For Quick Alerts
  ALLOW NOTIFICATIONS  
  For Daily Alerts

  ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕೊಟ್ಟ ರಾಜಮೌಳಿ.!

  |

  ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಆಕ್ಷನ್ ಕಟ್ ಹೇಳಿದ್ದ 'ಬಾಹುಬಲಿ 2: ದಿ ಕನ್ ಕ್ಲೂಶನ್' ಚಿತ್ರ 2017 ರಲ್ಲಿ ತೆರೆಗೆ ಬಂದಿತ್ತು. ಇದಾದ ಬಳಿಕ 'ಆರ್.ಆರ್.ಆರ್' ಚಿತ್ರವನ್ನು ಎಸ್.ಎಸ್.ರಾಜಮೌಳಿ ಕೈಗೆತ್ತಿಕೊಂಡಿದ್ದಾರೆ. ಸದ್ಯಕ್ಕೆ 'ಆರ್.ಆರ್.ಆರ್' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.

  ಇದೇ ವರ್ಷದ ಜುಲೈ ತಿಂಗಳಲ್ಲಿ 'ಆರ್.ಆರ್.ಆರ್' ಚಿತ್ರ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಅದರಂತೆ, ಈ ವರ್ಷವೇ 'ಆರ್.ಆರ್.ಆರ್' ಚಿತ್ರವನ್ನು ಕಣ್ತುಂಬಿಕೊಳ್ಳಬಹುದು ಅಂತ ಅಭಿಮಾನಿಗಳು, ಸಿನಿ ಪ್ರಿಯರು ಕಾತರದಿಂದ ಕಾಯುತ್ತಿದ್ದರು.

  'ಆರ್.ಆರ್.ಆರ್' ಬಗ್ಗೆ ನಿರೀಕ್ಷೆ, ಕುತೂಹಲ ಡಬಲ್ ಆಗಿರುವ ಹೊತ್ತಲ್ಲೇ ಚಿತ್ರತಂಡದ ಕಡೆಯಿಂದ ಒಂದು ಬ್ಯಾಡ್ ನ್ಯೂಸ್ ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ, 'ಆರ್.ಆರ್.ಆರ್' ಚಿತ್ರವನ್ನು ನೀವೆಲ್ಲ ವೀಕ್ಷಿಸಬೇಕು ಅಂದ್ರೆ ಇನ್ನೂ ಒಂದು ವರ್ಷ ಬೇರೆ ದಾರಿಯಿಲ್ಲದೆ ಕಾಯಲೇಬೇಕು.!

  ಹೌದು, 'ಆರ್.ಆರ್.ಆರ್' ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದ್ದು, ಮುಂದಿನ ವರ್ಷ ಚಿತ್ರ ತೆರೆಕಾಣಲಿದೆ. ಮುಂದೆ ಓದಿರಿ...

  ಈ ವರ್ಷ 'ಆರ್.ಆರ್.ಆರ್' ಬಿಡುಗಡೆ ಆಗುತ್ತಿಲ್ಲ.!

  ಈ ವರ್ಷ 'ಆರ್.ಆರ್.ಆರ್' ಬಿಡುಗಡೆ ಆಗುತ್ತಿಲ್ಲ.!

  ರಾಜಮೌಳಿ ನಿರ್ದೇಶನದ ಜೂನಿಯರ್ ಎನ್.ಟಿ.ಆರ್, ರಾಮ್ ಚರಣ್ ತೇಜ ಅಭಿನಯದ 'ಆರ್.ಆರ್.ಆರ್' ಚಿತ್ರದ ಬಿಡುಗಡೆ ಪೋಸ್ಟ್ ಪೋನ್ ಆಗಿದೆ. ಈ ವರ್ಷದ ಜುಲೈ 30ಕ್ಕೆ 'ಆರ್.ಆರ್.ಆರ್' ಚಿತ್ರ ರಿಲೀಸ್ ಆಗಬೇಕಿತ್ತು. ಆದ್ರೆ, ಕಾರಣಾಂತರಗಳಿಂದ 'ಆರ್.ಆರ್.ಆರ್' ಸಿನಿಮಾ ಮುಂದಿನ ವರ್ಷ ತೆರೆ ಕಾಣಲಿದೆ.

  RRR: ನಿಮ್ಮ ಊಹೆಗೂ ಮೀರಿದೆ ಜೂ.ಎನ್.ಟಿ.ಆರ್ ಇಂಟ್ರೊಡಕ್ಷನ್ ಸೀನ್.!RRR: ನಿಮ್ಮ ಊಹೆಗೂ ಮೀರಿದೆ ಜೂ.ಎನ್.ಟಿ.ಆರ್ ಇಂಟ್ರೊಡಕ್ಷನ್ ಸೀನ್.!

  ಹೊಸ ರಿಲೀಸ್ ಡೇಟ್ ಅನೌನ್ಸ್

  ಹೊಸ ರಿಲೀಸ್ ಡೇಟ್ ಅನೌನ್ಸ್

  'ಆರ್.ಆರ್.ಆರ್' ಚಿತ್ರದ ಹೊಸ ರಿಲೀಸ್ ಡೇಟ್ ಘೋಷಣೆ ಆಗಿದೆ. 2021 ರ ಜನವರಿ 8 ರಂದು ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಂದು 'ಆರ್.ಆರ್.ಆರ್' ಚಿತ್ರ ತೆರೆಗೆ ಬರಲಿದೆ. ಹಾಗಂತ ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡಿದೆ.

  ಸುದೀಪ್ ಗೆ ರಾಜಮೌಳಿ ಬುಲಾವ್ ನೀಡಿಲ್ಲ: ಗಾಸಿಪ್ ಗೆ ಸ್ಪಷ್ಟನೆ ಕೊಟ್ಟ ಕಿಚ್ಚ.!ಸುದೀಪ್ ಗೆ ರಾಜಮೌಳಿ ಬುಲಾವ್ ನೀಡಿಲ್ಲ: ಗಾಸಿಪ್ ಗೆ ಸ್ಪಷ್ಟನೆ ಕೊಟ್ಟ ಕಿಚ್ಚ.!

  ಮುಂದಕ್ಕೆ ಹೋಗಲು ಕಾರಣ ಏನು.?

  ಮುಂದಕ್ಕೆ ಹೋಗಲು ಕಾರಣ ಏನು.?

  'ಆರ್.ಆರ್.ಆರ್' ಚಿತ್ರದ ಚಿತ್ರೀಕರಣದ ವೇಳೆ ಜೂ.ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜಾ ಗಾಯಗೊಂಡಿದ್ದರು. ಇದರಿಂದ ಶೂಟಿಂಗ್ ಶೆಡ್ಯೂಲ್ ನಲ್ಲಿ ಬದಲಾವಣೆ ಮಾಡಲಾಗಿದೆ. ವರದಿಗಳ ಪ್ರಕಾರ, ಮಾರ್ಚ್ ಹೊತ್ತಿಗೆ 'ಆರ್.ಆರ್.ಆರ್' ಚಿತ್ರದ ಚಿತ್ರೀಕರಣ ಮುಕ್ತಾಯಗೊಳ್ಳಲಿದೆ.

  RRR ಚಿತ್ರದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಪಾತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವ್ಗನ್.?RRR ಚಿತ್ರದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಪಾತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವ್ಗನ್.?

  ಪೋಸ್ಟ್ ಪ್ರೊಡಕ್ಷನ್ ಗೆ ಹೆಚ್ಚು ಸಮಯ ಬೇಕು.!

  ಪೋಸ್ಟ್ ಪ್ರೊಡಕ್ಷನ್ ಗೆ ಹೆಚ್ಚು ಸಮಯ ಬೇಕು.!

  400 ಕೋಟಿ ರೂಪಾಯಿ ಬಜೆಟ್ ನಲ್ಲಿ ದಾನಯ್ಯ ನಿರ್ಮಿಸುತ್ತಿರುವ ರಾಮ್ ಚರಣ್ ತೇಜಾ, ಜೂ.ಎನ್.ಟಿ.ಆರ್, ಅಜಯ್ ದೇವ್ಗನ್, ಆಲಿಯಾ ಭಟ್ ಸೇರಿದಂತೆ ದೊಡ್ಡ ತಾರಾಬಳಗ ಹೊಂದಿರುವ 'ಆರ್.ಆರ್.ಆರ್' ಚಿತ್ರ 10 ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ. ಚಿತ್ರಕ್ಕೆ ಹೆಚ್ಚು ಗ್ರಾಫಿಕ್ಸ್ ವರ್ಕ್ ಬೇಕಾಗಿದೆ. ಇದಕ್ಕಾಗಿ ಕಾಲಾವಕಾಶ ಜಾಸ್ತಿ ಅವಶ್ಯವಿರುವುದರಿಂದ, ಮುಂದಿನ ವರ್ಷಾರಂಭದಲ್ಲಿ 'ಆರ್.ಆರ್.ಆರ್' ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿದೆ.

  ಆರ್.ಆರ್.ಆರ್ ಚಿತ್ರದ ಕುರಿತು

  ಆರ್.ಆರ್.ಆರ್ ಚಿತ್ರದ ಕುರಿತು

  ಸ್ವಾತಂತ್ರ್ಯ ಪೂರ್ವದ ಕೆಲ ಘಟನೆಗಳ ಸುತ್ತ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಕೋಮರಾಮ್ ಭೀಮ್ ಮತ್ತು ಅಲ್ಲುರಿ ಸೀತಾರಾಮ ರಾಜು ಕುರಿತು 'ಆರ್.ಆರ್.ಆರ್' ಚಿತ್ರಕಥೆ ಹೆಣೆಯಲಾಗಿದೆ. ಈ ಸಿನಿಮಾದಲ್ಲಿ ಕೋಮರಾಮ್ ಭೀಮ್ ಪಾತ್ರದಲ್ಲಿ ಜೂ.ಎನ್.ಟಿ.ಆರ್ ಕಾಣಿಸಿಕೊಂಡರೆ, ಅಲ್ಲುರಿ ಸೀತಾರಾಮ ರಾಜು ಆಗಿ ರಾಮ್ ಚರಣ್ ತೇಜಾ ಮಿಂಚಲಿದ್ದಾರೆ.

  English summary
  SS Rajamouli directorial RRR release date postponed, New date announced. RRR will be releasing on January 8, 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X