For Quick Alerts
  ALLOW NOTIFICATIONS  
  For Daily Alerts

  ಸರ್ಕಾರ-ಚಿತ್ರರಂಗದ ಹಗ್ಗ ಜಗ್ಗಾಟ: ನಷ್ಟ ಕಾಣಲಿದೆ RRR

  |

  ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ರಾಜಮೌಳಿ ನಿರ್ದೇಶನದ RRR ಸಹ ಒಂದು. ಜೂ.ಎನ್‌ಟಿಆರ್, ರಾಮ್ ಚರಣ್ ತೇಜ ಸೇರಿ ಇನ್ನೂ ಹಲವು ಸೂಪರ್ ಸ್ಟಾರ್‌ಗಳು ನಟಿಸಿರುವ ಈ ಸಿನಿಮಾ ತೆಲುಗಿನ ದೊಡ್ಡ ಹಿಟ್ ಆಗಲಿದೆ ಎನ್ನಲಾಗಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್‌ ಅಂದಾಜು ಮಾಡಲಾಗುತ್ತಿದೆ.

  ಆದರೆ ಆರ್‌ಆರ್‌ಆರ್ ಸಿನಿಮಾಕ್ಕೆ ಸರ್ಕಾರದ ನಿರ್ಣಯ ದೊಡ್ಡ ತಲೆ ನೋವು ತಂದಿದೆ. ಸಿನಿಮಾದ ಒಟ್ಟಾರೆ ಕಲೆಕ್ಷನ್ ಸುಮಾರು 30% ಕಡಿಮೆ ಆಗುವ ಸಂಭವಗಳು ಎದುರಾಗಿವೆ.

  ಆಂಧ್ರ ಪ್ರದೇಶ ಸರ್ಕಾರವು ಚಿತ್ರಮಂದಿರ ಟಿಕೆಟ್ ದರ ಪರಿಷ್ಕರಣೆ ಮಾಡಿದ್ದು ಇದರಿಂದಾಗಿ ಆಂಧ್ರದ ಕೋಸ್ಟಲ್ ಏರಿಯಾದಲ್ಲಿ ಆರ್‌ಆರ್‌ಆರ್ ಟಿಕೆಟ್ ಕಲೆಕ್ಷನ್‌ನಲ್ಲಿ 30% ಕುಸಿತವಾಗುತ್ತಿದೆ. ಅದು ಮಾತ್ರವೇ ಅಲ್ಲದೆ ಆಂಧ್ರದ ಗ್ರಾಮೀಣ ಭಾಗಗಳಲ್ಲಿಯೂ ನಿರೀಕ್ಷೆಗಿಂತಲೂ 30% ಲಾಭ ಕಡಿಮೆ ಆಗಲಿದೆ. ಇದರಿಂದಾಗಿ ಸಿನಿಮಾದ ಒಟ್ಟಾರೆ ಕಲೆಕ್ಷನ್‌ಗೆ ದೊಡ್ಡ ಪೆಟ್ಟು ಬೀಳಲಿದೆ.

  ಹೊರ ರಾಜ್ಯ ಹಾಗೂ ದೇಶಗಳಲ್ಲಿ ಬಿಡುಗಡೆ ಮಾಡಲು ಯೋಜನೆ

  ಹೊರ ರಾಜ್ಯ ಹಾಗೂ ದೇಶಗಳಲ್ಲಿ ಬಿಡುಗಡೆ ಮಾಡಲು ಯೋಜನೆ

  ತೆಲಂಗಾಣ ರಾಜ್ಯಕ್ಕೆ ಹೋಲಿಸಿದರೆ ಆಂಧ್ರದ ಕೆಲಕ್ಷನ್‌ನಲ್ಲಿ 'ಆರ್‌ಆರ್‌ಆರ್‌'ಗೆ ದೊಡ್ಡ ಪೆಟ್ಟು ಬೀಳಲಿದ್ದು ಅದನ್ನು ಸರಿತೂಗಿಸಲು ಚಿತ್ರತಂಡ ಹೊರ ರಾಜ್ಯಗಳಲ್ಲಿ ಸಿನಿಮಾವನ್ನು ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲು ಯೋಜಿಸಿದೆ. ಜೊತೆಗೆ 'ಆರ್‌ಆರ್‌ಆರ್' ಸಿನಿಮಾವನ್ನು ಅತಿ ಹೆಚ್ಚು ವಿದೇಶಿ ಚಿತ್ರಮಂದಿರಗಳಲ್ಲಿಯೂ ಬಿಡುಗಡೆ ಮಾಡಲು ಯೋಜಿಸಲಾಗಿದೆ. ವಿದೇಶದಲ್ಲಿ ಅತಿ ಹೆಚ್ಚು ಸ್ಕ್ರೀನ್‌ನಲ್ಲಿ ಬಿಡುಗಡೆ ಆಗಲಿರುವ ಸಿನಿಮಾ ಎನ್ನಿಸಿಕೊಳ್ಳಲಿದೆ ಆರ್‌ಆರ್ಆರ್. ಆಂಧ್ರದಲ್ಲಿ ಆಗುವ ನಷ್ಟವನ್ನು ಸರಿತೂಗಿಸಿಕೊಳ್ಳಲು ಚಿತ್ರತಂಡ ಯೋಜಿಸಿದೆ.

  ಆಂಧ್ರ ಸರ್ಕಾರ v/s ಸಿನಿಮಾ ರಂಗ

  ಆಂಧ್ರ ಸರ್ಕಾರ v/s ಸಿನಿಮಾ ರಂಗ

  ಆಂಧ್ರ ಪ್ರದೇಶ ಸರ್ಕಾರ ಹಾಗೂ ತೆಲುಗು ಚಿತ್ರರಂಗದ ನಡುವೆ ಚಿತ್ರಮಂದಿರ ಟಿಕೆಟ್ ದರಕ್ಕೆ ಸಂಬಂಧಿಸಿದಂತೆ ಸಮರವೇ ಏರ್ಪಟ್ಟಿದೆ. ಚಿತ್ರಮಂದಿರಗಳ ಟಿಕೆಟ್ ದರವನ್ನು ಏರಿಕೆ ಮಾಡಬೇಕೆಂದು ಚಿತ್ರರಂಗವು ಒಕ್ಕೂರಲಿನಿಂದ ಬೇಡಿಕೆ ಇಟ್ಟಿದೆ. ಆದರೆ ಜಗನ್ ಸರ್ಕಾರ ಇದಕ್ಕೆ ಒಪ್ಪಿಲ್ಲ ಬದಲಿಗೆ ಆಂಧ್ರದ ಕೆಲವು ಭಾಗಗಳಲ್ಲಿ ಟಿಕೆಟ್ ದರವನ್ನು ಇನ್ನಷ್ಟು ತಗ್ಗಿಸಿದೆ. ಇದು ಜಗನ್ ಹಾಗೂ ಚಿತ್ರರಂಗದ ನಡುವೆ ದೊಡ್ಡ ಬಿರುಕು ಮೂಡಲು ಕಾರಣವಾಗಿದೆ. ಆದರೆ ತೆಲಂಗಾಣ ರಾಜ್ಯದಲ್ಲಿ ಯಾವುದೇ ಸಮಸ್ಯೆ ಅಲ್ಲಿ ಟಿಕೆಟ್ ದರಗಳು ಸಮಂಜಸವಾಗಿವೆ ಎಂದು ತೆಲುಗು ಚಿತ್ರರಂಗ ಹೇಳಿದೆ.

  ದಾಖಲೆ ಬೆಲೆಗೆ ಮಾರಾಟ

  ದಾಖಲೆ ಬೆಲೆಗೆ ಮಾರಾಟ

  'ಆರ್‌ಆರ್‌ಆರ್‌' ಸಿನಿಮಾದ ಅಂತಿಮ ಕಟ್ ತಯಾರಾಗಿದ್ದು ಸಿನಿಮಾದ ಕೆಲವು ಪ್ರಮುಖ ಭಾಗಗಳಿಗೆ ರಾಜಮೌಳಿ ಕತ್ತರಿ ಹಾಕಿ ಸಿನಿಮಾದ ಅವಧಿಯನ್ನು ಕಡಿತಗೊಳಿಸಿದ್ದಾರೆ ಎನ್ನಲಾಗುತ್ತಿದೆ. ಈ ಬದಲಾವಣೆಯನ್ನು ಒಟಿಟಿಯಲ್ಲಿ ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. 'ಆರ್‌ಆರ್‌ಆರ್' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಭಾರಿ ದೊಡ್ಡ ಮೊತ್ತದ ಹಣವನ್ನೇ ಒಟಿಟಿ ಮಾರಾಟದಿಂದ ಈ ಸಿನಿಮಾ ಪಡೆಯುತ್ತಿದೆ ಎನ್ನಲಾಗಿದೆ. ಸ್ಯಾಟಲೈಟ್ ಹಕ್ಕುಗಳು ಸಹ ದಾಖಲೆ ಬೆಲೆಗೆ ಮಾರಾಟವಾಗುತ್ತಿವೆ.

  ಸಿನಿಮಾ ಬಿಡುಗಡೆ ಯಾವಾಗ?

  ಸಿನಿಮಾ ಬಿಡುಗಡೆ ಯಾವಾಗ?

  'ಆರ್‌ಆರ್‌ಆರ್' ಸಿನಿಮಾವು ಜನವರಿ 7 ರಂದು ಬಿಡುಗಡೆ ಆಗಲಿದೆ. ರಾಜಮೌಳಿ ನಿರ್ದೇಶನದ ಈ ಸಿನಿಮಾದಲ್ಲಿ ಜೂ.ಎನ್‌ಟಿಆರ್ ಕೋಮರಂ ಭೀಮ್ ಪಾತ್ರದಲ್ಲಿ, ರಾಮ್ ಚರಣ್ ತೇಜ, ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅಜಯ್ ದೇವಗನ್, ಆಲಿಯಾ ಭಟ್, ಶ್ರೆಯಾ ಶಿರಿನ್ ಇನ್ನೂ ಹಲವು ಸ್ಟಾರ್ ನಟರು ನಟಿಸಿದ್ದಾರೆ. ಸಿನಿಮಾಕ್ಕೆ ಕೀರವಾಣಿ ಸಂಗೀತ ನೀಡಿದ್ದು, ಬಂಡವಾಳ ಹೂಡಿರುವುದು ಡಿವಿವಿ ದಯಾನಂದ. ತೆಲುಗು ರಾಜ್ಯಗಳ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಕುರಿತ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

  English summary
  RRR movie may face 30% loss in some areas of Andhra Pradesh due to government's new policy about theater ticket price.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X