗೊತ್ತಾ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ರಾಬರ್ಟ್' ತೆಲುಗು ಟೀಸರ್: ಟಾಲಿವುಡ್‌ನ ಈ ದಾಖಲೆ ಮೇಲೆ ದರ್ಶನ್ ಫ್ಯಾನ್ಸ್ ಕಣ್ಣು!
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ತೆಲುಗು ಬಿಡುಗಡೆಗೆ ಎಲ್ಲ ಸಿದ್ಧತೆ ನಡೆಯುತ್ತಿದೆ. ಸದ್ಯಕ್ಕೆ ಫೆಬ್ರವರಿ 3 ರಂದು ರಾಬರ್ಟ್ ತೆಲುಗು ಟೀಸರ್ ಬಿಡುಗಡೆಯಾಗಲಿದೆ. ಬುಧವಾರ ಸಂಜೆ 4.05 ಗಂಟೆಗೆ ಟೀಸರ್ ರಿಲೀಸ್ ಆಗುತ್ತಿದ್ದು, ತೆಲುಗಿನಲ್ಲಿ ಡಿ-ಬಾಸ್ ಅಬ್ಬರಿಸಲು ಸಜ್ಜಾಗಿದ್ದಾರೆ.
ಸ್ಯಾಂಡಲ್‌ವುಡ್ ಪಾಲಿಗೆ ಬಾಕ್ಸ್ ಆಫೀಸ್ ಸುಲ್ತಾನ ಎನಿಸಿಕೊಂಡಿರುವ ನಟ ದರ್ಶನ್ ಟಾಲಿವುಡ್ ಬಾಕ್ಸ್ ಆಫೀಸ್ ಮೇಲೆ ಸವಾರಿ ಮಾಡಲು ಸಿದ್ಧವಾಗುತ್ತಿದ್ದಾರೆ. ಅದಕ್ಕೆ ಡಿ ಬಾಸ್ ಭಕ್ತರು ಸಾಥ್ ನೀಡಲು ಎಲ್ಲ ರೀತಿಯ ಯೋಜನೆ ರೂಪಿಸಿಕೊಂಡಿದ್ದಾರೆ. ಟೀಸರ್ ಬಿಡುಗಡೆ ಪ್ರಯುಕ್ತ, ಟಾಲಿವುಡ್ ಸ್ಟಾರ್‌ಗಳ ದಾಖಲೆ ಬ್ರೇಕ್ ಮಾಡಲು ಚರ್ಚೆ ಜೋರಾಗಿದೆ. ಈ ಒಂದು ದಾಖಲೆ ಮೇಲೆ ದರ್ಶನ್ ಫ್ಯಾನ್ಸ್ ಕಣ್ಣಿಟ್ಟಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ, ಏನದು? ಮುಂದೆ ಓದಿ...

ರಾಬರ್ಟ್‌ಗೆ ಅತಿ ಹೆಚ್ಚು ಲೈಕ್ಸ್?
ನಾಳೆ ಬಿಡುಗಡೆಯಾಗಲಿರುವ ರಾಬರ್ಟ್ ಟೀಸರ್ ಮೂಲಕ ಟಾಲಿವುಡ್‌ಗೆ ದೊಡ್ಡ ಸಂದೇಶ ರವಾನಿಸಲು ದರ್ಶನ್ ಅಭಿಮಾನಿಗಳು ಚಿಂತಿಸಿದ್ದಾರೆ. ಅದಕ್ಕಾಗಿಯೇ ತೆಲುಗು ಟೀಸರ್‌ಗಳ ಹೆಸರಿನಲ್ಲಿರುವ ದಾಖಲೆಯನ್ನು ಬ್ರೇಕ್ ಮಾಡಲು ದಾಸನ ಭಕ್ತರು ನಿರ್ಧರಿಸಿದ್ದು, ಟ್ರೆಂಡ್ ಶುರು ಮಾಡಿಕೊಂಡಿದ್ದಾರೆ. ಅತಿ ವೇಗವಾಗಿ 50k ಲೈಕ್ಸ್ ಮಾಡಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ.
ದರ್ಶನ್ 'ರಾಬರ್ಟ್' ತೆಲುಗು ಟೀಸರ್ ರಿಲೀಸ್ ಗೆ ದಿನಾಂಕ ನಿಗದಿ

ಯಾರ ಹೆಸರಿನಲ್ಲಿದೆ ಹಳೆ ದಾಖಲೆ?
ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾದ ಜೂನಿಯರ್ ಎನ್‌ಟಿಆರ್ ಅವರ ಟೀಸರ್ ಪ್ರಸ್ತುತ ಅತಿ ವೇಗವಾಗಿ 50k ಲೈಕ್ಸ್ ಸಂಪಾದಿಸಿಕೊಂಡಿರುವ ದಾಖಲೆ ಮಾಡಿದೆ. ಕೇವಲ 3 ನಿಮಿಷದಲ್ಲಿ 50 ಸಾವಿರ ಲೈಕ್ಸ್ ಪಡೆದುಕೊಂಡಿರುವ ರೆಕಾರ್ಡ್ ಈ ಟೀಸರ್ ಹೆಸರಿನಲ್ಲಿದೆ.

ಎರಡನೇ ಸ್ಥಾನದಲ್ಲಿ ವಕೀಲ್ ಸಾಬ್ ಟೀಸರ್
ಆರ್‌ಆರ್‌ಆರ್ ಸಿನಿಮಾದ ಟೀಸರ್ ಬಳಿಕ ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಚಿತ್ರದ ಟೀಸರ್ 3-4 ನಿಮಿಷದಲ್ಲಿ 50k ಲೈಕ್ಸ್ ಪಡೆದಿದೆ ಎಂಬ ದಾಖಲೆ ಮಾಡಿದೆ. ಮಹೇಶ್ ಬಾಬು ನಟನೆಯ ಸರಿಲೇರು ನಿಕೇವ್ವರು ಚಿತ್ರದ ಟೀಸರ್ 7 ನಿಮಿಷದಲ್ಲಿ 50k ಲೈಕ್ಸ್, ಆರ್‌ಆರ್‌ಆರ್ ಚಿತ್ರದ ರಾಮ್ ಚರಣ್ ಟೀಸರ್ 9 ನಿಮಿಷದಲ್ಲಿ 50k ಲೈಕ್ಸ್ ಹಾಗೂ ಅರವಿಂದ ಸಮೇತ ಸಿನಿಮಾದ ಟೀಸರ್ 10 ನಿಮಿಷದಲ್ಲಿ 50k ಲೈಕ್ಸ್ ಪಡೆದಿದೆ ಎಂದು ವರದಿಯಾಗಿದೆ.
'ರಾಬರ್ಟ್' ಅನ್ನು ಅದ್ಧೂರಿಯಾಗಿ ಸ್ವಾಗತಿಸುತ್ತೇವೆಂದ ತೆಲುಗು ನಿರ್ಮಾಪಕರು

ರಾಬರ್ಟ್‌ಗೆ ತೆಲುಗಿನಲ್ಲಿ ಅಡ್ಡಿ?
ಮಾರ್ಚ್ 11 ರಂದು ತೆಲುಗಿನಲ್ಲಿ ರಾಬರ್ಟ್ ಬಿಡುಗಡೆ ಮಾಡಲು ವಿತರಕರು ಅಡ್ಡಿ ವ್ಯಕ್ತಪಡಿಸಿದ್ದರು. ಬಳಿಕ, ನಟ ದರ್ಶನ್ ಕರ್ನಾಟಕ ಫಿಲಂ ಚೇಂಬರ್ ಮೆಟ್ಟಿಲೇರಿದ್ದರು. ಇದರ ಬೆನ್ನಲ್ಲೆ ಟಾಲಿವುಡ್ ಮಂದಿ ರಾಬರ್ಟ್ ರಿಲೀಸ್‌ಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿದ್ದಾರೆ. ನಿರ್ಮಾಪಕ ಉಮಾಪತಿ ಅವರನ್ನು ಆಹ್ವಾನಿಸಿದ ಸನ್ಮಾನ ಮಾಡಿ ಗೌರವಿಸಿದರು. ಇದೀಗ, ಮಾರ್ಚ್ 11 ರಂದೇ ರಾಬರ್ಟ್ ರಿಲೀಸ್ ಆಗಲಿದೆ.