ಬರಿಗಾಲಲ್ಲಿ ಪ್ರಿಯಕರನ ಜೊತೆ ಸಾಯಿ ಪಲ್ಲವಿ ಪರಾರಿ: 'ಲವ್‌ಸ್ಟೋರಿ'

ನಟಿ ಸಾಯಿ ಪಲ್ಲವಿಗೆ ತಮ್ಮದೇ ಆದ ದೊಡ್ಡ ಅಭಿಮಾನಿ ವರ್ಗವಿದೆ. ಆಕೆಯ ಸಿನಿಮಾಗಳಿಗಾಗಿ ಜನ ಕಾಯುತ್ತಾರೆ. ಸಾಯಿ ಪಲ್ಲವಿ ನಟಿಸಿರುವ 'ಲವ್‌ಸ್ಟೋರಿ' ಸಿನಿಮಾದ ಟೀಸರ್ ಪ್ರಸ್ತುತ ಬಿಡುಗಡೆ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.

ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ನಟಿಸಿರುವ 'ಲವ್ ಸ್ಟೋರಿ' ಸಿನಿಮಾವನ್ನು ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶಿಸಿದ್ದಾರೆ. ಸುಂದರ-ಸರಳ ಪ್ರೇಮಕತೆಯಾದ 'ಲವ್ ಸ್ಟೋರಿ' ಸಿನಿಮಾದ ಟೀಸರ್ ಸಹ ಅಷ್ಟೇ ಸುಂದರ ಹಾಗೂ ಸರಳವಾಗಿದೆ.

ಜೀವನದಲ್ಲಿ ಭರವಸೆ ಕಳೆದುಕೊಂಡ ಸಾಯಿ ಪಲ್ಲವಿ, ಉತ್ಸಾಹ-ಭರವಸೆ ಬಿಟ್ಟು ಇನ್ನೇನೂ ಇಲ್ಲದ ಹುಡುಗ ನಾಗಚೈತನ್ಯ ನಡುವಿನ ಪ್ರೇಮಕತೆ ಹಾಗೂ ಆ ನಂತರ ಇಬ್ಬರೂ ಒಂದಾಗುವ ಕತೆಯೇ ಲವ್‌ ಸ್ಟೋರಿ ಎಂದು.

 Sai Pallavi-Nag Chaithanyas Love Story Movie Teaser Released

ಟೀಸರ್‌ನಲ್ಲಿ ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಬರಿಗಾಲಿನಲ್ಲಿ ಓಡಿಹೋಗುತ್ತಿರುವ ದೃಶ್ಯವಿದೆ. ಸಿನಿಮಾದಲ್ಲಿ ಆಕ್ಷನ್ ದೃಶ್ಯಗಳೂ ಇರಲಿವೆಯೇ ಎಂಬ ಅನುಮಾನವನ್ನು ಈ ದೃಶ್ಯ ಹುಟ್ಟುಹಾಕಿದೆ. ಶೇಖರ್ ಕಮ್ಮುಲ ಸಿನಿಮಾದಲ್ಲಿ ಆಕ್ಷನ್ ದೃಶ್ಯಗಳು ಸಾಮಾನ್ಯವಾಗಿ ಇರುವುದಿಲ್ಲ.

ಶೇಖರ್ ಕಮ್ಮುಲ ಜೊತೆಗೆ ಸಾಯಿ ಪಲ್ಲವಿಗೆ ಇದು ಎರಡನೇ ಸಿನಿಮಾ ಈ ಮೊದಲು 'ಫಿದಾ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು ಸಾಯಿ ಪಲ್ಲವಿ. ಆ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿತ್ತು. 'ಲವ್‌ಸ್ಟೋರಿ' ಸಿನಿಮಾ ಸಹ ಸೂಪರ್ ಹಿಟ್ ಆಗುವ ಸಾಧ್ಯತೆ ಇದೆ.

ಲವ್‌ಸ್ಟೋರಿ ಸಿನಿಮಾವನ್ನು ಖರೀದಿಸಲು ಸಾಕಷ್ಟು ಒಟಿಟಿಗಳು ಪ್ರಯತ್ನ ನಡೆಸಿದವಾದರೂ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡಲು ಪಟ್ಟು ಹಿಡಿದಿತ್ತು ಚಿತ್ರತಂಡ. ಅಂತೆಯೇ ಈಗ ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆ ಮಾಡಲಾಗುತ್ತಿದ್ದು, ಜನವರಿ 14 ರಂದು ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.

More from Filmibeat

English summary
Sai Pallavi-Nag Chaithanya's Telugu movie Love Story teased released. Movie directed by Shekhar Kammula.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X