For Quick Alerts
  ALLOW NOTIFICATIONS  
  For Daily Alerts

  ಅಗ್ನಿ-ಜಲದ ಯುದ್ಧ: RRR ಸಿನಿಮಾ ಕತೆಯ ಸುಳಿವು ಬಿಚ್ಚಿಟ್ಟ ಮೋಷನ್ ಪೋಸ್ಟರ್

  |

  ದಕ್ಷಿಣ ಭಾರತದ ಮಾತ್ರವಲ್ಲದೆ ಇಡೀಯ ದೇಶದ ಸಿನಿ ಪ್ರೇಮಿಗಳು ನಿರೀಕ್ಷೆಯಿಂದ ಕಾಯುತ್ತಿರುವ ರಾಜಮೌಳಿ ನಿರ್ದೇಶನದ RRR ಸಿನಿಮಾದ ಮೋಷನ್ ಪೋಸ್ಟರ್ ಇಂದು ಬಿಡುಗಡೆ ಆಗಿದೆ.

  ಇಬ್ಬರೂ ಸೂಪರ್ ಸ್ಟಾರ್‌ಗಳಾದ ಎನ್‌ಟಿಆರ್ ಮತ್ತು ರಾಮ್‌ಚರಣ್ ತೇಜ ಒಟ್ಟಿಗೆ ನಟಿಸಿ, ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶಿಸುತ್ತಿರುವ ಈ ಸಿನಿಮಾ ಮೋಷನ್ ಪೋಸ್ಟರ್ ಇಂದು ಬಿಡುಗಡೆ ಆಗಿದ್ದು, ಬಿಡುಗಡೆ ಆದ ಎರಡು ಗಂಟೆಯಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

  ಮೋಷನ್ ಪೋಸ್ಟರ್ ಕನ್ನಡದಲ್ಲಿಯೂ ಬಿಡುಗಡೆ ಆಗಿದ್ದು, RRR ಗೆ ರೌದ್ರ, ರಣ, ರುಧಿರ ಎಂಬ ಅರ್ಥ ನೀಡಿ, ಅಗ್ನಿ-ಜಲದ ನಡುವೆ ನಡೆವ ಯುದ್ಧ ಎಂಬ ಅರ್ಥದಲ್ಲಿ ಮೋಷನ್ ಪೋಸ್ಟರ್ ಅನ್ನು ರಚಿಸಿ ಬಿಡುಗಡೆ ಮಾಡಲಾಗಿದೆ.

  ಅಗ್ನಿ ರೂಪ ರಾಮ್, ಜಲರೂಪ ಎನ್‌ಟಿಆರ್‌

  ಅಗ್ನಿ ರೂಪ ರಾಮ್, ಜಲರೂಪ ಎನ್‌ಟಿಆರ್‌

  ರಾಮ್‌ ಚರಣ್ ತೇಜ ಅಗ್ನಿಯನ್ನು ಪ್ರತಿನಿಧಿಸುತ್ತಿದ್ದರೆ, ಜ್ಯೂನಿಯರ್ ಎನ್‌ಟಿಆರ್ ಜಲವನ್ನು ಪ್ರತಿನಿಧಿಸುತ್ತಿರುವುದು ಮೊಷನ್ ಪೋಸ್ಟರ್‌ನಲ್ಲಿ ಸ್ಪಷ್ಟವಾಗಿದೆ.

  RRR ಐತಿಹಾಸಿಕ ಕತೆಯುಳ್ಳ ಸಿನಿಮಾ

  RRR ಐತಿಹಾಸಿಕ ಕತೆಯುಳ್ಳ ಸಿನಿಮಾ

  ಆರ್‌ಆರ್‌ಆರ್‌ ಐತಿಹಾಸಿಕ ಕತೆಯುಳ್ಳ ಸಿನಿಮಾ ಎಂಬ ಅನುಮಾನವೂ ಮೊಷನ್ ಪೋಸ್ಟರ್‌ ನಿಂದ ಎದ್ದಿದೆ. ಆರ್‌ಆರ್‌ಆರ್‌ ಹೆಸರಿನ ಮೇಲೆ ಇಂಡಿಯಾ 1920 ಎಂದು ಬರೆದಿದೆ. ಹಾಗಾಗಿ ಆರ್‌ಆರ್‌ಆರ್‌ ಸಿನಿಮಾವು 1920 ರಲ್ಲಿ ನಡೆಯುವ ಕತೆಯೇ ಎಂಬ ಅನುಮಾನವನ್ನು ಎಬ್ಬಿಸಿದೆ.

  RRR ಕಳ್ಳ-ಪೊಲೀಸ್ ನಡುವೆ ನಡೆವ ಸಿನಿಮಾ?

  RRR ಕಳ್ಳ-ಪೊಲೀಸ್ ನಡುವೆ ನಡೆವ ಸಿನಿಮಾ?

  ಆರ್‌ಆರ್‌ಆರ್‌ ನಲ್ಲಿ ರಾಮ್ ಚರಣ್ ತೇಜ ಪೊಲೀಸ್ ಆಗಿದ್ದು, ಎನ್‌ಟಿಆರ್‌ ಕಳ್ಳನ ಪಾತ್ರ ನಿರ್ವಹಿಸಿದ್ದಾರೆ ಎಂಬ ಊಹಾಪೋಹವೂ ಹರಿದಾಡುತ್ತಿದೆ. ಏನೇ ಆಗಲಿ ಮೊಷನ್ ಪೋಸ್ಟರ್ ಸಿನಿಮಾದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚುವಂತೆ ಮಾಡಿದೆ.

  ದೊಡ್ಡ ತಾರಾಗಣವಿರುವ ನಿರೀಕ್ಷಿತ ಚಿತ್ರ

  ದೊಡ್ಡ ತಾರಾಗಣವಿರುವ ನಿರೀಕ್ಷಿತ ಚಿತ್ರ

  ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ಭಾರಿ ದೊಡ್ಡ-ದೊಡ್ಡ ನಟರ ದಂಡೇ ಸಿನಿಮಾದಲ್ಲಿದ್ದು, ಬಾಹುಬಲಿ ನಂತರ ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ಹಿಟ್ ಇದಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

  ಸಿನಿಮಾದಿಂದ ಹೊರ ಹೋದ ಆಲಿಯಾ ಭಟ್

  ಸಿನಿಮಾದಿಂದ ಹೊರ ಹೋದ ಆಲಿಯಾ ಭಟ್

  ಆರ್‌ಆರ್‌ಆರ್‌ ಸಿನಿಮಾಕ್ಕೆ ಆಲಿಯಾ ಭಟ್ ನಾಯಕಿ ಎನ್ನಲಾಗಿತ್ತು. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಆಲಿಯಾ ಭಟ್ RRR ಸಿನಿಮಾದಿಂದ ಹೊರಕ್ಕೆ ಹೋಗಿದ್ದಾರಂತೆ. ಅವರ ಬದಲಿಗೆ ಯಾವ ನಾಯಕಿ ಒಳಬರಲಿದ್ದಾರೆ ಎಂಬ ಕುತೂಹಲ ಎದ್ದಿದೆ.

  English summary
  RRR movie motion poster released on Wednessday. Ram Charan Teja representing fire and NTR representing Water in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X