For Quick Alerts
  ALLOW NOTIFICATIONS  
  For Daily Alerts

  ಹಾಲಿವುಡ್‌ನ ಖ್ಯಾತ ಮೋಜೊ ಯುಟ್ಯೂಬ್ ಚಾನೆಲ್‌ನಲ್ಲಿ ಫೀಚರ್ ಆದ ಭಾರತದ ಏಕೈಕ ಚಿತ್ರ RRR!

  |

  ವಾಚ್ ಮೋಜೊ ಸಿನಿಮಾ ವಿಮರ್ಶೆ ಹಾಗೂ ಸಿನಿಮಾ ಒಳಗೊಂಡಿರುವ ವಿಶಿಷ್ಟ ಹಾಗೂ ವಿಶೇಷ ಅಂಶಗಳನ್ನು ಪಟ್ಟಿ ಮಾಡಿ ಅದನ್ನು ವಿಡಿಯೋ ರೂಪದಲ್ಲಿ ಜನರಿಗೆ ತಲುಪಿಸುವ ವಿಶ್ವದ ಅತಿ ದೊಡ್ಡ ಯೂಟ್ಯೂಬ್ ಚಾನೆಲ್‌ಗಳಲ್ಲಿ ಒಂದು. 2006ರ ಜನವರಿ 23ರಂದು ಆರಂಭಗೊಂಡ ಈ ಸಂಸ್ಥೆ ಹದಿನಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು, ಇಂಗ್ಲಿಷ್ ಪೋರ್ಚುಗೀಸ್, ಹಿಂದಿ ಸೇರಿದಂತೆ 21 ಭಾಷೆಗಳಲ್ಲಿ ಲಭ್ಯವಿದೆ.

  ಕೆನಡಾದ ಕ್ಯೂಬೆಕ್ ನಗರದಲ್ಲಿ ತನ್ನ ಮುಖ್ಯ ಕಚೇರಿಯನ್ನು ಹೊಂದಿರುವ ಈ ವಾಚ್ ಮೋಜೋ ಡಾಟ್ ಕಾಂ ಹೆಚ್ಚಾಗಿ ಹಾಲಿವುಡ್ ಸಿನಿಮಾ ಹಾಗೂ ಕೊರಿಯನ್ ಸಿನಿಮಾಗಳ ಕುರಿತು ವಿಮರ್ಶೆ ಮತ್ತು ವಿವರಣೆಗಳನ್ನು ವಿಡಿಯೋ ಮಾಡಿ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ ಲೋಡ್ ಮಾಡಿದೆ. ತನ್ನ ಎಲ್ಲಾ ಯೂಟ್ಯೂಬ್ ಚಾನೆಲ್ ಸೇರಿದಂತೆ ಒಟ್ಟಾರೆ 40 ಮಿಲಿಯನ್‌ಗೂ ಹೆಚ್ಚು ಚಂದಾದಾರರನ್ನು ಹೊಂದಿರುವ ಮೋಜೋ ತನ್ನ ವಾಚ್ ಮೋಜೊ ಡಾಟ್ ಕಾಮ್ ಯುಟ್ಯೂಬ್ ಚಾನೆಲ್‌ನಲ್ಲಿ 24.7 ಮಿಲಿಯನ್ ಚಂದಾದಾರರನ್ನು ಹೊಂದಿದೆ.

  22000ಕ್ಕೂ ಅಧಿಕ ವಿಡಿಯೋಗಳನ್ನು ತನ್ನ ಚಾನೆಲ್‌ನಲ್ಲಿ ಪಬ್ಲಿಷ್ ಮಾಡಿರುವ ವಾಚ್ ಮೋಜೊ ಡಾಟ್ ಕಾಮ್ ಭಾರತದ ಯಾವುದೇ ಚಿತ್ರದ ಕುರಿತು ಕೂಡ ಒಂದೇ ಒಂದು ವಿಡಿಯೋವನ್ನು ಸಹ ಮಾಡಿರಲಿಲ್ಲ. ಆದರೆ 3 ದಿನಗಳ ಹಿಂದೆ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದ ಕುರಿತಾಗಿ ವಿಶೇಷವಾದ ವೀಡಿಯೊವೊಂದನ್ನು ವಾಚ್ ಮೋಜೋ ಡಾಟ್ ಕಾಮ್ ಹಂಚಿಕೊಂಡಿತ್ತು.

  ಈ ಮೂಲಕ ಈ ಅತಿ ದೊಡ್ಡ ಯೂಟ್ಯೂಬ್ ಚಾನೆಲ್‌ನಲ್ಲಿ ಫೀಚರ್ ಆದ ಮೊದಲನೇ ಭಾರತದ ಸಿನಿಮಾ ಎಂಬ ದಾಖಲೆಯನ್ನು ರಾಜಮೌಳಿ ಸಿನಿಮಾ ಬರೆದಿದೆ. ಆರ್ ಆರ್ ಆರ್ ಚಿತ್ರದ ಟಾಪ್ 10 ಅತ್ಯುತ್ತಮ ದೃಶ್ಯಗಳು ಎಂಬ ವಿಡಿಯೋವನ್ನು ವಾಚ್ ಮೋಜೋ ಡಾಟ್ ಕಾಮ್ ಹಂಚಿಕೊಂಡಿದ್ದು, ಈ ವಿಷಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  RRR is the only movie from India which featured on watch mojo youtube channel

  ಬ್ಯಾಟ್ ಮ್ಯಾನ್ ಜತೆ ಆರ್ ಆರ್ ಆರ್ ಹೋಲಿಸಿದ್ದ ವಾಚ್ ಮೋಜೊ!

  ಇನ್ನು ಇದೇ ವಾಚ್ ಮೋಜೊ ಜೂನ್ ತಿಂಗಳಿನಲ್ಲಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಸೃಷ್ಟಿಸಿ ಅದರಲ್ಲಿ ಬ್ಯಾಟ್ ಮ್ಯಾನ್ ಹಾಗೂ ಆರ್ ಆರ್ ಆರ್ ನಡುವೆ ಪೈಪೋಟಿಯನ್ನು ಏರ್ಪಡಿಸಿ ಈ ವರ್ಷದ ಅತ್ಯುತ್ತಮ ಚಿತ್ರ ಯಾವುದು ಎಂಬ ಪ್ರಶ್ನೆಯನ್ನು ಹಾಕಿತ್ತು. 11467 ಮತಗಳು ದಾಖಲಾಗಿದ್ದ ಈ ಪೈಪೋಟಿಯಲ್ಲಿ ರಾಜಮೌಳಿ ಸಿನಿಮಾ 83% ಮತ ಪಡೆದು ವಿನ್ನರ್ ಆಗಿ ಹೊರಹೊಮ್ಮಿತ್ತು.

  ಹೀಗೆ ಹಾಲಿವುಡ್ ಮಟ್ಟಕ್ಕೆ ಸದ್ದು ಮಾಡುತ್ತಿರುವ ಈ ಚಿತ್ರ ಈ ಬಾರಿಯ ಆಸ್ಕರ್ ಪ್ರಶಸ್ತಿಯನ್ನು ಕೂಡಾ ಕಬಳಿಸಬಹುದು ಎಂಬ ಭವಿಷ್ಯವನ್ನು ಹಲವಾರು ಮಂದಿ ನುಡಿಯುತ್ತಿದ್ದು, ದಿನದಿಂದ ದಿನಕ್ಕೆ ಈ ಚಿತ್ರದ ಗ್ಲೋಬಲ್ ರೀಚ್ ವಿಸ್ತಾರವಾಗುತ್ತಲೇ ಇದೆ.

  English summary
  RRR is the only movie from India which featured on watch mojo youtube channel. Read on.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X