Don't Miss!
- Sports
IND vs NZ 3rd T20: ಅಹಮದಾಬಾದ್ ಪಿಚ್ ಬಗ್ಗೆ ಆಸಕ್ತಿಕರ ಮಾಹಿತಿ ನೀಡಿದ ಕ್ಯುರೇಟರ್: ಹೇಗಿರಲಿದೆ ಪಿಚ್?
- News
7th Pay Commission; ವೇತನ ಶ್ರೇಣಿ, ಹೊಸ ವೇತನ ರಚನೆ ಮಾನದಂಡಗಳು
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
RRR Ticket Rates : ಯಾವ ನಗರಗಳಲ್ಲಿ ಟಿಕೆಟ್ ದರ ಎಷ್ಟಿದೆ: ಕರ್ನಾಟಕದಲ್ಲಿ ಎಷ್ಟು?
ಬಹು ನಿರೀಕ್ಷಿತ RRR ಸಿನಿಮಾ ಬಿಡುಗಡೆ ಆಗಲು ಮೂರು ದಿನವಷ್ಟೆ ಬಾಕಿ ಇದೆ. ಕರ್ನಾಟಕ, ಆಂಧ್ರ, ತೆಲಂಗಾಣದ ಬಹುತೇಕ ಚಿತ್ರಮಂದಿರಗಳಲ್ಲಿ ಸಿನಿಮಾದ ಮೊದಲ ದಿನದ ಟಿಕೆಟ್‌ಗಳು ಬಹುತೇಕ ಖಾಲಿಯಾಗಿವೆ.
RRR ಸಿನಿಮಾ ಭಾರತದ ಈವರೆಗೆ ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ಒಂದಾಗಿದ್ದು, ಹಾಕಿರುವ ದುಬಾರಿ ಬಂಡವಾಳಕ್ಕೆ ತಕ್ಕಂತೆ ಸಿನಿಮಾದ ಟಿಕೆಟ್ ದರವನ್ನು ದುಬಾರಿ ಮಾಡಲಾಗಿದೆ. RRR ಸಿನಿಮಾದ ದುಬಾರಿ ಟಿಕೆಟ್ ದರದ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಅಪಸ್ವರ ಎದ್ದಿದೆ.
ಚಿತ್ರಮಂದಿರ
ಟಿಕೆಟ್ಗೆ
ಹೊಸ
ದರ
ನಿಗದಿ
ಮಾಡಿದ
ಜಗನ್
ಸರ್ಕಾರ:
ಚಿತ್ರರಂಗ
ಗರಂ
ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರ, ಗುಜರಾತ್, ಮಧ್ಯ ಪ್ರದೇಶ, ಇನ್ನೂ ಹಲವು ರಾಜ್ಯಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದು, ಒಂದೊಂದು ರಾಜ್ಯದಲ್ಲಿ ಒಂದೊಂದು ಬಗೆಯಲ್ಲಿ ಟಿಕೆಟ್ ದರಗಳಿವೆ. ಹಾಗಿದ್ದರೆ ಯಾವ ರಾಜ್ಯದ ಯಾವ ನಗರದಲ್ಲಿ ಟಿಕೆಟ್ ದರ ಹೆಚ್ಚಿದೆ? ಯಾವ ನಗರದಲ್ಲಿ ಕಡಿಮೆ? ತಿಳಿಯೋಣ ಬನ್ನಿ.
ಆಂಧ್ರ
ಸಿಎಂ
ಭೇಟಿಯಾದ
ಮೆಗಾಸ್ಟಾರ್
ಚಿರಂಜೀವಿ:
ಸಿನಿಮಾ
ಟಿಕೆಟ್
ಸಮಸ್ಯೆ
ಕಥೆ
ಏನಾಯ್ತು?
ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ 'RRR' ಸಿನಿಮಾದ ಟಿಕೆಟ್ ದರ ಬಹಳ ಹೆಚ್ಚಿದೆ. ಮೊದಲ ದಿನದ ಶೋಗೆ ಬಹುತೇಕ ಚಿತ್ರಮಂದಿರಗಳಲ್ಲಿ 400-500 ರುಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಕೆಲವು ಮಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್ ದರ 600 ದಾಟಿದೆ. ಸಿನಿಮಾದ 3ಡಿ ವರ್ಷನ್‌ನ ಟಿಕೆಟ್ ಬೆಲೆಯೂ ಗಗನದಲ್ಲಿದೆ. ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ RRR ಸಿನಿಮಾ ಬಿಡುಗಡೆ ಆಗುತ್ತಿದ್ದು, ದೊಡ್ಡ ಮೊತ್ತದ ಕಲೆಕ್ಷನ್ ಅನ್ನು ಈ ಸಿನಿಮಾ ಕರ್ನಾಟಕದಲ್ಲಿ ಮಾಡುವುದು ಪಕ್ಕಾ.

ಆಂಧ್ರದಲ್ಲಿ ಕಡಿಮೆ ದರ
ಆಂಧ್ರ ಪ್ರದೇಶದಲ್ಲಿ RRR ಟಿಕೆಟ್ ದರಗಳು ಕಡಿಮೆ ಇವೆ. ಆಂಧ್ರದಲ್ಲಿ ಸರ್ಕಾರವು ಚಿತ್ರಮಂದಿರಗಳ ಟಿಕೆಟ್ ದರ ಹೆಚ್ಚಳದ ಮೇಲೆ ನಿಯಂತ್ರಣ ಹೇರಿತ್ತು. ತೆಲುಗು ಚಿತ್ರರಂಗದ ಪ್ರಮುಖರ ಮನವಿಯ ಬಳಿಕ ಬಿಗ್ ಬಜೆಟ್ ಸಿನಿಮಾಗಳಿಗೆ ಟಿಕೆಟ್ ದರವನ್ನು ಕೆಲವು ವಾರಗಳ ವರೆಗೆ ಹೆಚ್ಚಿಸಲು ಅವಕಾಶ ನೀಡಲಾಗಿದೆ, ಅದರಂತೆ RRR ಸಿನಿಮಾಕ್ಕೆ ಟಿಕೆಟ್ ದರಗಳನ್ನು ಹೆಚ್ಚಿಸಲಾಗಿದೆಯಾದರೂ ಇತರೆ ಕೆಲ ರಾಜ್ಯಗಳಿಗೆ ಹೋಲಿಸಿರೆ ಈಗಲೂ ಅಲ್ಲಿ ಟಿಕೆಟ್ ದರಗಳು ಕಡಿಮೆಯೇ ಇವೆ. ರಿಕ್ಲೈನರ್ ಸೀಟುಗಳ ಬೆಲೆಯಷ್ಟೆ ಕೆಲವು ಚಿತ್ರಮಂದಿರಗಳಲ್ಲಿ 300 ರುಪಾಯಿಗಳಿವೆ ಇನ್ನುಳಿದಂತೆ ಉಳಿದ ಬಹುತೇಕ ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ಕ್ಕಿಂತಲೂ ಕಡಿಮೆಯೇ ಇದೆ.

ತೆಲಂಗಾಣದಲ್ಲಿ ಟಿಕೆಟ್ ದರ ದುಬಾರಿ
ಇದೇ ಮೊದಲ ಬಾರಿಗೆ ತೆಲಂಗಾಣ ರಾಜ್ಯದಲ್ಲಿ ದುಬಾರಿ ಮೊತ್ತದ ಟಿಕೆಟ್ ಬೆಲೆಯನ್ನು ಸಿನಿಮಾ ಒಂದಕ್ಕೆ ನಿಗದಿಪಡಿಸಲಾಗಿದೆ. ಆಂಧ್ರದಂತೆಯೇ ತೆಲಂಗಾಣದಲ್ಲಿಯೂ ಟಿಕೆಟ್ ದರಗಳು ಈ ಮೊದಲು ಕಡಿಮೆ ಇತ್ತು. ಆದರೆ ಆಂಧ್ರದಲ್ಲಿ ಟಿಕೆಟ್ ದರಗಳನ್ನು ಕಡಿಮೆ ಮಾಡಿದ್ದರಿಂದ ಅಲ್ಲಿ ಆಗಬಹುದಾದ ನಷ್ಟವನ್ನು ಸರಿದೂಗಿಸಿಕೊಳ್ಳಲು ತೆಲಂಗಾಣದ ಚಿತ್ರಮಂದಿರಗಳ ಟಿಕೆಟ್ ದರವನ್ನು ಭಾರಿಯಾಗಿ ಹೆಚ್ಚಿಸಲಾಗಿದೆ. ಹೈದರಾಬಾದ್‌ನಲ್ಲಿ ಬಹುತೇಕ ಚಿತ್ರಮಂದಿರಗಳಲ್ಲಿ ಪ್ರಾರಂಭಿಕ ಟಿಕೆಟ್ ದರವೇ 300 ರುಪಾಯಿಗಳಿವೆ. ಕೆಲವೆಡೆ 500 ರುಪಾಯಿ ಸಹ ದರ ಇದೆ. ಸಿಂಗಲ್ ಸ್ಕ್ರೀನ್‌ಗಳಲ್ಲಿ ಕೆಲವೆಡೆಯಷ್ಟೆ ಟಿಕೆಟ್ ದರ ಕಡಿಮೆಗೆ ನಿಗದಿಪಡಿಸಲಾಗಿದೆ.

ತಮಿಳುನಾಡಿನಲ್ಲಿ ಅತಿ ಕಡಿಮೆ ಬೆಲೆ
ತಮಿಳುನಾಡು ರಾಜ್ಯದಲ್ಲಿ RRR ಟಿಕೆಟ್ ಬೆಲೆ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. 'RRR' ಸಿನಿಮಾದ ತಮಿಳು ಆವೃತ್ತಿಯ 2ಡಿ ವರ್ಷನ್ ಟಿಕೆಟ್‌ನ ಬೆಲೆ ಚೆನ್ನೈನ ಯಾವುದೇ ಚಿತ್ರಮಂದಿರದಲ್ಲಿಯೂ 200 ರುಪಾಯಿಗಿಂತಲೂ ಹೆಚ್ಚಿಲ್ಲ. ಬಹುತೇಕ ಚಿತ್ರಮಂದಿರಗಳಲ್ಲಿ 190 ರುಪಾಯಿಯ ಬೆಲೆಗೆ ಟಿಕೆಟ್ ಮಾರಾಟವಾಗುತ್ತಿದೆ. ತಮಿಳಿನ 3 ಡಿ ವರ್ಷನ್‌ಗೆ ಮಾತ್ರ ಕೆಲವು ಚಿತ್ರಮಂದಿರಗಳಲ್ಲಿ 220 ರುಪಾಯಿಗಳನ್ನು ಪಡೆಯಲಾಗುತ್ತಿದೆ. ಇಡೀ ದೇಶದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿನಿಮಾ ನೋಡಬಹುದು ತಮಿಳುನಾಡಿನಲ್ಲಿ.

ಕೇರಳದಲ್ಲಿ RRR ಹವಾ ಬಹು ಕಡಿಮೆ
ಕೇರಳ ರಾಜ್ಯದಲ್ಲಿ RRR ಹವಾ ಬಹಳ ಕಡಿಮೆ ಇದೆ. ಕರ್ನಾಟಕ, ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ಟಿಕೆಟ್‌ಗಳು ಈಗಾಗಲೇ ಸೋಲ್ಡ್ ಆಗಿವೆ ಆದರೆ ಕೇರಳದ ಕೊಚ್ಚಿಯಲ್ಲಿ ಸಿನಿಮಾ ಟಿಕೆಟ್ ಅಡ್ವಾನ್ಸ್ ಬುಕಿಂಗ್ ಆಗಿಲ್ಲ. ಅಲ್ಲಿ ಟಿಕೆಟ್ ದರಗಳು ಸಹ ಸಾಧಾರಣವಾಗಿಯೇ ಇವೆ. ಅಲ್ಲಿ ಯಾವ ಚಿತ್ರಮಂದಿರಗಳೂ 200 ಕ್ಕಿಂತಲೂ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿಲ್ಲ. ಬೆರಳಿಣೆಕೆ ಚಿತ್ರಮಂದಿರಗಳಷ್ಟೆ 220 ಕ್ಕೆ ಟಿಕೆಟ್ ಮಾರಾಟ ಮಾಡುತ್ತಿವೆ.

ಮುಂಬೈ, ಅಹ್ಮದಾಬಾದ್‌ನಲ್ಲಿ ಮಹಾ ದುಬಾರಿ
ಗುಜರಾತ್‌ನ ಅಹ್ಮದಾಬಾದ್‌ನ ಎರಡು ಚಿತ್ರಮಂದಿರಗಳಲ್ಲಿ 'RRR' ಒಂದು ಟಿಕೆಟ್ ಬೆಲೆ 800 ರುಪಾಯಿಗೂ ಅಧಿಕವಿದೆ. ಆದರೆ ಇನ್ನುಳಿದ ಚಿತ್ರಮಂದಿರಗಳಲ್ಲಿ ಸರಾಸರಿ ಬೆಲೆ 250-300 ರ ಮಧ್ಯದಲ್ಲಿದೆ. ಕೆಲವು ಚಿತ್ರಮಂದಿರಗಳಲ್ಲಿ 150 ಕ್ಕೂ ಟಿಕೆಟ್ ಲಭ್ಯವಿದೆ. ಇನ್ನು ಮುಂಬೈನಲ್ಲಿ ಕೆಲ ಚಿತ್ರಮಂದಿರಗಳಲ್ಲಿ ವಿಶೇಷ ಶೋ ಟಿಕೆಟ್ ಅನ್ನು 1500-1900 ರುಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನ ಹಲವು ಚಿತ್ರಮಂದಿರಗಳಲ್ಲಿ ಟಿಕೆಟ್ ದರ 400 ರಿಂದ 600 ರುಪಾಯಿ ಬೆಲೆ ಇದೆ.