For Quick Alerts
  ALLOW NOTIFICATIONS  
  For Daily Alerts

  ಪ್ರೇಮಿಗಳ ದಿನದಂದು ಹೊರಬಂತು ಸಾಯಿ ಪಲ್ಲವಿ 'ಲವ್ ಸ್ಟೋರಿ'

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಮತ್ತೆ ಸುದ್ದಿಯಲ್ಲಿದ್ದಾರೆ. ಲವ್ ಸ್ಟೋರಿ ಮೂಲಕ ಮತ್ತೆ ಅಭಿಮಾನಿಗಳ ಮನಸೆಳೆಯುತ್ತಿದ್ದಾರೆ. ಪ್ರೇಮಿಗಳ ದಿನಚಾರಣೆಯ ಪ್ರಯುಕ್ತ ಸಾಯಿ ಪಲ್ಲವಿ ಲವ್ ಸ್ಟೋರಿ ರಿವೀಲ್ ಮಾಡಿದ್ದಾರೆ. ಅಂದ್ಹಾಗೆ ಇದು ಸಾಯಿ ಪಲ್ಲವಿ ಅವರ ರಿಯಲ್ 'ಲವ್ ಸ್ಟೋರಿ' ಅಂತ ಅಂದ್ಕೋಬೇಡಿ.

  ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಅಭಿನಯದ 'ಲವ್ ಸ್ಟೋರಿ' ಸಿನಿಮಾದ ಪುಟ್ಟ ಟೀಸರ್ ರಿಲೀಸ್ ಆಗಿದೆ. ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಚಿತ್ರತಂಡ ರೋಮ್ಯಾಂಟಿಕ್ ಟೀಸರ್ ರಿಲೀಸ್ ಮಾಡಿದೆ. ಇದು ಚಿತ್ರದ ಹಾಡಿನ ಟೀಸರ್ ಆಗಿದ್ದು, ಸಾಯಿ ಮತ್ತು ನಾಗ್ ಇಬ್ಬರು ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.

  ಸಾಯಿ ಪಲ್ಲವಿ ಜೀವನದಲ್ಲಿ ಶುರುವಾಯ್ತು 'ಲವ್ ಸ್ಟೋರಿ'

  ಇಬ್ಬರ ರೋಮ್ಯಾಂಟಿಕ್ ಟೀಸರ್ ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟೀಸರ್ ಪುಟ್ಟದಾಗಿ ಸಿಂಪಲ್ ಆಗಿದ್ದರು ಅಭಿಮಾನಿಗಳ ಹೃದಯ ಗೆದ್ದಿದೆ. ಟೀಸರ್ ಮೂಲಕ ಮತ್ತೊಮ್ಮೆ ಸಾಯಿ ಮೋಡಿ ಮಾಡಿದ್ದು ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ.

  ಅಂದ್ಹಾಗೆ ಲವ್ ಸ್ಟೋರಿ ನಿರ್ದೇಶಕ ಶೇಖರ್ ಕಮ್ಮುಲಾ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಈ ಹಿಂದೆ ಸಾಯಿ ಪಲ್ಲವಿ ಜೊತೆ 'ಫಿದಾ' ಸಿನಿಮಾ ಮಾಡಿದ್ದ ಶೇಖರ್ ಕಮ್ಮುಲಾ ಎರಡನೆ ಬಾರಿಗೆ ಸಾಯಿ ಪಲ್ಲವಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಬ್ಬರ ಕಾಂಬಿನೇಷನ್ ಲ್ಲಿ ಬರ್ತಿರುವ 'ಲವ್ ಸ್ಟೋರಿ' ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  English summary
  Actress Sai Pallavi and Nag Chaitanya starrer Love story movie teaser released for Valentine's Day special.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X