For Quick Alerts
  ALLOW NOTIFICATIONS  
  For Daily Alerts

  ರಾಮ್ ಚರಣ್ ಹುಟ್ಟುಹಬ್ಬಕ್ಕೆ RRR ಸಿನಿಮಾದಿಂದ ಉಡುಗೊರೆ!?

  |

  ಆರ್ಆರ್ಆರ್ ಸಿನಿಮಾ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ರಾಜಮೌಳಿ ನಿರ್ದೇಶಿಸಿ ಜೂ.ಎನ್‌ಟಿಆರ್, ರಾಮ್ ಚರಣ್ ತೇಜ ಇಬ್ಬರು ಸೂಪರ್ ಸ್ಟಾರ್‌ಗಳು ನಟಿಸುತ್ತಿರುವ ಈ ಸಿನಿಮಾಕ್ಕಾಗಿ ಸಿನಿ ಪ್ರೇಮಿಗಳು ಕಾಯುತ್ತಿದ್ದಾರೆ.

  ಆರ್ಆರ್ಆರ್ ಸಿನಿಮಾವು ಈವರೆಗೆ ಬಿಡುಗಡೆ ಮಾಡಿರುವ ಟೀಸರ್ ಪೋಸ್ಟರ್‌ಗಳನ್ನು ಸಖತ್ ವೈರಲ್ ಆಗಿವೆ. ಸಿನಿಮಾ ಬಿಡುಗಡೆ ದಿನಾಂಕ ಸಹ ಘೋಷಣೆ ಆಗಿದೆ. ಆದರೆ ಇದೇ ಮಾರ್ಚ್ 27 ರಂದು ಆರ್‌ಆರ್‌ಆರ್ ತಂಡದಿಂದ ಹೊಸ ಅಪ್‌ಡೇಟ್ ಒಂದು ಹೊರಬೀಳಲಿದೆ.

  ಮಾರ್ಚ್ 27 ರಂದು ನಟ ರಾಮ್ ಚರಣ್ ತೇಜ ಹುಟ್ಟುಹಬ್ಬ. ಅದೇ ದಿನ ಆರ್‌ಆರ್‌ಆರ್ ಚಿತ್ರತಂಡವು ರಾಮ್ ಚರಣ್ ಪಾತ್ರದ ಪ್ರತ್ಯೇಕ ಟೀಸರ್ ಹಾಗೂ ಪೋಸ್ಟರ್ ಅನ್ನು ಬಿಡುಗಡೆ ಮಾಡಲಿದೆ.

  ರಾಮ್ ಚರಣ್ ತೇಜ ಅವರು ಆರ್ಆರ್ಆರ್ ಸಿನಿಮಾದಲ್ಲಿ ಅಲ್ಲೂರಿ ಸೀತಾರಾಮ ರಾಜು ಪಾತ್ರ ನಿರ್ವಹಿಸಿದ್ದಾರೆ. ಅವರಿಗೆ ನಾಯಕಿಯಾಗಿ ಸೀತಾ ಪಾತ್ರದಲ್ಲಿ ಆಲಿಯಾ ಭಟ್ ನಟಿಸಿದ್ದಾರೆ. ಮಾರ್ಚ್‌ 15 ರಂದು ಆಲಿಯಾ ಭಟ್ ಹುಟ್ಟುಹಬ್ಬದ ದಿನ ಅವರ ಸೀತಾ ಪಾತ್ರದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ.

  ರಾಮ್ ಚರಣ್ ಹುಟ್ಟುಹಬ್ಬದಂದು ಟೀಸರ್ ಅನ್ನು ಜೂ.ಎನ್‌ಟಿಆರ್ ಅವರು ಬಿಡುಗಡೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

  ತೆಲುಗಿನಲ್ಲಿ ಹಾರುತ್ತಿದೆ ಕನ್ನಡ ನಿರ್ದೇಶಕನ ಕೀರ್ತಿ ಪತಾಕೆ | Filmibeat Kannada

  ಇನ್ನು ಆರ್‌ಆರ್ಆರ್ ಸಿನಿಮಾದಲ್ಲಿ ಜೂ.ಎನ್‌ಟಿಆರ್, ರಾಮ್ ಚರಣ್ ತೇಜ, ಆಲಿಯಾ ಭಟ್ ಜೊತೆಗೆ ಬಾಲಿವುಡ್‌ನ ಅಜಯ್ ದೇವಗನ್, ಒಲಿವಿಯಾ ಮೋರಿಸ್, ಛತ್ರಪತಿ ಶೇಖರ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾವು ಅಕ್ಟೋಬರ್ 13 ರಂದು ತೆರೆಗೆ ಬರಲಿದೆ.

  English summary
  RRR movie new teaser may release on March 27 on Ram Charan Teja's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X