For Quick Alerts
  ALLOW NOTIFICATIONS  
  For Daily Alerts

  'RRR' ಟ್ರೇಲರ್ ರಿಲೀಸ್‌ಗೆ ದಿನಾಂಕ ನಿಗದಿ: ಅದ್ದೂರಿಯಾಗಿ ನಡೆಯಲಿದೆ ಕಾರ್ಯಕ್ರಮ!

  |

  'RRR' ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ಸಿನಿಮಾ ನೋಡಲು ಸಿನಿಪ್ರಿಯರು ಅದಾಗಲೇ ಸಜ್ಜಾಗಿ ಬಿಟ್ಟಿದ್ದಾರೆ. 'ಆರ್‌ಆರ್‌ಆರ್‌' ಚಿತ್ರವನ್ನು ಯಾವಗ ಕಣ್ತುಂಬಿ ಕೊಳ್ಳುತ್ತೇವೋ ಅಂತ ಕಾಯುತ್ತಿದ್ದಾರೆ. ಹೊಸ ವರ್ಷದ ಸಂಭ್ರಮವನ್ನು ಹೆಚ್ಚು ಮಾಡಲು ಆರ್‌ಆರ್‌ಆರ್‌ ತೆರೆಗೆ ಬರುತ್ತಿದೆ.

  ಸಿನಿಮಾ ಲಾಂಚ್ ಆದಾಗ ಇದ್ದಷ್ಟೇ ನಿರೀಕ್ಷೆ ಮತ್ತು ಕುತೂಹಲ ಹಾಗೆಯೆ ಉಳಿದು ಕೊಂಡಿದೆ. ಚಿತ್ರದ ಟೀಸರ್, ಹಾಡುಗಳು ಮತ್ತು ಮೇಕಿಂಗ್ ಮೂಲಕ ಆರ್‌ಆರ್‌ಆರ್‌ ಮತ್ತಷ್ಟು ಗಮನ ಸೆಳೆದಿದೆ. ಈಗ ಈ ಚಿತ್ರ ಟ್ರೇಲರ್‌ ರಿಲೀಸ್‌ ಮಾಡುವ ತಯಾರಿ ನಡೆಸಿದೆ.

  ಆರ್‌ಆರ್‌ಆರ್ ಚಿತ್ರದ ಟ್ರೇಲರ್ ರಿಲೀಸ್‌ಗೆ ಸಕಲ ಸಿದ್ದತೆ ಮಾಡಿಕೊಂಡಿದೆ ಚಿತ್ರ ತಂಡ. ಸದ್ಯ ಟ್ರೇಲರ್‌ ರಿಲೀಸ್‌ ದಿನಾಂಕವನ್ನೂ ಕೂಡ ಚಿತ್ರ ತಂಡ ಪ್ರಕಟ ಮಾಡಿದೆ. ಹಾಗಾಗಿ ಜೂನಿಯರ್‌ ಎನ್.ಟಿ ಆರ್‌ ಪಾತ್ರದ ಹೊಸ ಪೋಸ್ಟರ್‌ ಕೂಡ ರಿಲೀಸ್ ಮಾಡಲಾಗಿದೆ.

  'RRR' ಟ್ರೇಲರ್ ರಿಲೀಸ್‌ಗೆ ಮುಹೂರ್ತ ನಿಗದಿ!

  'RRR' ಟ್ರೇಲರ್ ರಿಲೀಸ್‌ಗೆ ಮುಹೂರ್ತ ನಿಗದಿ!

  ಟ್ರೇಲರ್‌ ರಿಲೀಸ್‌ಗೆ ಆರ್‌ಆರ್‌ಆರ್‌ ಚಿತ್ರ ತಂಡ ಭರ್ಜರಿ ತಯಾರಿ ನಡೆಸಿದೆ. ಸಿನಿಮಾವನ್ನು ಕಣ್ತುಂಬಿಕೊಳ್ಳಲು ಇನ್ನು ಒಂದು ತಿಂಗಳು ಮಾತ್ರ ಬಾಕಿ ಇದೆ. ಮುಂದಿನ ವರ್ಷ ಜನವರಿ 7ರಂದು 'ಆರ್‌ಆರ್‌ಆರ್‌' ಸಿನಿಮಾ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿದೆ. ಚಿತ್ರವನ್ನು ನೋಡುವ ತವಕದಲ್ಲಿ ಇರುವವರು ಚಿತ್ರ ರಿಲೀಸ್‌ಗೂ ಮುನ್ನ ಟ್ರೇಲರ್ ಎಂಜಾಯ್‌ ಮಾಡ ಬಹುದಾಗಿದೆ.

  ಡಿಸೆಂಬರ್ 9ರಂದು 'RRR' ಟ್ರೇಲರ್‌ ಅನಾವರಣ!

  ಡಿಸೆಂಬರ್ 9ರಂದು 'RRR' ಟ್ರೇಲರ್‌ ಅನಾವರಣ!

  ತ್ರಿಬಲ್ ಆರ್‌ ಚಿತ್ರದ ಟ್ರೇಲರ್‌ ರಿಲೀಸ್‌ ದಿನಾಂಕವನ್ನು ಚಿತ್ರ ತಂಡ ಪ್ರಕಟ ಮಾಡಿದೆ. ನಟ ಜೂನಿಯರ್‌ ಎನ್‌ಟಿಆರ್‌ ಪಾತ್ರದ ಹೊಸ ಪೋಸ್ಟರ್‌ ಮೂಲಕ ಟ್ರೇಲರ್‌ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಲಾಗಿದೆ. ಟ್ರೇಲರ್‌ ರಿಲೀಸ್‌ಗಾಗಿ ಇನ್ನೂ ಮೂರು ದಿನ ಮಾತ್ರ ಬಾಕಿ ಎಂದು ಪೋಸ್ಟರ್‌ನಲ್ಲಿ ನಮೂದಿಸಲಾಗಿದೆ. ಅಂದರೆ ಡಿಸೆಂಬರ್ 9ರಂದು RRR ಟ್ರೇಲರ್‌ ರಿಲೀಸ್‌ ಆಗಲಿದೆ. ಟ್ರೇಲರ್ ಅದೆಷ್ಟು ಅದ್ಬುತವಾಗಿರುತ್ತದೆ ಎನ್ನುವ ನಿರೀಕ್ಷೆಗಳು ಈ ಪೋಸ್ಟರ್ ಮೂಲಕ ಮೂಡಿವೆ.

  ಮುಂಬೈನಲ್ಲಿ 'RRR' ಟ್ರೇಲರ್ ರಿಲೀಸ್: ಸಲ್ಮಾನ್ ಖಾನ್ ಮುಖ್ಯ ಅತಿಥಿ!

  ಮುಂಬೈನಲ್ಲಿ 'RRR' ಟ್ರೇಲರ್ ರಿಲೀಸ್: ಸಲ್ಮಾನ್ ಖಾನ್ ಮುಖ್ಯ ಅತಿಥಿ!

  ಇನ್ನು ಮುಂಬೈನಲ್ಲಿ ಚಿತ್ರದ ಟ್ರೇಲರ್‌ ರಿಲೀಸ್‌ ಕಾರ್ಯಕ್ರಮವನ್ನು ಚಿತ್ರ ತಂಡ ಹಮ್ಮಿಕೊಂಡಿದೆ ಎನ್ನಲಾಗುತ್ತಿದೆ. ಮುಂಬೈನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಲಿದೆ. ಹಾಗಾಗಿ ಬಾಲಿವುಡ್‌ನ ಗಣ್ಯಾತಿಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರಂತೆ. ಈ ಕಾರ್ಯಕ್ರಮಕ್ಕೆ ನಟ ಸಲ್ಮಾನ್‌ ಖಾನ್ ಮುಖ್ಯ ಅತಿಥಿ. ಈಗಾಗಲೆ ರಾಜಮೌಳಿ ಸಲ್ಮಾನ್‌ ಖಾನ್‌ ಅವರಿಗೆ ಆಮಂತ್ರಣ ನೀಡಿದ್ದಾರೆ. ಹಾಗಾಗಿ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಲ್ಮಾನ್ ಆಗಮಿಸಲಿದ್ದಾರೆ. ಇನ್ನು ಈ ಟ್ರೇಲರ್‌ ರಿಲೀಸ್‌ ಕಾರ್ಯಕ್ರಮವನ್ನು ಈ ಹಿಂದೆ ದುಬೈನಲ್ಲಿ ಮಾಡಲು ಚಿತ್ರ ತಂಡ ಯೋಜನೆ ರೂಪಿಸಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಹಾಗಾಗಿ ಸದ್ಯ ಮುಂಬೈನಲ್ಲಿ ಕಾರ್ಯಕ್ರಮ ಮಾಡಲು ಚಿತ್ರ ತಂಡ ಸಜ್ಜಾಗಿದೆ.

  'RRR' ರಿಲೀಸ್‌ಗೆ ದಿನಾಂಕದಲ್ಲಿ ಬದಲಾವಣೆ ಇಲ್ಲ!

  'RRR' ರಿಲೀಸ್‌ಗೆ ದಿನಾಂಕದಲ್ಲಿ ಬದಲಾವಣೆ ಇಲ್ಲ!

  'ಆರ್‌ಆರ್‌ಆರ್‌' ಚಿತ್ರಕ್ಕಾಗಿ ಸಿನಿಮಾ ಪ್ರೇಮಿಗಳು ವರ್ಷಗಳಿಂದ ಕಾಯುತ್ತಿದ್ದಾರೆ. ಇದೀಗ ಚಿತ್ರ ರಿಲೀಸ್‌ಗೆ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಇನ್ನೂ ಚಿತ್ರ ಪೋಸ್ಟ್‌ಪೋನ್‌ ಆಗುತ್ತೆ ಎನ್ನುವ ವದಂತಿ ಕೂಡ ಹಬ್ಬಿದೆ. ಆದರೆ ರಿಲೀಸ್‌ ದಿನಾಂಕದ ಬದಲಾವಣೆಯ ಬಗ್ಗೆ ಚಿತ್ರ ತಂಡ ಮಾತನಾಡಿಲ್ಲ. ಹಾಗಾಗಿ 2022 ಜನವರಿ 7ರಂದು 'RRR' ರಿಲೀಸ್‌ ಆಗೋದು ಖಚಿತ. ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ರಾಮ್‌ ಚರಣ್ ತೇಜ, ಜೂನಿಯರ್‌ ಎನ್‌ಟಿಆರ್, ಆಲಿಯಾಭಟ್, ಅಜಯ್‌ದೇವಗನ್ ಸೇರಿದಂತೆ ಹಲವು ತಾರಗಣದಲ್ಲಿ ಇದ್ದಾರೆ.

  English summary
  RRR Movie Trailer Release date Announced, 3 More Days To Go, Programme will Take place in Mumbai

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X