For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ 24 ವರ್ಷಗಳ ಹಿಂದಿನ ದಾಖಲೆ ಮುರಿದ ಚರಣ್- ತಾರಕ್!

  |

  ಎಸ್‌. ಎಸ್ ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಜಪಾನ್‌ನಲ್ಲಿ ಹೊಸ ದಾಖಲೆ ಬರೆದಿದೆ. ಜಪಾನ್‌ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆಗೆ ರಾಮ್‌ಚರಣ್, ಜ್ಯೂ. ಎನ್‌ಟಿಆರ್ ನಟನೆಯ 'RRR' ಪಾತ್ರವಾಗಿದೆ.

  ಮಾರ್ಚ್ 25ಕ್ಕೆ ವಿಶ್ಯದಾದ್ಯಂತ ತೆರೆಗಪ್ಪಳಿಸಿ 'RRR' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 1150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಅಕ್ಟೋಬರ್ 21ಕ್ಕೆ ಚಿತ್ರವನ್ನು ಜಪಾನ್ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಿದ್ದರು. ಭರ್ಜರಿ ಓಪನಿಂಗ್ ಸಿಗದೇ ಇದ್ದರೂ ಸಿನಿಮಾ ನಿಧಾನವಾಗಿ ಪ್ರೇಕ್ಷಕರ ಮನಗೆದ್ದಿತ್ತು. ರಾಮ್‌-ಭೀಮ್ ಬ್ರೋಮ್ಯಾನ್ಸ್ ಜಪಾನ್ ಪ್ರೇಕ್ಷಕರು ಫಿದಾ ಆಗಿದ್ದರು. ಸಿನಿಮಾ ಜಪಾನ್ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ.

  ದಶಕಗಳ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಮುತ್ತು' ಸಿನಿಮಾ ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗಿತ್ತು. ಅವತ್ತಿನ ಕಾಲಕ್ಕೆ ಕೋಟಿ ಕೋಟಿ ಕೊಳ್ಳೆ ಹೊಡೆದು ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ತಲೈವಾ ಅಲ್ಲಿ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿಬಿಟ್ಟಿದ್ದರು. ಜಪಾನ್‌ನಲ್ಲೂ ದಕ್ಷಿಣ ಭಾರತ ಸಿನಿಮಾ ತಾಕತ್ತು ಏನು ಎನ್ನುವುದನ್ನು 'ಮುತ್ತು' ಸಾಬೀತು ಮಾಡಿತ್ತು. ಇದೀಗ 24 ವರ್ಷಗಳ ನಂತರ 'ಮುತ್ತು' ದಾಖಲೆಯನ್ನು ರಾಜಮೌಳಿ ನಿರ್ದೇಶನದ 'RRR' ಮುರಿದು ಮೊದಲ ಸ್ಥಾನಕ್ಕೇರಿದೆ.

  rrr-is-now-no-1-grosser-of-indian-cinema-at-the-japan-box-office

  ಸದ್ಯದ ಮಾಹಿತಿ ಪ್ರಕಾರ ಸಿನಿಮಾ 400 ಮಿಲಿಯನ್ ಯೆನ್ ಕಲೆಕ್ಷನ್ ಮಾಡಿದೆ. ಅಂದರೆ 24 ಕೋಟಿ 13 ಲಕ್ಷ ರೂ. ಗಳಿಸಿದೆ. ಸಿನಿಮಾ ಬಿಡುಗಡೆ ಸಮಯದಲ್ಲಿ ಮೌಳಿ, ತಾರಕ್ ಹಾಗೂ ಚರಣ್ ಜಪಾನ್‌ಗೆ ಹೋಗಿ ಪ್ರಚಾರ ಮಾಡಿ ಬಂದಿದ್ದರು. ಮೂವರಿಗೆ ಅಲ್ಲಿ ಭರ್ಜರಿ ಸ್ವಾಗತವೇ ಸಿಕ್ಕಿತ್ತು. ಇದನ್ನು ಮುನ್ನ 'RRR' ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿ ಹಾಲಿವುಡ್‌ ಫಿಲ್ಮ್ ಮೇಕರ್ಸ್‌ ಕೂಡ ಮೆಚ್ಚಿಕೊಂಡಿದ್ದರು. ಹಾಲಿವುಡ್ ಸಿನಿಮಾ ನಿರ್ದೇಶಕರೇ ಮೌಳಿ ಅಂಡ್ ಟೀಂ ಪ್ರಯತ್ನಕ್ಕೆ ಹ್ಯಾಟ್ಸಾಫ್ ಎಂದಿದ್ದರು.

  English summary
  Rajamouli's RRR is now No 1 Grosser of Indian cinema at the Japan Box office. Action entertainer movie broke the record set by Rajinikanth starrer Muthu in Japan. know more.
  Monday, December 12, 2022, 5:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X