For Quick Alerts
  ALLOW NOTIFICATIONS  
  For Daily Alerts

  'RRR' ಸಿನಿಮಾದ ನಟಿ ಗರ್ಭಿಣಿ: ಮತ್ತೆ ನಾಯಕಿಯ ಹುಡುಕಾಟದಲ್ಲಿ ರಾಜಮೌಳಿ?

  By ಫಿಲ್ಮ್ ಡೆಸ್ಕ್
  |

  ದಕ್ಷಿಣ ಭಾರತದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಕೂಡ ಒಂದು. ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕೊರೊನಾ ಲಾಕ್ ಡೌನ್ ಕಾರಣ ಚಿತ್ರೀಕರಣ ಸ್ಥಗಿತಗೊಳಿಸಿದೆ. ಈ ಸಮಯದಲ್ಲಿ ಚಿತ್ರದ ನಾಯಕಿ ಎಮ್ಮಾ ರಾಬರ್ಟ್ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.

  Sushant Singh's case should be handed over to CBI says Roopa Ganguly | Sushanth Singh

  ಎಮ್ಮಾ ತಾಯಿಯಾಗುತ್ತಿರುವುದು ಸಂತಸದ ವಿಚಾರ ಆದರೂ, ಚಿತ್ರತಂಡಕ್ಕೆ ದೊಡ್ಡ ಆಘಾತವಾಗಿದೆ. ಎಮ್ಮಾ ಗರ್ಭಿಣಿ ಆಗಿರುವುದರಿಂದ ಮತ್ತೆ ಸಿನಿಮಾದಲ್ಲಿ ಅಭಿನಯಿಸುವುದು ಅನುಮಾನವಾಗಿದೆ. ಅಭಿನಯಿಸಿದರೂ ತುಂಬಾ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಚಿತ್ರತಂಡ ಮತ್ತೆ ಬೇರೆ ನಾಯಕಿಯ ಹುಡುಕಾಟದಲ್ಲಿದೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ..

  ಬ್ರಿಟನ್‌ನಿಂದ ಬಂದ ಜೂ.ಎನ್‌ ಟಿ ಆರ್ ನಾಯಕಿ: ಅಬ್ಬಾ ಎಂಥಾ ಸುಂದರಿಬ್ರಿಟನ್‌ನಿಂದ ಬಂದ ಜೂ.ಎನ್‌ ಟಿ ಆರ್ ನಾಯಕಿ: ಅಬ್ಬಾ ಎಂಥಾ ಸುಂದರಿ

  ಚಿತ್ರದಲ್ಲಿ ಜೂ ಎನ್ ಟಿ ಆರ್ ಗೆ ನಾಯಕಿ

  ಚಿತ್ರದಲ್ಲಿ ಜೂ ಎನ್ ಟಿ ಆರ್ ಗೆ ನಾಯಕಿ

  ಚಿತ್ರದಲ್ಲಿ ಈಗಾಗಲೆ ಅಲಿಯಾ ಭಟ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಬ್ರಿಟನ್ ನಾಯಕಿಯ ಅವಶ್ಯಕಥೆ ಇದೆ ಎಂದು ಹಾಲಿವುಡ್ ನ ಖ್ಯಾತ ನಟಿ ಎಮ್ಮಾ ಅವರನ್ನು ಆಯ್ಕೆ ಮಾಡಲಾಗಿತ್ತು. ಎಮ್ಮಾ, ಜೂ ಎನ್ ಟಿ ಆರ್ ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಎಮ್ಮಾ ನಟಿಸುವುದು ಅನುಮಾನವಾಗಿದೆ.

  RRR ಸಿನಿಮಾ ಫ್ಲಾಪ್ ಆದರೆ ಯಾರು-ಯಾರು ಸಂಭ್ರಮಿಸುತ್ತಾರೆ?RRR ಸಿನಿಮಾ ಫ್ಲಾಪ್ ಆದರೆ ಯಾರು-ಯಾರು ಸಂಭ್ರಮಿಸುತ್ತಾರೆ?

  ಡೈಸಿ ಈದ್ಗರ್ ಜಾಗಕ್ಕೆ ಬಂದ ನಟಿ ಎಮ್ಮಾ?

  ಡೈಸಿ ಈದ್ಗರ್ ಜಾಗಕ್ಕೆ ಬಂದ ನಟಿ ಎಮ್ಮಾ?

  ಆರ್ ಆರ್ ಆರ್ ಸಿನಿಮಾದಲ್ಲಿ ವಿದೇಶಿ ನಾಯಕಿ ಬೇಕು ಎನ್ನುವ ಕಾರಣಕ್ಕೆ ನಟಿ ಡೈಸಿ ಈದ್ಗರ್ ಅವರನ್ನು ಈ ಮೊದಲು ಆಯ್ಕೆ ಮಾಡಲಾಗಿತ್ತು. ಡೈಸ್ ಜೂ.ಎನ್ ಟಿ ಆರ್ ಗೆ ನಾಯಕಿಯಾಗಿ ನಟಿಸಬೇಕಿತ್ತು. ಆದರೆ ಡೈಸಿ ಕಾರಣಾಂತರಗಳಿಂದ ಸಿನಿಮಾದಿಂದ ಹೊರನಡೆದಿದ್ದಾರಂತೆ. ಡೈಸ್ ಜಾಗಕ್ಕೆ ನಟಿ ಎಮ್ಮಾ ಆಯ್ಕೆಯಾಗಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೆ ಮತ್ತೋರ್ವ ನಾಯಕಿ ಒಲಿವಿಯಾ ಮೋರಿಸನ್ ಸಹ ನಟಿಸುತ್ತಿದ್ದಾರೆ. ಆದರೆ ಒಲವಿಯಾ ಜೂ.ಎನ್ ಟಿ ಆರ್ ಗೆ ನಾಯಕಿ ಜಾಗಕ್ಕೆ ಬಂದಿದ್ದಾರಾ ಅಥವಾ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಅಧಿಕೃವಾಗಿಲ್ಲ. ಈ ಬಗ್ಗೆ ಚಿತ್ರತಂಡ ಎಲ್ಲಿಯೂ ಹೇಳಿಕೊಂಡಿಲ್ಲ.

  ಅಬ್ಬಾ..! RRR ಸಿನಿಮಾ ಸೆಟ್ ಗೆ ಇಷ್ಟು ಕೋಟಿ ಖರ್ಚು ಮಾಡುತ್ತಿದ್ದಾರಾ?ಅಬ್ಬಾ..! RRR ಸಿನಿಮಾ ಸೆಟ್ ಗೆ ಇಷ್ಟು ಕೋಟಿ ಖರ್ಚು ಮಾಡುತ್ತಿದ್ದಾರಾ?

  ಮಗಳು ಗರ್ಭಿಣಿ ಎಂದು ಬಹಿರಂಗ ಪಡಿಸಿದ ತಾಯಿ

  ಮಗಳು ಗರ್ಭಿಣಿ ಎಂದು ಬಹಿರಂಗ ಪಡಿಸಿದ ತಾಯಿ

  ಎಮ್ಮಾ ರಾಬರ್ಟ್ ತಾಯಿ ಕೆಲ್ಲಿ ಕನ್ನಿಂಗ್ಯಾಮ್ ಮಗಳು ಗರ್ಭಿಣಿ ಆಗಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ. ನಿಜಾನಾ ಎನ್ನುವ ಬಗ್ಗೆ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಎಮ್ಮಾ ಹೌದು ಎಂದು ಉತ್ತರಿಸಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಶುಭಾಶಯತಿಳಿಸುತ್ತಿದ್ದಾರೆ.

  ಮದುವೆಗೂ ಮೊದಲೆ ಗರ್ಭಿಣಿಯಾದ ನಟಿ

  ಮದುವೆಗೂ ಮೊದಲೆ ಗರ್ಭಿಣಿಯಾದ ನಟಿ

  ನಟಿ ಎಮ್ಮಾ ರಾಬರ್ಟ್ ಈ ಮೊದಲು ಅಂದರೆ ಕಳೆದ ವರ್ಷದ ವರೆಗೂ ಪೀಟರ್ಸ್ ಜೊತೆ ಡೇಟಿಂಗ್ ನಲ್ಲಿದ್ದರು. 2019ರಲ್ಲಿ ಪೀಟರ್ ಜೊತೆ ಸಂಬಂಧ ಕಡಿದುಕೊಂಡು ದೂರ ಆದರು. ಸುಮಾರು 5 ವರ್ಷಗಳಿಂದ ಡೇಟಿಂಗ್ ನಲ್ಲಿದ್ದ ಈ ಜೋಡಿ ಬೇರೆ ಬೇರೆ ಆಗಿದ್ದಾರೆ. ನಂತರ ಅಮೆರಿಕದ ನಟ ಗ್ಯಾರೆಟ್ ಹೆಡ್ಲಂಡ್ ಜೊತೆ ಡೇಟಿಂಗ್ ನಲ್ಲಿದ್ದರು. ಸದ್ಯ ಗ್ಯಾರೆಟ್ ಮತ್ತು ಎಮ್ಮಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

  ನಾಯಕಿಯ ಹುಡುಕಾಟದಲ್ಲಿ ಸಿನಿಮಾತಂಡ

  ನಾಯಕಿಯ ಹುಡುಕಾಟದಲ್ಲಿ ಸಿನಿಮಾತಂಡ

  ಈಗಾಗಲೆ ಎರಡು ಬಾರಿ ನಾಯಕಿಯ ಬದಲಾವಣೆ ಆಗಿರುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ. ಈ ನಡುವೆ ಮತ್ತೆ ನಾಯಕಿಯ ಹುಡುಕುವುದು ದೊಡ್ಡ ಸವಾಲಾಗಿದೆ. ಜೂ. ಎನ್ ಟಿ ಆರ್ ನಾಯಕಿಯ ಪಾತ್ರಕ್ಕೆ ವಿದೇಶಿ ನಟಿಯೇ ಬೇಕಾಗಿರುವುದರಿಂದ ಮತ್ಯಾವ ನಟಿಗೆ ಮಣೆ ಹಾಕುತ್ತಾರೆ ಎನ್ನುವುದು ಕಾದು ನೋಡಬೇಕು.

  English summary
  RRR movie heroine Hollywood Actress emma roberts all set welcome her first child.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X