Just In
Don't Miss!
- Lifestyle
ಈ ವಿಚಾರ ಕೇಳಿದ್ರೆ ಮುಂದೆಂದೂ ನೀವು ಪಪ್ಪಾಯ ಬೀಜವನ್ನು ಬಿಸಾಡಲಾರರಿ!
- News
ತೆರೆಮರೆಯ ಸಾಧಕರಿಗೆ ಮಾ.7ರಂದು ಪ್ರಣಾಮ್ ಕಾರ್ಯಕ್ರಮ
- Sports
ಐಪಿಎಲ್ 2021: ಆರಂಭ-ಅಂತ್ಯ, ತಾಣಗಳು ಸಂಪೂರ್ಣ ಮಾಹಿತಿ
- Automobiles
ಆರ್ 15 ಬೈಕಿನ ಎಂಜಿನ್ನೊಂದಿಗೆ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ ಯಮಹಾ ಮ್ಯಾಕ್ಸಿ ಸ್ಕೂಟರ್
- Education
WCD Ballari Recruitment 2021: ಅಂಗನವಾಡಿಯಲ್ಲಿ 170 ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಏರ್ಬ್ಯಾಗ್ ಕಡ್ಡಾಯಗೊಳಿಸಿದ ಹಿನ್ನೆಲೆ: ಹೊಸ ಕಾರುಗಳ ಬೆಲೆ ಹೆಚ್ಚಳವಾಗಲಿದೆ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕತೆಯ ಎಳೆ ಬಹಿರಂಗ: 'ರಾಧೆ-ಶ್ಯಾಂ' ಕೇವಲ ಪ್ರೇಮ ಕತೆಯಲ್ಲ
ಪ್ರಭಾಸ್ ನಟನೆಯ 'ರಾಧೆ-ಶ್ಯಾಂ' ಸಿನಿಮಾದ ಬಗ್ಗೆ ಭಾರಿ ಕುತೂಹಲ ಎದ್ದಿದೆ. ಸಿನಿಮಾದ ಟೀಸರ್ ಪ್ರೇಮಿಗಳ ದಿನಾಚರಣೆಯಂದು ಬಿಡುಗಡೆ ಆಗಲಿದ್ದು, ಈಗಾಗಲೇ ಕೆಲವು ಪೋಸ್ಟರ್‌ಗಳು ಬಿಡುಗಡೆ ಆಗಿವೆ.
ಈವರೆಗೆ ಬಿಡುಗಡೆ ಆಗಿರುವ ಪೋಸ್ಟರ್‌ಗಳನ್ನು ನೋಡಿದರೆ ಸಿನಿಮಾವು ಕೆಲವು ದಶಕಗಳ ಹಿಂದೆ ನಡೆಯುವ ಕತೆ ಎನ್ನುವುದು ಗೊತ್ತಾಗುತ್ತಿದೆ. ಅದರಲ್ಲಿಯೂ ಇದೊಂದು ಅಪ್ಪಟ ಪ್ರೇಮ ಕತೆ ಎಂಬುದು ಪೋಸ್ಟರ್‌ಗಳಿಂದ ತಿಳಿದು ಬರುತ್ತಿದೆ. ನಿರ್ದೇಶಕರೂ ಇದನ್ನೇ ಹೇಳಿದ್ದಾರೆ.
ಆದರೆ ಇದೀಗ ಸಿನಿಮಾದ ಕತೆಯ ಎಳೆಯನ್ನು ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ನಟರೊಬ್ಬರು ಬಿಟ್ಟುಕೊಂಡಿದ್ದು. 'ರಾಧೆ-ಶ್ಯಾಂ' ಸಿನಿಮಾ ಕೇವಲ ಪ್ರೇಮಕತೆಯಲ್ಲ ಕತೆಯಲ್ಲಿ ಇನ್ನೊಂದು ಕೋನವೂ ಇದೆ ಎಂಬುದನ್ನು ಹೇಳಿದ್ದಾರೆ.

'ರಾಧೆ-ಶ್ಯಾಂ' ಸಿನಿಮಾದ ಕತೆಯ ಎಳೆ ಬಿಟ್ಟುಕೊಟ್ಟ ನಟ
'ರಾಧೆ-ಶ್ಯಾಂ' ಸಿನಿಮಾದಲ್ಲಿ ಖ್ಯಾತ ನಟ ಸಚಿನ್ ಖೆಡೇಕರ್ ಅವರೂ ನಟಿಸಿದ್ದು, ಮಾಧ್ಯಮಗಳೊಟ್ಟಿಗೆ ರಾಧೆ-ಶ್ಯಾಂ ಅನುಭವದ ಬಗ್ಗೆ ಮಾತನಾಡುತ್ತಾ, 'ಇದೊಂದು ಪ್ರೇಮಕತೆ ಹೌದು. ಅದರ ಜೊತೆಗೆ ವಿಜ್ಞಾನ ಮತ್ತು ಜೋತಿಷ್ಯ ಶಾಸ್ತ್ರದ ನಡುವಿನ ತಿಕ್ಕಾಟದ ಕತೆಯೂ ಇದೆ' ಎಂದು ಗುಟ್ಟು ಬಿಟ್ಟುಕೊಟ್ಟಿದ್ದಾರೆ.

ವಿಜ್ಞಾನ-ಜ್ಯೋತಿಷ್ಯದ ನಡುವೆ ತಿಕ್ಕಾಟ
ಸಿನಿಮಾದಲ್ಲಿ ವಿಜ್ಞಾನ ಮತ್ತು ಜ್ಯೋತಿಷ್ಯ ಶಾಸ್ತ್ರದ ನಡುವೆ ತಿಕ್ಕಾಟದ ಕತೆಯೂ ಇರಲಿದೆ ಎಂಬ ಸಚಿನ್ ಖೆಡೇಕರ್ ಅವರ ಮಾತು, 'ರಾಧೆ-ಶ್ಯಾಂ' ಸಿನಿಮಾದ ಬಗ್ಗೆ ಕುತೂಹಲವನ್ನು ನೂರ್ಮಡಿಗೊಳಿಸಿದೆ. ಸಿನಿಮಾದಲ್ಲಿ ಪ್ರೀತಿ-ಪ್ರೇಮದ ಜೊತೆಗೆ ಥ್ರಿಲ್ಲರ್ ಸಹ ಇರಲಿದೆಯೇ ಎಂಬ ಅನುಮಾನ ಹೆಚ್ಚಾಗಿದೆ.

ಪ್ರಭಾಸ್ ಪಾತ್ರದ ಬಗ್ಗೆಯೂ ಗುಟ್ಟು ಬಿಟ್ಟುಕೊಟ್ಟ ನಟ
'ಪ್ರಭಾಸ್‌ಗೆ ತಮ್ಮ ಭವಿಷ್ಯದ ಎಲ್ಲವೂ ಗೊತ್ತಿರುತ್ತದೆ. ಅವರಿಗೆ ಮುಂದೆ ಏನಾಗುತ್ತದೆ ಎಂಬುದು ಗೊತ್ತಿರುತ್ತದೆ' ಎಂದು ಪ್ರಭಾಸ್ ಪಾತ್ರದ ಬಗ್ಗೆಯೂ ಗುಟ್ಟು ಬಿಟ್ಟುಕೊಟ್ಟಿದ್ದಾರೆ ನಟ ಸಚಿನ್ ಖೆಡೇಕರ್. ನಟ ಸಚಿನ್ ಅವರು ಸಿನಿಮಾದಲ್ಲಿ ವೈದ್ಯನ ಪಾತ್ರದಲ್ಲಿ ನಟಿಸಿದ್ದಾರಂತೆ.

ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಲಿದೆ
'ರಾಧೆ-ಶ್ಯಾಂ' ಸಿನಿಮಾದಲ್ಲಿ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿದ್ದಾರೆ. ಸಿನಿಮಾವು ಪ್ಯಾರಿಸ್‌ನಲ್ಲಿ ಚಿತ್ರೀಕರಣಗೊಂಡಿದೆ. ಸಿನಿಮಾದ ಟೀಸರ್ ಪ್ರೇಮಿಗಳ ದಿನ ಬಿಡುಗಡೆ ಆಗಲಿದ್ದು, ಅದೇ ದಿನ ಸಿನಿಮಾದ ಬಿಡುಗಡೆ ದಿನಾಂಕವನ್ನೂ ಘೋಷಿಸಲಾಗುತ್ತದೆ. ಸಿನಿಮಾವನ್ನು ರಾಧಾ ಕೃಷ್ಣ ಕುಮಾರ್ ನಿರ್ದೇಶಿಸಿದ್ದಾರೆ.