For Quick Alerts
  ALLOW NOTIFICATIONS  
  For Daily Alerts

  "ನನ್ನ ಕಂದನ ಜೊತೆ ಗೋಲ್ಡನ್ ಗ್ಲೋಬ್ ಅವಾರ್ಡ್ ಸಂಭ್ರಮ".. ಉಪಾಸನಾ ಎಮೋಷನಲ್

  |

  ತಮಗೆ ಹುಟ್ಟುವ ಮಗು ಬಗ್ಗೆ ಮೊದಲ ಬಾರಿಗೆ ರಾಮ್‌ಚರಣ್ ಪತ್ನಿ ಉಪಾಸನಾ ಸ್ಪಂದಿಸಿದ್ದಾರೆ. ಗೋಲ್ಡನ್ ಗ್ಲೋಬ್ ಅವಾರ್ಡ್ ಕಾರ್ಯಕ್ರಮದಲ್ಲಿ 'RRR' ಟೀಂ ಜೊತೆ ಸಂಭ್ರಮಿಸಿದ ಮೆಗಾ ಫ್ಯಾಮಿಲಿ ಸೊಸೆ ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

  ಮದುವೆ ಆಗಿ 10 ವರ್ಷಗಳ ನಂತರ ನಟ ರಾಮ್‌ಚರಣ್- ಉಪಾಸನಾ ದಂಪತಿ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸುವ ಸಿದ್ಧರಾಗಿದ್ದಾರೆ. ಇತ್ತೀಚೆಗಷ್ಟೆ ಚಿರಂಜೀವಿ ಟ್ವೀಟ್ ಮಾಡಿ ಸೊಸೆ ಗರ್ಭಿಣಿ ಆಗಿರುಬ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದರು. ಆದರೆ ಚರಣ್‌- ಉಪಾಸನಾ ಈ ಬಗ್ಗೆ ಹೆಚ್ಚಾಗಿ ಸ್ಪಂದಿಸಿರಲಿಲ್ಲ. ಕೆಲವರು ದಂಪತಿ ಸಾರೋಗಸಿ ವಿಧಾನದಲ್ಲಿ ಮಗು ಪಡೆಯುತ್ತಿದ್ದಾರೆ ಎಂದು ಕೂಡ ಹೇಳಿದ್ದರು. ಆದರೆ ಅದೆಲ್ಲಾ ಸುಳ್ಳು ಎನ್ನುವುದು ನಂತರ ಗೊತ್ತಾಗಿತ್ತು. ರಾಮ್‌ಚರಣ್ ನಟನೆಯ 'RRR' ಚಿತ್ರದ 'ನಾಟು ನಾಟು' ಹಾಡಿಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿದೆ.

  ಗೋಲ್ಡನ್ ಗ್ಲೋಬ್ ಗೆದ್ದ 'RRR' ತಂಡದಿಂದ ಇದೆಂಥ ಅವಮಾನ? ಮೌಳಿ ಬೇಕಂತಲೇ ಹೀಗೆ ಮಾಡ್ತಿದ್ದಾರಾ?ಗೋಲ್ಡನ್ ಗ್ಲೋಬ್ ಗೆದ್ದ 'RRR' ತಂಡದಿಂದ ಇದೆಂಥ ಅವಮಾನ? ಮೌಳಿ ಬೇಕಂತಲೇ ಹೀಗೆ ಮಾಡ್ತಿದ್ದಾರಾ?

  ಕ್ಯಾಲಿಫೋರ್ನಿಯಾದಲ್ಲಿ ನಡೆದ ಗೋಲ್ಡನ್ ಗ್ಲೋಬ್ 2023 ಅವಾರ್ಡ್ ಸೆರೆಮನಿಯಲ್ಲಿ 'RRR' ಚಿತ್ರದ ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ನಿರ್ದೇಶಕ ರಾಜಮೌಳಿ, ಕೀರವಾಣಿ, ರಾಮ್‌ಚರಣ್, ಜ್ಯೂ. ಎನ್‌ಟಿಆರ್ ದಂಪತಿ ಸಮೇತರಾಗಿ ಕಾರ್ಯಕ್ರಮದಲ್ಲಿ ಭಾಗಿ ಆಗಿ ಸಂಭ್ರಮಿಸಿದ್ದಾರೆ.

  ಬಹಳ ಸಂತೋಷ ಆಗುತ್ತಿದೆ

  'RRR' ಚಿತ್ರತಂಡದ ಜೊತೆಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಫೋಟೊಗಳನ್ನು ಉಪಾಸನಾ ಹಂಚಿಕೊಂಡಿದ್ದಾರೆ. "'RRR' ತಂಡದ ಭಾಗವಾಗಿರುದಕ್ಕೆ ಬಹಳ ಖುಷಿ ಆಗುತ್ತಿದೆ. ದೇಶವೇ ಹೆಮ್ಮೆಪಡುವಂತಹ ಗೆಲುವು ಇದು. ಈ ಪ್ರಯಾಣದಲ್ಲಿ ನಾನು ಭಾಗಿ ಆಗುವಂತೆ ಮಾಡಿದ ರಾಮ್‌ಚರಣ್ ಹಾಗೂ ರಾಜಮೌಳಿಗೆ ತುಂಬು ಹೃದಯದ ಧನ್ಯವಾದ" ಎಂದು ಉಪಾಸನಾ ಬರೆದುಕೊಂಡಿದ್ದಾರೆ.

  ಮಗುವಿನ ಬಗ್ಗೆ ಮೊದಲ ಮಾತು

  ಮಗುವಿನ ಬಗ್ಗೆ ಮೊದಲ ಮಾತು

  ಉಕ್ರೇನ್‌ನಲ್ಲಿ 'RRR' ಚಿತ್ರದ ಶೂಟಿಂಗ್ ವೇಳೆ ಚರಣ್ ಜೊತೆ ಉಪಸನಾ ಕೂಡ ಹೋಗಿದ್ದರು. ಅದನ್ನು ನೆನಪಿಸಿಕೊಂಡಿದ್ದು "ಉಕ್ರೇನ್‌ ಶೂಟಿಂಗ್‌ನಿಂದ ಗೋಲ್ಡನ್ ಗ್ಲೋಬ್ ಅವಾರ್ಡ್‌ವರೆಗೆ ನನಗೆ ಸಾಕಷ್ಟು ಕಲಿಸಿದ್ದೀರಿ. ಆಲೋಚನೆಯ ಸ್ಪಷ್ಟತೆ, ಪರಿಶ್ರಮ, ಪ್ರತಿಫಲ ನೀಡುತ್ತದೆ. ಈ ಪ್ರಯಾಣದಲ್ಲಿ ನನೊಟ್ಟಿಗೆ ನನ್ನ ಮಗು ಕೂಡ ಈ ಸಂಭ್ರಮವನ್ನು ಅನುಭವಿಸುತ್ತಿರುವುದಕ್ಕೆ ಖುಷಿ ಆಗ್ತಿದೆ. ನಾನು ಬಹಳ ಭಾವುಕಳಾಗಿದ್ದೇನೆ" ಎಂದು ಉಪಾಸನಾ ಹೇಳಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗಿದೆ.

  2 ವಿಭಾಗದಲ್ಲಿ 'RRR' ನಾಮಿನೇಟ್

  2 ವಿಭಾಗದಲ್ಲಿ 'RRR' ನಾಮಿನೇಟ್

  ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ 'RRR' ಸಿನಿಮಾ 2 ವಿಭಾಗದಲ್ಲಿ ನಾಮಿನೇಟ್ ಆಗಿತ್ತು. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ 'ನಾಟು ನಾಟು', ಜೊತೆಗೆ ಬೆಸ್ಟ್ ನಾನ್ ಇಂಗ್ಲೀಷ್ ಸಿನಿಮಾ ಕೆಟಗರಿಯಲ್ಲಿ ಕೂಡ RRR ಸಿನಿಮಾ ಸ್ಪರ್ಧಿಸಿತ್ತು. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದ್ರೆ, ಮತ್ತೊಂದು ವಿಭಾಗದಲ್ಲಿ ಸಿನಿಮಾ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ಇದೇ ಮೊದಲ ಬಾರಿಗೆ ಭಾರತದ ಚಿತ್ರವೊಂದಕ್ಕೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಲಭಿಸಿರುವುದು ವಿಶೇಷ. ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ಇಡೀ ತಂಡ ಹರ್ಷೋದ್ಘಾರ ಮಾಡಿ ಸಂಭ್ರಮಿಸಿದೆ. ವಲ್ಲಿ, ರಮಾ, ಉಪಾಸನಾ ಸೀರೆ ಉಟ್ಟು ಕಾರ್ಯಕ್ರಮದಲ್ಲಿ ಮಿಂಚಿದ್ದರು. ಆ ಸಂಭ್ರಮದ ಫೋಟೊ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ಜಗತ್ತನ್ನು ಕುಣಿಸಿದ 'ನಾಟು ನಾಟು'

  ಜಗತ್ತನ್ನು ಕುಣಿಸಿದ 'ನಾಟು ನಾಟು'

  'RRR' ಚಿತ್ರಕ್ಕಾಗಿ ಎಂ. ಎಂ ಕೀರವಾಣಿ 'ನಾಟು ನಾಟು' ಎನ್ನುವ ಟಪ್ಪಾಂಗುಚಿ ಸಾಂಗ್ ಕಂಪೋಸ್ ಮಾಡಿದ್ದರು. ಕಳೆದ ವರ್ಷ ಮಾರ್ಚ್‌ನಲ್ಲಿ ಸಿನಿಮಾ ರಿಲೀಸ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಚಿತ್ರದ ಎಲ್ಲಾ ಹಾಡುಗಳು ಒಂದು ತೂಕವಾದರೆ 'ನಾಟು ನಾಟು' ಮತ್ತೊಂದು ತೂಕ. ಚಂದ್ರಬೋಸ್ ಸಾಹಿತ್ಯ ಬರೆದಿದ್ದ ಹಾಡಿಗೆ ಪ್ರೇಮ್‌ ರಕ್ಷಿತ್ ಡ್ಯಾನ್ಸ್ ಕಂಪೋಸ್ ಮಾಡಿದ್ದಾರೆ. ರಾಮ್‌ಚರಣ್, ತಾರಕ್ ಇಬ್ಬರು ಜಬರ್ದಸ್ತ್ ಸ್ಟೆಪ್ಸ್ ಹಾಕಿ ಧೂಳೆಬ್ಬಿಸಿದ್ದರು. ವಿದೇಶಗಳಲ್ಲಿ ಪ್ರೇಕ್ಷಕರು ಸಿನಿಮಾ ನೋಡಿ ಸ್ಕ್ರೀನ್‌ ಮುಂದೆ ಹೀಗೆ ಈ ಹಾಡಿಗೆ ಕುಣಿದು ಖುಷಿಪಟ್ಟಿದ್ದರು. ಅಷ್ಟರಮಟ್ಟಿಗೆ ಈ ಸಾಂಗ್ ಸೂಪರ್ ಹಿಟ್ ಆಗಿದೆ.

  English summary
  RRR Actor Ram charan's Wife Upasana Emotional Post About Her Baby. RRR movie team celebrates as 'Naatu Naatu' wins best original song award at Golden Globe 2023. know more.
  Thursday, January 12, 2023, 12:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X