For Quick Alerts
  ALLOW NOTIFICATIONS  
  For Daily Alerts

  ಸಾಯಿ ಪಲ್ಲವಿ- ನಾಗಚೈತನ್ಯ ಲವ್ ಸ್ಟೋರಿ ಭಾರಿ ಮೊತ್ತಕ್ಕೆ ಮಾರಾಟ

  By Avani Malnad
  |

  ಲಾಕ್ ಡೌನ್ ಬಳಿಕ ಸಿನಿಮಾ ಅಭಿಮಾನಿಗಳು ಕಾತರದಿಂದ ವೀಕ್ಷಿಸಲು ಕಾದಿರುವ ಸಿನಿಮಾಗಳಲ್ಲಿ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಅಭಿನಯದ 'ಲವ್ ಸ್ಟೋರಿ' ಚಿತ್ರವೂ ಒಂದು. ಶೇಖರ್ ಕಮ್ಮುಲಾ ನಿರ್ದೇಶನದ ಈ ಚಿತ್ರಕ್ಕೆ ಈಗಾಗಲೇ ಬಹಳ ಹೈಪ್ ಸಿಕ್ಕಿದೆ. ಸಾಯಿಪಲ್ಲವಿ ಮತ್ತು ನಾಗಚೈತನ್ಯ ಜೋಡಿ ತೆರೆಯ ಮೇಲೆ ಹೇಗೆ ಕಾಣಿಸಿಕೊಳ್ಳಲಿದೆ ಎಂಬ ಕುತೂಹಲ ಹೆಚ್ಚಿದೆ.

  Akshay Kumar only Indian in the top 100 richest celebrities list | Akshay Kumar | Forbes

  ಈ ಚಿತ್ರ ಇನ್ನೂ ಚಿತ್ರೀಕರಣ ಹಂತದಲ್ಲಿರುವಾಗಲೇ ಹೊಸ ಸುದ್ದಿಯೊಂದು ಬಂದಿದೆ. ಚಿತ್ರದ ಚಿತ್ರಮಂದಿರೇತರ ಹಕ್ಕುಗಳಿಗೆ ಕೋಟ್ಯಂತರ ರೂಪಾಯಿ ಡಿಮ್ಯಾಂಡ್ ಬಂದಿದ್ದು, ಭಾರಿ ಮೊತ್ತದ ಹಣಕ್ಕೆ ನಿರ್ಮಾಪಕರು ಸಿನಿಮಾ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಸಮಾಜದಲ್ಲಿನ ಜಾತಿ ತಾರತಮ್ಯದ ವಸ್ತುವನ್ನು ಈ ಕಥೆ ಹೊಂದಿದ್ದು, ಸೆನ್ಸೇಷನ್ ಸೃಷ್ಟಿಸುವ ನಿರೀಕ್ಷೆ ಇದೆ. ಮುಂದೆ ಓದಿ...

  16 ಕೋಟಿ ರೂ.ಗೆ ಮಾರಾಟ

  16 ಕೋಟಿ ರೂ.ಗೆ ಮಾರಾಟ

  ಚಿತ್ರದ ಡಿಜಿಟಲ್ ಹಕ್ಕು, ಉಪಗ್ರಹ ಹಕ್ಕು ಮತ್ತು ಹಿಂದಿ ಡಬ್ಬಿಂಗ್ ಹಕ್ಕುಗಳನ್ನು 16 ಕೋಟಿ ರೂ.ಗಳಷ್ಟು ಭಾರಿ ಮೊತ್ತದ ಹಣಕ್ಕೆ ಮಾರಾಟವಾಗಿದೆ ಎಂದು ವರದಿಯಾಗಿದೆ. ಇನ್ನೂ ಚಿತ್ರೀಕರಣ ಹಂತದಲ್ಲಿರುವ ಸಿನಿಮಾಕ್ಕೆ ಇಷ್ಟು ಬೇಡಿಕೆ ಬಂದಿರುವುದು ವಿಶೇಷ.

  ಗಂಡನ 'ಪ್ರೇಯಸಿ'ಯನ್ನು ಮನತುಂಬಿ ಹೊಗಳಿದ ಸಮಂತಾ

  ಅಲ್ಲು ಅರ್ಜುನ್ 'ಆಹಾ'

  ಅಲ್ಲು ಅರ್ಜುನ್ 'ಆಹಾ'

  'ಲವ್ ಸ್ಟೋರಿ' ಚಿತ್ರದ ಡಿಜಿಟಲ್ ಪ್ರಸಾರದ ಹಕ್ಕುಗಳನ್ನು ನಟ ಅಲ್ಲು ಅರ್ಜುನ್ ಮಾಲೀಕತ್ವದ 'ಆಹಾ' ಒಟಿಟಿ ಪ್ಲಾಟ್‌ಫಾರ್ಮ್ ಖರೀದಿಸಿದೆ. ಹಾಗೆಯೇ ಸ್ಟಾರ್ ಮಾ ವಾಹಿನಿ ಅದರ ಉಪಗ್ರಹ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿದೆ.

  ಮರ್ಯಾದಾ ಹತ್ಯೆಯ ಕಥೆ

  ಮರ್ಯಾದಾ ಹತ್ಯೆಯ ಕಥೆ

  ಲವ್ ಸ್ಟೋರಿ ಸಿನಿಮಾ ಒಂದು ರೊಮ್ಯಾಂಟಿಕ್ ಎಮೋಷನಲ್ ಡ್ರಾಮಾ ಕಥೆಯಾಗಿದೆ. ಈ ಚಿತ್ರದಲ್ಲಿ ನಿರ್ದೇಶಕ ಶೇಖರ್ ಅವರು ಮರ್ಯಾದಾ ಹತ್ಯೆಯಂತಹ ಗಂಭೀರ ಸಮಸ್ಯೆಯ ವಿರುದ್ಧ ಕಠಿಣವಾದ ಸಂದೇಶವನ್ನು ನೀಡಿದ್ದಾರೆ ಎನ್ನಲಾಗಿದೆ.

  ಅಂತರ್ಜಾತಿ ಪ್ರೇಮಕತೆ ನೆಪದಲ್ಲಿ ಸಾಯಿ ಪಲ್ಲವಿ ಜಾತಿ ಕಂಡುಹಿಡಿದರು!

  ಪ್ರೀತಿ-ಪ್ರೇಮದ ಕಿತ್ತಾಟ

  ಪ್ರೀತಿ-ಪ್ರೇಮದ ಕಿತ್ತಾಟ

  ಪ್ರೀತಿ ಪ್ರೇಮದ ಸಂಗತಿಗಳಲ್ಲಿ ನಂಬಿಕೆ ಇರಿಸದ, ಅಂತಹ ವಿಷಯಗಳನ್ನು ವಿರೋಧಿಸುವ ಸಂಪ್ರದಾಯಸ್ಥ ಕುಟುಂಬದ ಯುವತಿಯಾಗಿ ಸಾಯಿ ಪಲ್ಲವಿ ನಟಿಸಿದ್ದು, ಅವರನ್ನು ಪ್ರೀತಿಸುವ ಯುವಕನ ಪಾತ್ರದಲ್ಲಿ ನಾಗಚೈತನ್ಯ ಕಾಣಿಸಿಕೊಂಡಿದ್ದಾರೆ. ಸಿನಿಮಾ ಚಿತ್ರೀಕರಣದ ಕೊನೆಯ ಹಂತ ಬಾಕಿ ಇದೆ. ಮುಂದಿನ ವರ್ಷ ತೆರೆಕಾಣುವ ನಿರೀಕ್ಷೆಯಿದೆ.

  English summary
  Sai Pallavi and Naga Chaitanya starrer Love Story's non theatrical rights sold for a whopping amount of Rs 16 crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X