For Quick Alerts
  ALLOW NOTIFICATIONS  
  For Daily Alerts

  ನಿರಾಸೆ ಮೂಡಿಸಿದ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್!

  |

  ಬಾಹುಬಲಿ ಸಿನಿಮಾ ಬಳಿಕ ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡುತ್ತಿರುವ ಸಿನಿಮಾ ಆರ್ ಆರ್ ಆರ್. ಜೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ಒಟ್ಟಿಗೆ ನಟಿಸುತ್ತಿರುವ ಚಿತ್ರ. ಐತಿಹಾಸಿಕ ಚಿತ್ರವಾಗಿದ್ದು, ಆಂಧ್ರ ಪ್ರದೇಶದ ಇಬ್ಬರು ಮಹಾನ್ ಹೋರಾಟಗಾರರು ಕುರಿತು ಕಥೆ ಮಾಡಲಾಗಿದೆ.

  ಸುಮಾರು 300 ಕೋಟಿ ಬಜೆಟ್ನಲ್ಲಿ ಈ ಚಿತ್ರ ತಯಾರಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕಾಗಿ ಸುಮಾರು ಎರಡು ವರ್ಷ ಪೂರ್ವ ತಯಾರಿ ಮಾಡಲಾಗಿದೆಯಂತೆ. ಈ ಚಿತ್ರದಲ್ಲಿ ನಟಿಸುವುದಕ್ಕಾಗಿ ಇಬ್ಬರು ನಟರು ಉಳಿದ ಪ್ರಾಜೆಕ್ಟ್ ಗಳಿಗೆ ಬ್ರೇಕ್ ಹಾಕಿದ್ದಾರೆ.

  RRR ಚಿತ್ರದ ಯೂನಿಟ್ ಸದಸ್ಯರ ಮೇಲೆ ರಾಜಮೌಳಿ ಗರಂ RRR ಚಿತ್ರದ ಯೂನಿಟ್ ಸದಸ್ಯರ ಮೇಲೆ ರಾಜಮೌಳಿ ಗರಂ

  ಈ ಸಿನಿಮಾ ಮುಗಿದ ಮೇಲೆಯಷ್ಟೇ ಮುಂದಿನ ಸಿನಿಮಾ ಕೈಗೆತ್ತಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಸದ್ಯ ಆಕ್ಷನ್ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿದೆಯಂತೆ.

  ಇದೀಗ, ಆರ್ ಆರ್ ಆರ್ ಚಿತ್ರತಂಡದಿಂದ ನಿರಾಸೆಯ ಸುದ್ದಿಯೊಂದು ಬಹಿರಂಗವಾಗಿದೆ. ಈ ಮೊದಲು ಘೋಷಿಸಿದಂತೆ ಜುಲೈ 30, 2020 ರಂದು ಆರ್ ಆರ್ ಆರ್ ಸಿನಿಮಾ ತೆರೆಗೆ ಬರಬೇಕಿತ್ತು. ಆದ್ರೀಗ, ಅಂದುಕೊಂಡಿದ್ದ ದಿನಾಂಕಕ್ಕೆ ಚಿತ್ರ ಬರೋದು ಅನುಮಾನ ಎಂಬ ವಿಷಯ ಹೊರಬಿದ್ದಿದೆ.

  ಮತ್ತೆ ಕಿಚ್ಚ ಸುದೀಪ್ ಗೆ ಆಫರ್ ನೀಡಿದ ರಾಜಮೌಳಿ ಮತ್ತೆ ಕಿಚ್ಚ ಸುದೀಪ್ ಗೆ ಆಫರ್ ನೀಡಿದ ರಾಜಮೌಳಿ

  ಇಷ್ಟು ದಿನ ರಾಮ್ ಚರಣ್ ಮತ್ತು ಎನ್ ಟಿ ಆರ್ ಅವರ ಭಾಗದ ಶೂಟಿಂಗ್ ಬೇರೆ ಬೇರೆ ಕಡೆ ನಡೆಯುತ್ತಿತ್ತು. ಈಗ ಒಬ್ಬರು ಒಟ್ಟಿಗೆ ನಟಿಸುವ ದೃಶ್ಯಗಳು ಬರಲಿದ್ದು, ಅದಕ್ಕಾಗಿ ಭರ್ಜರಿ ಸಿದ್ಧತೆ ನಡೆಸಲಾಗುತ್ತಿದೆಯಂತೆ. ಸದ್ಯದ ಮಾಹಿತಿ ಪ್ರಕಾರ ಅಕ್ಟೋಬರ್ ತಿಂಗಳಿಗೆ ಆರ್ ಆರ್ ಆರ್ ತೆರೆಮೇಲೆ ಬರಬಹುದು ಎಂಬ ಮಾತಿದೆ.

  ಇನ್ನುಳಿದಂತೆ ಆಲಿಯಾ ಭಟ್, ಅಜಯ್ ದೇವಗನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಹಾಲಿವುಡ್ ಕಲಾವಿದರಾದ ಒಲಿವಿಯಾ ಮೋರಿಸ್, ಅಲಿಸನ್ ಡೂಡಿ ಮತ್ತು ರೇ ಸ್ಟೀವನ್ಸನ್ ಈ ಚಿತ್ರದಲ್ಲಿ ಇರಲಿದ್ದಾರೆ.

  English summary
  SS Rajamouli Directional movie RRR set to release on july 30th, 2020. but, now film team decided to postpone release date?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X