For Quick Alerts
  ALLOW NOTIFICATIONS  
  For Daily Alerts

  'RX 100' ಖ್ಯಾತಿಯ ನಿರ್ದೇಶಕನ ಸಿನಿಮಾದಲ್ಲಿ ಸಾಯಿ ಪಲ್ಲವಿ: ನಾಯಕ ಇವರೆ

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ನಾಗ ಚೈತನ್ಯ ಜೊತೆ ಲವ್ ಸ್ಟೋರಿ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಸಾಯಿ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇದರ ಬೆನ್ನಲ್ಲೆ ಈಗ ಸಾಯಿ ಮತ್ತೊಂದು ತೆಲುಗು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

  ನಾನು ಸ್ಲಮ್ ಅಲ್ಲ!! | Duniya Rashmi | Jaggi Jaganath | Om Sai Prakash | Filmibeat Kannada

  ಹೌದು, ಸೂಪರ್ ಹಿಟ್ 'RX 100' ಸಿನಿಮಾ ಖ್ಯಾತಿಯ ನಿರ್ದೇಶಕ ಅಜಯ್ ಭೂಪತಿ ಸಿನಿಮಾ ಆಕ್ಷನ್ ಕಟ್ ಹೇಳುತ್ತಿರುವ ಮಹಾ ಸಮುದ್ರಂ ಚಿತ್ರಕ್ಕೆ ಸಾಯಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಈ ಮೊದಲು ಚಿತ್ರದಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ, ಬಾಲಿವುಡ್ ನಟಿ ಅಧಿತಿ ರಾವ್ ಹೈದರಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಮಹಾ ಸಮುದ್ರಂ ಸಿನಿಮಾ ಸಾಯಿ ಪಲ್ಲವಿ ಪಾಲಾಗಿದೆ.

  ಅಂತರ್ಜಾತಿ ಪ್ರೇಮಕತೆ ನೆಪದಲ್ಲಿ ಸಾಯಿ ಪಲ್ಲವಿ ಜಾತಿ ಕಂಡುಹಿಡಿದರು!ಅಂತರ್ಜಾತಿ ಪ್ರೇಮಕತೆ ನೆಪದಲ್ಲಿ ಸಾಯಿ ಪಲ್ಲವಿ ಜಾತಿ ಕಂಡುಹಿಡಿದರು!

  ಅಂದ್ಹಾಗೆ ಮಹಾ ಸಮುದ್ರಂ ಚಿತ್ರದಲ್ಲಿ ನಾಯಕನಾಗಿ ಶರ್ವಾನಂದ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಸಾಯಿ ಪಲ್ಲವಿ ಮತ್ತು ಶರ್ವಾನಂದ್ ಒಂದು ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪಡಿ ಪಡಿ ಲೆಚೆ ಮನಸು ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದ ಈ ಜೋಡಿ ಈಗ ಎರಡನೆ ಬಾರಿ ಒಂದಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

  ಸದ್ಯ ಲವ್ ಸ್ಟೋರಿ ಸಿನಿಮಾದಲ್ಲಿ ಬ್ಯುಸಿ ಇರುವ ಸಾಯಿ ಈ ಸಿನಿಮಾ ಮುಗಿಯುತ್ತಿದ್ದಂತೆ ಮಹಾ ಸಮುದ್ರಂ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾದ್ಯತೆ ಇದೆ.

  English summary
  Actress Sai Pallavi playing leading lady in RX 100 fame director Ajay's next.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X