ಆರ್‌ಆರ್‌ಆರ್‌ ಅಭಿಮಾನಿಗಳಿಗೆ ಕಹಿ ಸುದ್ದಿ: ಸನಿಹದಲ್ಲಿಲ್ಲ ಸಿನಿಮಾ ಬಿಡುಗಡೆ

ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು ರಾಜಮೌಳಿ ನಿರ್ದೇಶಿಸುತ್ತಿರುವ ಆರ್‌ಆರ್‌ಆರ್ ಸಿನಿಮಾ.

ಜೂ.ಎನ್‌ಟಿಆರ್, ರಾಮ್‌ಚರಣ್ ತೇಜ ನಟಿಸುತ್ತಿರುವ ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ ನಿಜ, ಆದರೆ ಸಿನಿಮಾ ಬಿಡುಗಡೆ ಬಹಳ ತಡವಾಗಿಯೇ ಆಗಲಿದೆ.

ಹೌದು, ಸಿನಿಮಾವು 2021 ರ ಮಧ್ಯಭಾಗದಲ್ಲಿ ಆಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಅದು ಇನ್ನಷ್ಟು ತಡವಾಗಿ 2022 ರ ಜನವರಿ ತಿಂಗಳಿಗೆ ಹೋಗಿದೆ.

 RRR Movie May Release January 2022

ಕೊರೊನಾವು ಆರ್‌ಆರ್‌ಆರ್ ಸಿನಿಮಾಕ್ಕೆ ಬಹುದೊಡ್ಡ ಅಡ್ಡಗಾಲಾಗಿತ್ತು. ಕೊರೊನಾ ಕಾರಣದಿಂದಾಗಿ ಆರು ತಿಂಗಳಿಗೂ ಹೆಚ್ಚು ಕಾಲ ಸಿನಿಮಾದ ಚಿತ್ರೀಕರಣ ಬಂದ್ ಆಗಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಿದೆಯಾದರೂ ಈ ಮಲ್ಟಿಸ್ಟಾರರ್ ಸಿನಿಮಾ ಬೇಗನೇ ಪೂರ್ತಿಗೊಳ್ಳುವುದಿಲ್ಲವಂತೆ.

ರಾಜಮೌಳಿ, ನಿಖರತೆ ಬೇಡುವ ನಿರ್ದೇಶಕ. ಸಂತೆಗೆ ಮೊಳ ನೇಯ್ದಂತೆ ಆತುರದಲ್ಲಿ ಚಿತ್ರೀಕರಣ ಮುಗಿಸುವುದು ಅವರ ಸ್ಟೈಲ್ ಅಲ್ಲ. ಬಾಹುಬಲಿಯ ಎರಡು ಭಾಗ ನಿರ್ದೇಶಿಸಿ ಬಿಡುಗಡೆ ಗೊಳಿಸಲು ಒಟ್ಟು ನಾಲ್ಕು ವರ್ಷ ಸಮಯ ತೆಗೆದುಕೊಂಡಿದ್ದರು ರಾಜಮೌಳಿ.

ರಾಜಮೌಳಿ ಸಿನಿಮಾದಗಳಲ್ಲಿ ಚಿತ್ರೀಕರಣಕ್ಕೆ ಹಿಡಿದಕ್ಕಿಂತಲೂ ಹೆಚ್ಚು ಶ್ರಮ ಮತ್ತು ಸಮಯ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳಿಗೆ ಹಿಡಿಯುತ್ತದೆ. ಗ್ರಾಫಿಕ್ಸ್, ವಿಎಫ್‌ಕ್ಸ್‌, ಸೌಂಡ್ ಮಿಕ್ಸಿಂಗ್, ಗ್ರೀನ್ ಮ್ಯಾಟ್ ಶೂಟಿಂಗ್, ಎಡಿಟಿಂಗ್, ಡಬ್ಬಿಂಗ್ ಎಲ್ಲದಕ್ಕೂ ಸಾಕಷ್ಟು ಸಮಯ ಹಿಡಿಯುತ್ತದೆ. ಇವುಗಳ ನಂತರ ಪ್ರಚಾರಕ್ಕೂ ಸಮಯ ಬೇಕು.

ಹಾಗಾಗಿ ಸಿನಿಮಾವನ್ನು ಆತುರಾತರವಾಗಿ ಮುಗಿಸಿ ಬಿಡುಗಡೆ ಮಾಡುವ ಬದಲಿಗೆ 2022 ರ ಸಂಕ್ರಾಂತಿ ವೇಳೆಗೆ ಬಿಡುಗಡೆ ಮಾಡುವ ಯೋಜನೆಯನ್ನು ಹಾಕಿದ್ದಾರಂತೆ ರಾಜಮೌಳಿ.

More from Filmibeat

English summary
Rajamouli's RRR movie may release on January 2022. Movie schedule to release January 2021 but due to coronavirus shooting stopped for 7 months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X