For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಟನಿಗೆ ತಂಗಿ ಆಗಲಿದ್ದಾರೆ ನಟಿ ಸಾಯಿ ಪಲ್ಲವಿ

  |

  ನಟಿ ಸಾಯಿ ಪಲ್ಲವಿಗೆ ಈಗ ಭಾರಿ ಬೇಡಿಕೆ. ತೆಲುಗು, ತಮಿಳು, ಮಲಯಾಳಂ ಸಿನಿಮಾ ರಂಗಗಳಿಂದ ಹಲವು ಸಿನಿಮಾ ಆಫರ್‌ಗಳು ಸಾಯಿ ಪಲ್ಲವಿ ಗೆ ಬರುತ್ತಲೇ ಇವೆ. ಆದರೆ ಸಾಯಿ ಪಲ್ಲವಿ ಅಳೆದು ತೂಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.

  ಈಗಾಗಲೇ ಮೂರು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ ಸಾಯಿ ಪಲ್ಲವಿ. ಇನ್ನೂ ಬಿಡುಗಡೆ ಆಗದ ಲವ್‌ ಸ್ಟೋರಿ, ವಿರಾಟ ಪರ್ವಂ, ಶ್ಯಾಂ ಸಿಂಗ್ ರಾಯ್ ಸಿನಿಮಾ ಸೇರಿದಂತೆ ಆ ಸಂಖ್ಯೆ ಆರಕ್ಕೆ ಏರುತ್ತದೆ. ಈ ನಡುವೆ ಮತ್ತೆರಡು ತೆಲುಗು ಸಿನಿಮಾಗಳ ಆಫರ್ ಬಂದಿದೆ ಸಾಯಿ ಪಲ್ಲವಿಗೆ.

  ಒಂದು ಪವನ್ ಕಲ್ಯಾಣ್ ಸಿನಿಮಾದ್ದಾದರೆ ಮತ್ತೊಂದು ಸ್ಟಾರ್ ನಟನ ಸಿನಿಮಾದಿಂದ ಆಫರ್ ಬಂದಿದ್ದು. ಸಿನಿಮಾದಲ್ಲಿ ಸಾಯಿ ಪಲ್ಲವಿಯು ಸ್ಟಾರ್ ನಟನಿಗೆ ತಂಗಿಯಾಗಿ ನಟಿಸಬೇಕಿದೆ. ಆದರೆ ಪಾತ್ರ ಗಟ್ಟಿಯಾಗಿರುವ ಕಾರಣ ಸಾಯಿ ಪಲ್ಲವಿ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

  ಅಲ್ಲು ಅರ್ಜುನ್ ತಂಗಿಯಾಗಿ ಸಾಯಿ ಪಲ್ಲವಿ?

  ಅಲ್ಲು ಅರ್ಜುನ್ ತಂಗಿಯಾಗಿ ಸಾಯಿ ಪಲ್ಲವಿ?

  ಅಲ್ಲು ಅರ್ಜುನ್ ನಟಿಸಿ, ಸುಕುಮಾರ್ ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಪುಷ್ಪಾ' ದಲ್ಲಿ ಸಾಯಿ ಪಲ್ಲವಿ ಅಲ್ಲು ಅರ್ಜುನ್ ತಂಗಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕೆಲವೇ ದೃಶ್ಯಗಳಲ್ಲಿ ಇದ್ದರೂ ಸಖತ್ ಪವರ್‌ಫುಲ್ ಆದ ಪಾತ್ರ ಇದಾಗಿರಲಿದೆ ಎನ್ನಲಾಗುತ್ತಿದೆ.

  ಪುಷ್ಪಾ ಸಿನಿಮಾದಲ್ಲಿ ನಟಿಸಲು ಸಾಯಿ ಪಲ್ಲವಿ ಒಪ್ಪಿಗೆ?

  ಪುಷ್ಪಾ ಸಿನಿಮಾದಲ್ಲಿ ನಟಿಸಲು ಸಾಯಿ ಪಲ್ಲವಿ ಒಪ್ಪಿಗೆ?

  ಪಾತ್ರದ ಪ್ರಾಮುಖ್ಯತೆಗೆ ಆದ್ಯತೆ ನೀಡುವ ಸಾಯಿ ಪಲ್ಲವಿ. ಪುಷ್ಪಾ ಸಿನಿಮಾದಲ್ಲಿ ತಮಗೆ ಆಫರ್ ಮಾಡಲಾಗಿರುವ ಪಾತ್ರ ಚಿಕ್ಕದಾಗಿದ್ದರೂ ಸಹ ಪಾತ್ರಕ್ಕೆ ಹೆಚ್ಚು ತೂಕವಿರುವ ಕಾರಣ ಒಪ್ಪಿಕೊಂಡಿದ್ದಾರೆ. ಎರಡು ತಿಂಗಳ ತರುವಾಯ ಅವರು ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.

  ಪವನ್ ಕಲ್ಯಾಣ್ ಪತ್ನಿಯಾಗಿ ನಟನೆ

  ಪವನ್ ಕಲ್ಯಾಣ್ ಪತ್ನಿಯಾಗಿ ನಟನೆ

  ಈ ನಡುವೆ ಪವನ್ ಕಲ್ಯಾಣ್ ನಟಿಸುತ್ತಿರುವ ಸಿನಿಮಾ ಒಂದರಲ್ಲಿ ಸಾಯಿ ಪಲ್ಲವಿ, ಪವನ್ ಪತ್ನಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಮಲಯಾಳಂ ನ ಅಯ್ಯಪ್ಪನುಂ ಕೋಶಿಯುಂ ಸಿನಿಮಾದ ರೀಮೇಕ್‌ ಆಗಿರುವ ಈ ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ಸಹ ನಟಿಸುತ್ತಿದ್ದಾರೆ.

  Australia ದಲ್ಲೂ ಶುರುವಾಯ್ತು Master ಹವಾ | Filmibeat Kannada
  ಲವ್ ಸ್ಟೋರಿ ಸಿನಿಮಾ ಬಿಡುಗಡೆಗೆ ರೆಡಿ

  ಲವ್ ಸ್ಟೋರಿ ಸಿನಿಮಾ ಬಿಡುಗಡೆಗೆ ರೆಡಿ

  ಇನ್ನುಳಿದಂತೆ ನಟಿ ಸಾಯಿ ಪಲ್ಲವಿ ನಟಿಸಿ ಶೇಖರ್ ಕಮ್ಮುಲ ನಿರ್ದೇಶಿಸಿರುವ 'ಲವ್ ಸ್ಟೋರಿ' ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಈ ನಡುವೆ ರಾಣಾ ದಗ್ಗುಬಾಟಿ ಜೊತೆಗೆ ನಟಿಸಿರುವ 'ವಿರಾಟ ಪರ್ವಂ' ಸಹ ಬಿಡುಗಡೆ ಗೆ ತಯಾರಾಗುತ್ತಿದೆ. ನಾನಿ ಜೊತೆಗೆ ಶ್ಯಾಂ ಸಿಂಗ್ ರಾಯ್ ಸಿನಿಮಾ ಈಗಷ್ಟೆ ಸೆಟ್ಟೇರಿದೆ.

  English summary
  Sai Pallavi may act in Allu Arjun's Pushpa movie. Sai Pallavi will seen as Allu Arjun's sister in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X