For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಚಿತ್ರೀಕರಣದ ವೇಳೆ ಥರ-ಥರ ನಡುಗಿದ ಜೂ.ಎನ್‌ಟಿಆರ್-ರಾಜಮೌಳಿ

  |

  ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ತೆಲುಗು ಸಿನಿಮಾ RRR ಚಿತ್ರೀಕರಣ ಪುನರ್ ಪ್ರಾರಂಭಿಸಿ ತಿಂಗಳಾಯಿತು.

  ಜೂ.ಎನ್‌ಟಿಆರ್, ರಾಮ್‌ ಚರಣ್ ತೇಜ ಅಂಥಹಾ ದೊಡ್ಡ ಸ್ಟಾರ್‌ಗಳು ನಟಿಸುತ್ತಿರುವ ಈ ಸಿನಿಮಾ ಬಗ್ಗೆ ಭಾರಿ ದೊಡ್ಡ ನಿರೀಕ್ಷೆ ಎದ್ದಿದೆ. ಹಾಗಾಗಿ ಸಿನಿಮಾವನ್ನು ಅದ್ಭುತವಾಗಿ ಮತ್ತು ತ್ವರಿತವಾಗಿ ಚಿತ್ರೀಕರಿಸುವಲ್ಲಿ ನಿರತರಾಗಿದ್ದಾರೆ ರಾಜಮೌಳಿ.

  RRR ಚಿತ್ರ ಫೈಟಿಂಗ್ ದೃಶ್ಯ ವೈರಲ್: ಮೈ ಜುಂ ಎನಿಸುವಂತಿಸದೆ ಮೇಕಿಂಗ್!

  ಸಿನಿಮಾದ ಗುಣಮಟ್ಟದ ವಿಷಯದಲ್ಲಿ ರಾಜಮೌಳಿ ರಾಜಿ ಆಗುವುದೇ ಇಲ್ಲ. ರಾಜಮೌಳಿ ಫರ್ಫೆಕ್ಷನ್‌ಗೆ ಈ ಹಿಂದಿನ ಸಿನಿಮಾಗಳಲ್ಲಿ ಹಲವಾರು ಉದಾಹರಣೆಗಳು ದೊರೆಯುತ್ತವೆ. ಎಂಥಹಾ ಕ್ಲಿಷ್ಟಕರ ಸನ್ನಿವೇಶವೇ ಇರಲಿ, ರಾಜಮೌಳಿ ಅಂದುಕೊಂಡದ್ದು ಆಗಲೇ ಬೇಕು. ಆದರೆ ರಾಜಮೌಳಿಯ ಈ ಹಠದಿಂದ ಚಿತ್ರತಂಡ ಹಲವಾರು ಪಡಿಪಾಟಲು ಪಡಬೇಕಾಗುತ್ತದೆ.

  ಬೇಗನೆ ಚಿತ್ರೀಕರಣ ಮುಗಿಸುವ ಒತ್ತಡದಲ್ಲಿ ರಾಜಮೌಳಿ

  ಬೇಗನೆ ಚಿತ್ರೀಕರಣ ಮುಗಿಸುವ ಒತ್ತಡದಲ್ಲಿ ರಾಜಮೌಳಿ

  ಇದೀಗ ಆರ್‌ಆರ್‌ಆರ್ ಸಿನಿಮಾದ ಚಿತ್ರೀಕರಣ ಪುನರ್‌ ಪ್ರಾರಂಭವಾಗಿದ್ದು, ಜೂ.ಎನ್‌ಟಿಆರ್ ಪಾತ್ರದ ಸನ್ನಿವೇಶಗಳ ಚಿತ್ರೀಕರಣ ಮಾಡಲಾಗುತ್ತಿದೆ. ಬೇಗನೆ ಚಿತ್ರೀಕರಣ ಮುಗಿಸುವ ಒತ್ತಡ ಇರುವ ಕಾರಣ ರಾತ್ರಿಪೂರಾ ಚಿತ್ರೀಕರಣಗ ನಡೆಸಲಾಗುತ್ತಿದೆ.

  ವಿಡಿಯೋ ಹರಿದಾಡುತ್ತಿದೆ

  ವಿಡಿಯೋ ಹರಿದಾಡುತ್ತಿದೆ

  ಆರ್‌ಆರ್‌ಆರ್ ಸಿನಿಮಾದ ಚಿತ್ರೀಕರಣ ಸ್ಥಳದ ವಿಡಿಯೋ ಒಂದು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಸೆಟ್‌ನಲ್ಲಿರುವ ಎಲ್ಲರೂ ಚಳಿಗೆ ಥರ-ಥರ ನಡುಗುತ್ತಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ವಿಡಿಯೋ ಇದಾಗಿದೆ.

  ಮುಸ್ಲಿಂ ಅಥವಾ ಹಿಂದು, ಕೋಮರಂ ಭೀಮ್ ಯಾರು? ಧರ್ಮವನ್ನೇ ಬದಲಾಯಿಸಿದರೇ ರಾಜಮೌಳಿ?

  ಚಳಿ ಕಾಯಿಸಿದ ಜೂ.ಎನ್‌ಟಿಆರ್-ರಾಜಮೌಳಿ

  ಚಳಿ ಕಾಯಿಸಿದ ಜೂ.ಎನ್‌ಟಿಆರ್-ರಾಜಮೌಳಿ

  ವಿಡಿಯೋದಲ್ಲಿ ಚಿತ್ರೀಕರಣ ಸೆಟ್‌ನಲ್ಲಿರುವವರು ಚಳಿಗೆ ನಡುಗುತ್ತಿದ್ದಾರೆ. ಬಿಸಿ ಕಾಯಿಸಿಕೊಳ್ಳುತ್ತಿದ್ದಾರೆ. ಜೂ.ಎನ್‌ಟಿಆರ್ ಹಾಗೂ ರಾಜಮೌಳಿ ಸಹ ಬಿಸಿ ಕಾಯಿಸುವ ಯಂತ್ರವೊಂದರ ಪಕ್ಕ ನಿಂತು ಬಿಸಿ ಕಾಯಿಸಿಕೊಳ್ಳುತ್ತಿದ್ದಾರೆ.

  ಚಿತ್ರೀಕರಣದ ವಿಡಿಯೋ ಲೀಕ್ ಆಗಿತ್ತು

  ಚಿತ್ರೀಕರಣದ ವಿಡಿಯೋ ಲೀಕ್ ಆಗಿತ್ತು

  ಇತ್ತೀಚೆಗಷ್ಟೆ ಆರ್‌ಆರ್‌ಆರ್‌ ಸಿನಿಮಾ ಚಿತ್ರೀಕರಣದ ಮತ್ತೊಂದು ವಿಡಿಯೋ ಹೊರಬಂದಿತ್ತು. ಆಕ್ಷನ್ ದೃಶ್ಯದ ಚಿತ್ರೀಕರಣದ ವಿಡಿಯೋ ಅದಾಗಿತ್ತು. ಹಲವಾರು ಸಂಖ್ಯೆಯ ಜನರು ಭಾಗವಹಿಸಿದ್ದ ಯುದ್ಧದ ದೃಶ್ಯದ ಚಿತ್ರೀಕರಣ ವಿಡಿಯೋ ಮೈ ಜುಮ್ಮೆನಿಸುವಂತಿತ್ತು.

  RRR ನಿರ್ದೇಶಕ ರಾಜಮೌಳಿ ಮೇಲೆ ದೃಶ್ಯ ಕದ್ದ ಆರೋಪ

  English summary
  RRR team shivering in cold while shooting the movie. Jr NTR, Rajamouli and team members were shooting the movie midnight in cold climate.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X