twitter
    For Quick Alerts
    ALLOW NOTIFICATIONS  
    For Daily Alerts

    ಯುರೋಪ್‌ಗೆ ಹಾರಿದ ರಾಜಮೌಳಿ 'RRR' ತಂಡ; ಕಾರಣವೇನು?

    |

    ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ಚಿತ್ರಗಳಲ್ಲಿ ಒಂದಾಗಿರುವ ಆರ್ ಆರ್ ಆರ್ ಸಿನಿಮಾದಿಂದ ದಿನಕ್ಕೊಂದು ಸುದ್ದಿ ಹೊರಬೀಳುತ್ತಿದೆ. ಇತ್ತೀಚಿಗಷ್ಟೆ ಚಿತ್ರದಿಂದ ಮೊದಲ ಹಾಡನ್ನು ಬಿಡುಗಡೆ ಮಾಡಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದ ಸಿನಿಮಾತಂಡ ಇದೀಗ ಯುರೋಪ್ ಕಡೆ ಹೊರಟಿದೆ.

    ಆರ್ ಆರ್ ಆರ್ ಚಿತ್ರತಂಡ ವಿದೇಶಿ ಪಯಣ ಬೆಳೆಸಿದೆ. ಅಂದಹಾಗೆ ಯುರೋಪ್ ಕಡೆ ಹೊರಡಲು ಕಾರಣ ಚಿತ್ರದ ಬಹುನಿರೀಕ್ಷೆಯ ಹಾಡಿನ ಚಿತ್ರೀಕರಣಕ್ಕಾಗಿ. ಕೊನೆಯ ಹಾಡಿನ ಚಿತ್ರೀಕರಣ ಬಾಕಿಯುಳಿಸಿಕೊಂಡಿದ್ದ ಸಿನಿಮಾತಂಡ ಇದೀಗ ಆ ಹಾಡನ್ನು ಸೆರೆಹಿಡಿಯಲು ವಿದೇಶಕ್ಕೆ ಹಾರಿದೆ.

    ಐಎಂಡಿಬಿ ರೇಟಿಂಗ್: ವಿಕ್ರಾಂತ್ ರೋಣ ಟಾಪ್, RRR ಪಟ್ಟಿಯಲ್ಲೇ ಇಲ್ಲಐಎಂಡಿಬಿ ರೇಟಿಂಗ್: ವಿಕ್ರಾಂತ್ ರೋಣ ಟಾಪ್, RRR ಪಟ್ಟಿಯಲ್ಲೇ ಇಲ್ಲ

    ಅಭಿಮಾನಿಗಳಿಗೆ ದೋಸ್ತಿ ಸರ್ಪ್ರೈಸ್ ನೀಡಿದ ಬೆನ್ನಲ್ಲೇ ಕೊನೆಯ ಹಾಡಿನ ಚಿತ್ರೀಕರಣಕ್ಕೆಂದು ರಾಜಮೌಳಿ ಮತ್ತು ತಂಡ ಯುರೋಪ್‌ಗೆ ಹಾರಿದೆ. ಚಿತ್ರದ ವಿಶೇಷ ಹಾಡನ್ನು ಜಾರ್ಜಿಯಾದ ಸುಂದರ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗುತ್ತೆ ಎನ್ನುವ ಮಾಹಿತಿ ತಿಳಿದುಬಂದಿದೆ. ಮುಂದೆ ಓದಿ..

    ಮೂರು ವಾರಗಳ ಚಿತ್ರೀಕರಣ

    ಮೂರು ವಾರಗಳ ಚಿತ್ರೀಕರಣ

    ಸುಮಾರು ಮೂರು ವಾರಗಳು ಜಾರ್ಜಿಯಾದಲ್ಲಿ ಬೀಡುಬಿಟ್ಟು, ಈ ಹಾಡನ್ನು ಚಿತ್ರೀಕರಣ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ಆಗಸ್ಟ್ ಕೊನೆಯ ವಾರದಲ್ಲಿ ಆರ್ ಆರ್ ಆರ್ ತಂಡ ಚಿತ್ರೀಕರಣ ಮುಗಿಸಿ ಭಾರತಕ್ಕೆ ವಾಪಸ್ ಆಗಲಿದೆ. ಈ ಹಾಡಿನ ಮೂಲಕ ಚಿತ್ರದ ಸಂಪೂರ್ಣ ಚಿತ್ರೀಕರಣ ಮುಕ್ತಾಯವಾಗಲಿದೆ. ಸುಮಾರು 3 ವರ್ಷಗಳಿಂದ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ. ಕೊರೊನಾ ಅಡೆತಡೆಗಳ ನಡುವೆಯೂ ಯಶಸ್ವಿಯಾಗಿ ಚಿತ್ರೀಕರಣ ಮುಗಿಸುತ್ತಿದೆ ಸಿನಿಮಾತಂಡ.

    ಎರಡು ಭಾಷೆಯ ಡಬ್ಬಿಂಗ್ ಮುಕ್ತಾಯ

    ಎರಡು ಭಾಷೆಯ ಡಬ್ಬಿಂಗ್ ಮುಕ್ತಾಯ

    ಈಗಾಗಲೇ ಟಾಕಿ ಭಾಗ ಮುಗಿಸಿರುವ ಆರ್ ಆರ್ ಆರ್ ತಂಡ, ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ಇಬ್ಬರು ಎರಡು ಭಾಷೆಯ ಡಬ್ಬಿಂಗ್ ಕೆಲಸವನ್ನು ಮುಗಿಸಿದ್ದಾರೆ ಎಂದು ಚಿತ್ರತಂಡ ಈ ಹಿಂದೆಯೇ ಮಾಹಿತಿ ಹಂಚಿಕೊಂಡಿತ್ತು. ಇದೀಗ ಕೊನೆಯದಾಗಿ ಹಾಡಿನ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಲಿದೆ.

    'KGF-2' ದಾಖಲೆ ಮುರಿದ 'RRR': ಭರ್ಜರಿ ಮೊತ್ತಕ್ಕೆ ಆಡಿಯೋ ಹಕ್ಕು ಮಾರಾಟ'KGF-2' ದಾಖಲೆ ಮುರಿದ 'RRR': ಭರ್ಜರಿ ಮೊತ್ತಕ್ಕೆ ಆಡಿಯೋ ಹಕ್ಕು ಮಾರಾಟ

    ದೋಸ್ತಿ ಹಾಡು ಬಿಡುಗಡೆ

    ದೋಸ್ತಿ ಹಾಡು ಬಿಡುಗಡೆ

    ಸ್ನೇಹಿತರ ದಿನಾಚರಣೆ ವಿಶೇಷವಾಗಿ ಆರ್ ಆರ್ ಆರ್ ತಂಡ ದೋಸ್ತಿ ಹಾಡನ್ನು ಬಿಡುಗಡೆ ಮಾಡಿದೆ. ಈ ಹಾಡು 5 ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಐದು ಭಾಷೆಯಲ್ಲಿ ಹಾಡಿದ ಗಾಯಕರು ಕಾಣಿಸಿಕೊಂಡಿದ್ದಾರೆ. ಜೊತೆಗೆ ಖ್ಯಾತ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಮತ್ತು ರಾಮ್ ಚರಣ್ ಹಾಗೂ ಜೂ. ಎನ್ ಟಿ ಆರ್ ಕೊನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡು ಬಿಡುಗಡೆಯಾಗಿ ಕೆಲವೇ ಗಂಟೆಯಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ.

    ದಾಖಲೆ ಬೆಲೆಗೆ ಆಡಿಯೋ ಮಾರಾಟ

    ದಾಖಲೆ ಬೆಲೆಗೆ ಆಡಿಯೋ ಮಾರಾಟ

    ಬಹುನಿರೀಕ್ಷೆಯ ಆರ್ ಆರ್ ಆರ್ ಸಿನಿಮಾದ ಆಡಿಯೋವನ್ನು ಟಿ ಸಿರೀಸ್ ಮತ್ತು ಲಹರಿ ಸಂಸ್ಥೆ ಖರೀದಿ ಮಾಡಿದೆ. ಐದಕ್ಕಿಂತ ಹೆಚ್ಚು ಭಾಷೆಯಲ್ಲಿ ತೆರೆಗೆ ಬರುತ್ತಿರುವ ಆರ್ ಆರ್ ಆರ್ ಸಿನಿಮಾದ ಆಡಿಯೋಗೆ 25 ಕೋಟಿ ರೂ. ನೀಡುವ ಮೂಲಕ ಟಿ ಸಿರೀಸ್ ಮತ್ತು ಲಹರಿ ಸಂಸ್ಥೆ ತನ್ನದಾಗಿಸಿಕೊಂಡಿದೆ. ಇದು ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ದಾಖಲೆಯನ್ನು ಮುರಿದಿದೆ.

    ಐದು ಭಾಷೆಯಲ್ಲಿ ಆರ್ ಆರ್ ಆರ್ ಮೋಡಿ

    ಐದು ಭಾಷೆಯಲ್ಲಿ ಆರ್ ಆರ್ ಆರ್ ಮೋಡಿ

    ಪ್ಯಾನ್ ಇಂಡಿಯಾ ಸಿನಿಮಾ RRR ತೆಲುಗು ಜೊತೆಗೆ ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಡಿವಿವಿ ಎಂಟರ್ ಟೈನ್ ಮೆಂಟ್ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ 450 ಕೋಟಿ ರೂ.ಗೂ ಹೆಚ್ಚಿನ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ.

    ಚಿತ್ರದಲ್ಲಿದೆ ದೊಡ್ಡ ತಾರಾಬಳಗ

    ಚಿತ್ರದಲ್ಲಿದೆ ದೊಡ್ಡ ತಾರಾಬಳಗ

    ಚಿತ್ರದಲ್ಲಿ ಜೂ.ಎನ್ ಟಿ ಆರ್ ಕೋಮರಾಮ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡರೆ, ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ವಿಶೇಷ ಎಂದರೆ ಚಿತ್ರದಲ್ಲಿ ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಸಹ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ಸೀತಾ ಪಾತ್ರದಲ್ಲಿ ಬಾಲಿವುಡ್ ನಟಿ ಅಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಅಲಿಯಾ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಬಣ್ಣ ಹಚ್ಚಿದ್ದು, ಚಿತ್ರದ ಬಗ್ಗೆ ಸಖತ್ ಉತ್ಸುಕರಾಗಿದ್ದಾರೆ.

    ಅಕ್ಟೋಬರ್‌ನಲ್ಲಿ ಬಿಡುಗಡೆ?

    ಅಕ್ಟೋಬರ್‌ನಲ್ಲಿ ಬಿಡುಗಡೆ?

    ಇನ್ನು ಆರ್ ಆರ್ ಆರ್ ಬಿಡುಗಡೆ ಯಾವಾಗ ಎನ್ನುವುದು ಕುತೂಹಲ ಮೂಡಿಸಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಅಕ್ಟೋಬರ್ 13ರಂದು ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಬಿಡುಗಡೆ ದಿನಾಂಕದಲ್ಲಿ ವ್ಯತ್ಯಾಸವಾಗುತ್ತಾ ಎನ್ನುವುದು ಅನುಮಾನ ಕಾಡುತ್ತಿದೆ. ಆದರೆ ಕೊರೊನಾ ನಿಯಂತ್ರಣದಲ್ಲಿದ್ದರೆ ಸಿನಿಮಾ ಅಕ್ಟೋಬರ್ 13ಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ.

    English summary
    RRR movie team left for East Europe on August 2nd to film a final song.
    Monday, August 2, 2021, 14:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X