For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕ ರಾಜಮೌಳಿ ಕಡೆಯಿಂದ ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್

  |

  ತೆಲುಗು ಸಿನಿಮಾರಂಗದ ಖ್ಯಾತ ನಿರ್ದೇಶಕ ರಾಜಮೌಳಿ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ಸುಮಾರು 7 ತಿಂಗಳುಗಳ ಕಾಲ ಸಿನಿಮಾ ಕೆಲಸ ನಿಲ್ಲಿಸಿದ್ದ ರಾಜಮೌಳಿ ಇದೀಗ ಮತ್ತೆ ಚಿತ್ರೀಕರಣದ ಅಖಾಡಕ್ಕೆ ಇಳಿದಿದ್ದಾರೆ. ಈಗಾಗಲೇ ಬಹುತೇಕ ಸಿನಿಮಾಗಳ ಚಿತ್ರೀಕರಣ ಪ್ರಾರಂಭವಾಗಿವೆ. ಆದರೆ ತೆಲುಗಿನಲ್ಲಿ ಸ್ಟಾರ್ ನಟರ ಮತ್ತು ಬಿಗ್ ಬಜೆಟ್ ಸಿನಿಮಾಗಳ ಶೂಟಿಂಗ್ ಇನ್ನೂ ಪ್ರಾರಂಭವಾಗಿಲ್ಲ. ಆದರೀಗ ಒಬ್ಬೊಬ್ಬರಾಗಿ ಚಿತ್ರೀಕರಣಕ್ಕೆ ಹೊರಡುತ್ತಿದ್ದಾರೆ.

  ಇದೀಗ ನಿರ್ದೇಶಕ ರಾಜಮೌಳಿ ಸಹ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ರಾಜಮೌಳಿ ಚಿತ್ರದ ಚಿತ್ರೀಕರಣ ಶುರು ಮಾಡಿದ್ದಾರೆ. ಹೈದರಾಬಾದ್ ನಲ್ಲೇ ಚಿತ್ರೀಕರಣ ನಡೆಯುತ್ತಿದ್ದು, ಸದ್ಯ ಚಿತ್ರದ ಪ್ರಮುಖ ಭಾಗಗಳ ಚಿತ್ರೀಕರಣ ಮಾಡುತ್ತಿದ್ದಾರೆ. ಆದರೆ ನಾಯಕರಾದ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಭಾಗದ ಚಿತ್ರೀಕರಣ ಪ್ರಾರಂಭವಾಗಿಲ್ಲ. ಇನ್ನೇನು ಸ್ವಲ್ಪ ದಿನಗಳಲ್ಲಿ ಅವರು ಸಹ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ.

  ಆಲಿಯಾ ಭಟ್‌ ಗಾಗಿ ಯೋಜನೆ ಬದಲಿಸಿದ ರಾಜಮೌಳಿಆಲಿಯಾ ಭಟ್‌ ಗಾಗಿ ಯೋಜನೆ ಬದಲಿಸಿದ ರಾಜಮೌಳಿ

  ಕಡಿಮೆ ಕಾಲ್ ಶೀಟ್ ನೀಡಿರುವ ಅಲಿಯಾ

  ಕಡಿಮೆ ಕಾಲ್ ಶೀಟ್ ನೀಡಿರುವ ಅಲಿಯಾ

  ಚಿತ್ರದಲ್ಲಿ ಬಾಲಿವುಡ್ ನಟಿ ಅಲಿಯಾ ಭಟ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲಿಯಾ ಭಟ್ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದ್ದಾರೆ. ಇದುವರೆಗೂ ಅಲಿಯಾ ಚಿತ್ರೀಕರಣಕ್ಕೆ ಹಾಜರಾಗಿಲ್ಲ. ಸಾಕಷ್ಟು ಸಿನಿಮಾಗಲ್ಲಿ ಬ್ಯುಸಿ ಇರುವ ಅಲಿಯಾ ಡೇಟ್ ಹೊಂದಾಣಿಕೆ ಮಾಡಿಕೊಂಡು ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುವುದು ಕಷ್ಟಕರವಾಗಿದೆ. ಹಾಗಾಗಿ ಈ ಬಾರಿ ಹೆಚ್ಚಿನ ದಿನದ ಕಾಲ್ ಶೀಟ್ ನೀಡಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.

  ಚಿತ್ರೀಕರಣ ಮುಗಿಸಿರುವ ಅಜಯ್ ದೇವಗನ್

  ಚಿತ್ರೀಕರಣ ಮುಗಿಸಿರುವ ಅಜಯ್ ದೇವಗನ್

  ಚಿತ್ರದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅಂದರೆ ಲಾಕ್ ಡೌನ್ ಗೂ ಮೊದಲೇ ಅಜಯ್ ದೇವಗನ್ ಪಾತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಅಜಯ್ ದೇವಗನ್ ಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಳ್ಳುತ್ತಿದ್ದಾರೆ.

  'RRR' ಸಿನಿಮಾದ ಚಿತ್ರೀಕರಣ ಬಿಟ್ಟು ಕರ್ನಾಟಕಕ್ಕೆ ಬಂದ ನಿರ್ದೇಶಕ ರಾಜಮೌಳಿ'RRR' ಸಿನಿಮಾದ ಚಿತ್ರೀಕರಣ ಬಿಟ್ಟು ಕರ್ನಾಟಕಕ್ಕೆ ಬಂದ ನಿರ್ದೇಶಕ ರಾಜಮೌಳಿ

  ಜನವರಿಯಲ್ಲಿ ಸಿನಿಮಾ ಬಿಡುಗಡೆ ಅನುಮಾನ

  ಜನವರಿಯಲ್ಲಿ ಸಿನಿಮಾ ಬಿಡುಗಡೆ ಅನುಮಾನ

  ಅಂದುಕೊಂಡಂತೆ ಆಗಿದ್ದರೆ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿರಬೇಕಿತ್ತು. ಜನವರಿ ಮೊದಲ ವಾರದಲ್ಲಿ ರಿಲೀಸ್ ಗೆ ರೆಡಿಯಾಗಿತ್ತು. ಆದರೀಗ ಕೊರೊನಾ ವೈರಸ್ ಎಲ್ಲಾ ಲೆಕ್ಕಾಚಾರವನ್ನು ತೆಲೆಕೆಳಗಾಗಿಸಿದೆ. ಜನವರಿಯಲ್ಲಿ ರಿಲೀಸ್ ಆಗುವುದು ಅನುಮಾನ. ಹೊಸ ರಿಲೀಸ್ ಡೇಟ್ ಯಾವಾಗ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  KGF ರಿಲೀಸ್ ಗೂ ಮುಂಚೆ Sanjay Dutt ಗೆ ಬಂತು ಈ ಪರಿಸ್ಥಿತಿ | Filmibeat Kannada
  ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದಿದ್ದ ರಾಜಮೌಳಿ

  ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದಿದ್ದ ರಾಜಮೌಳಿ

  ರಾಜಮೌಳಿ ಇತ್ತೀಚಿಗೆ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರಕೃತಿ ಸೌಂದರ್ಯಕ್ಕೆ ರಾಜಮೌಳಿ ದಂಪತಿ ಮನಸೋತಿದ್ದಾರೆ. ನಂತರ ಅಲ್ಲಿಂದ ರಾಜಮೌಳಿ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶ ಬಂಡೀಪುರಕ್ಕೂ ಭೇಟಿ ನೀಡಿದ್ದಾರೆ. ಬಂಡೀಪುರ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ಹೋಗಿದ್ದಾರೆ. ಪ್ರವಾಸವನ್ನು ಸಖತ್ ಎಂಜಾಯ್ ಮಾಡಿದ್ದರು.

  English summary
  RRR movie team resume shoot after a 7 months in Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X