'NTR30' ಸಿನಿಮಾಗೆ ಸಾಯಿ ಪಲ್ಲವಿ ನಾಯಕಿ!

ಇತ್ತೀಚೆಗಷ್ಟೇ 'ಕೆಜಿಎಫ್ 2' ಸಿನಿಮಾದ ಮೂಲಕ ಸೂಪರ್ ಸಕ್ಸಸ್ ಗಳಿಸಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ಸಿನಮಾಗಳ ಬಗ್ಗೆ ನಿರೀಕ್ಷೆ ಸಾಕಷ್ಟು ಕುತೂಹಲ ಹುಟ್ಟಿಕೊಂಡಿದೆ. 'ಸಲಾರ್' ಬಳಿಕ ತೆಲುಗು ನಟ ಜೂನಿಯರ್ ಎನ್‌ಟಿಆರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡ್ತಿದ್ದಾರೆ.

ಇನ್ನು ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್ RRR ಚಿತ್ರದ ಬಳಿಕ ತಮ್ಮ ಮುಂದಿನ ಸಿನಿಮಾಗಳಿಗೆ ತಯಾರಿ ನಡೆಸುತ್ತಿದ್ದಾರೆ. ಈ ಸಾಲಿನಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾ ಕೂಡ ಇದೆ. ಈ ಚಿತ್ರದ ಫಸ್ಟ್ ಲುಕ್ ಲಾಂಚ್ ಬಳಿಕ ಚಿತ್ರದ ಅಪ್ಟೇಟ್‌ಗಾಗಿ ಕಾಯುತ್ತಿದ್ದರು.

ಇದರ ಜೊತೆಗೆ ಜೂನಿಯರ್ ಎನ್‌ಟಿಆರ್ 30ನೇ ಸಿನಿಮಾ ಯಾವಾಗ ಶುರು ಎಂದು ಕಾಯುತ್ತಿದ್ದಾರೆ. ಈ ಚಿತ್ರದ ನಾಯಕಿ ಯಾರು ಎನ್ನುವ ಬಗ್ಗೆ ಟಾಲಿವುಡ್‌ನಲ್ಲಿ ಒಂದಷ್ಟು ಸುದ್ದಿಗಳು ಹರಿದಾಡುತ್ತಿವೆ. ಜೂನಿಯರ್‌ ಎನ್‌ಟಿಆರ್ ಜೊತೆಗೆ ಸೌತ್ ಸ್ಟಾರ್ ನಟಿಯ ಹೆಸರು ಕೇಳಿ ಬಂದಿದೆ.

ಸಾಯಿ ಪಲ್ಲವಿ!

ಸಾಯಿ ಪಲ್ಲವಿ!

ಜೂನಿಯರ್ ಎನ್‌ಟಿಆರ್ ಮುಂದಿನ ಸಿನಿಮಾ ಈಗಾಗಲೇ ನಿಗದಿಯಾಗಿದೆ. ನಿರ್ದೇಶಕ ಕೊರಟಾಲ ಶಿವ ಜೊತೆ ಮುಂದಿನ ಸಿನಿಮಾ ಮಾಡುತ್ತಿದ್ದಾರೆ. ಇದು 30ನೇ ಸಿನಿಮಾ ಆದ ಕಾರಣ, ಹೆಚ್ಚಿನ ಮುತುವರ್ಜಿ ವಹಿಸಿ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೆ ನಟಿ ಸಾಯಿ ಪಲ್ಲವಿ ಹೆಸರು ಕೇಳಿ ಬರ್ತಿದೆ. ಈ ಹಿಂದೆ ಸಮಂತಾ ಹೆಸರು ಕೂಡ ಕೇಳಿ ಬಂದಿತ್ತು. ಆದರೆ ಜೂ.ಎನ್‌ಟಿಆರ್ ಜೊತೆಗೆ ತೆರೆಹಂಚಿಕೊಳ್ಳುವ ಸುಂದರಿ ಯಾರು ಎನ್ನುವುದು ಇನ್ನಷ್ಟೇ ರಿವೀಲ್ ಆಗಬೇಕಿದೆ.

'Ntr31' ಬಗ್ಗೆ ಪ್ರಶಾಂತ್ ನೀಲ್!

'Ntr31' ಬಗ್ಗೆ ಪ್ರಶಾಂತ್ ನೀಲ್!

ಜೂನಿಯರ್ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲಗಳಿದ್ದವು. ಇದಕ್ಕೆಲ್ಲ ಈಗ ಪ್ರಶಾಂತ್ ನೀಲ್ ಉತ್ತರ ಕೊಟ್ಟಿದ್ದಾರೆ. ಸಿನಿಮಾದ ಶೂಟಿಂಗ್ ಯಾವಾಗ ಎನ್ನುವ ಅಪ್ಡೇಟ್ ಕೊಟ್ಟಿದ್ದಾರೆ. "ಸಲಾರ್ ಬಳಿಕ ಜೂನಿಯರ್ ಎನ್‌ಟಿಆರ್ ಸಿನಿಮಾ ಶುರುಮಾಡಲಿದ್ದೇನೆ. ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಸಿನಿಮಾದ ಶೂಟಿಂಗ್ ಪ್ರಾರಂಭವಾಗಲಿದೆ." ಎಂದು ಹೇಳಿದ್ದಾರೆ.

ಜೂ.ಎನ್‌ಟಿಆರ್ ಮುಂದಿನ ಸಿನಿಮಾ!

ಜೂ.ಎನ್‌ಟಿಆರ್ ಮುಂದಿನ ಸಿನಿಮಾ!

ನಟ ಜೂನಿಯರ್ ಎನ್‌ಟಿಆರ್ ಕೆಲವು ದಿನಗಳಿಂದ ಭುಜ ಮತ್ತು ಮೊಣಕಾಲು ನೋವಿನಿಂದ ಬಳಲುತ್ತಿದ್ದು, ಸದ್ಯ ಸಿನಿಮಾ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿಲ್ಲ. ಹಾಗಾಗಿ 30ನೇ ಸಿನಿಮಾ ಕೂಡ ತಡವಾಗುತ್ತಿದೆ. ಜೂನಿಯರ್ ಎನ್‌ಟಿಆರ್ ಮುಂದಿನ ಚಿತ್ರವನ್ನು ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಈ ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಚಿತ್ರದ ನಾಯಕಿಯ ಹುಡುಕಾಟದಲ್ಲಿದೆ ಚಿತ್ರತಂಡ.

ಜೂನಿಯರ್ NTR ಲುಕ್ ವೈರಲ್!

ಜೂನಿಯರ್ NTR ಲುಕ್ ವೈರಲ್!

ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್‌ಟಿಆರ್ ಇಬ್ಬರೂ ಸಿನಿಮಾ ಮಾಡುತ್ತಾರೆ ಎನ್ನುವಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಇನ್ನು ಚಿತ್ರದ ಫಸ್ಟ್ ಲುಕ್ ರಿಲೀಸ್ ಆದಾಗ ಈ ಚಿತ್ರದ ಮೇಲೆ, ಕತೆಯ ಮೇಲೆ ಎಲ್ಲಿಲ್ಲದ ನಿರೀಕ್ಷೆ ಹುಟ್ಟಿಕೊಂಡಿತು. ಆದರೆ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. 'ಸಲಾರ್' ರಿಲೀಸ್ ಆಗಿ ಒಂದು ವರ್ಷ ಮುಂದೆ ಹೋಗಿದೆ. ಹಾಗಾಗಿ ಜೂನಿಯರ್ NTR ಜೊತೆಗಿನ ಸಿನಿಮಾ ತಡವಾಗಬಹುದು ಎನ್ನಲಾಗಿತ್ತು. ಹೆಚ್ಚು ತಡಮಾಡದೆ ಮುಂದಿನ ವರ್ಷ ಏಪ್ರಿಲ್‌ನಲ್ಲಿ ಸಿನಿಮಾ ತೆರೆಕಾಣಲಿದೆ.

More from Filmibeat

English summary
Sai Pallavi Is the Heroine For Jr NTR next Movie, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X