Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪೊಲೀಸರ ಮೇಲೆ ಗುಂಡು ಹಾರಿಸಿದ ಸಾಯಿ ಪಲ್ಲವಿ! 'ಯುದ್ಧದಲ್ಲಿ ಅರಳಿದ ಪ್ರೇಮಕತೆ'
ದಕ್ಷಿಣ ಭಾರತದ ಅತ್ಯುತ್ತಮ ಸಿನಿಮಾ ನಟಿಯರಲ್ಲಿ ಸಾಯಿ ಪಲ್ಲವಿ ಒಬ್ಬರು. ಅಂದ, ನಟನೆ, ನೃತ್ಯ, ವ್ಯಕ್ತಿತ್ವ ಎಲ್ಲದರಲ್ಲೂ ಸಾಯಿ ಪಲ್ಲವಿ ಅತ್ಯುತ್ತಮ.
ಸ್ಟಾರ್ ನಟರಿಗೆ ಇರುವಂತೆಯೇ ಪ್ರತ್ಯೇಕ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ ಸಾಯಿ ಪಲ್ಲವಿ. ತನ್ನ ನಟನೆ, ನೃತ್ಯ ಹಾಗೂ ಒಂದಕ್ಕಿಂತಲೂ ಒಂದು ಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದಿದ್ದಾರೆ.
ಸಾಯಿ
ಪಲ್ಲವಿ
ಅಭಿಮಾನಿಗಳಿಗೆ
ಇಲ್ಲಿದೆ
ಸಿಹಿ
ಸುದ್ದಿ
'ಗ್ಲಾಮರ್' ಮೆಚ್ಚಿಕೊಂಡ ನಟಿಯಲ್ಲದ ಸಾಯಿ ಪಲ್ಲವಿ, ಇತರ ಸಮಕಾಲೀನ ನಟಿಯರಂತೆ ವರ್ಷಕ್ಕೆ ನಾಲ್ಕೈದು ಸಿನಿಮಾಗಳನ್ನು ಮಾಡುವ ಬದಲಿಗೆ, ಅಳೆದು-ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ನಟಿಸುತ್ತಿದ್ದಾರೆ. ರೀಮೇಕ್‌ನಲ್ಲಿ ನಟಿಸದ, ನಾಯಕಿ ಪಾತ್ರಕ್ಕೆ ಪ್ರಾತಿನಿಧ್ಯ ಇರುವ ಪಾತ್ರಗಳನ್ನಷ್ಟೆ ಆಯ್ಕೆ ಮಾಡಿಕೊಳ್ಳುತ್ತಿರುವ ಸಾಯಿ ಪಲ್ಲವಿ ನಟನೆಯ ಮತ್ತೊಂದು ಹೊಸ ಸಿನಿಮಾ 'ವಿರಾಟ ಪರ್ವಂ' ಕೆಲವೇ ದಿನಗಳಲ್ಲಿ ತೆರೆಗೆ ಬರಲಿದ್ದು, ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.

'ವಿರಾಟ ಪರ್ವಂ' ಟ್ರೈಲರ್ ಬಿಡುಗಡೆ
ಸಾಯಿ ಪಲ್ಲವಿ, ರಾಣಾ ದಗ್ಗುಬಾಟಿ, ಪ್ರಿಯಾಮಣಿ ನಟಿಸಿರುವ 'ವಿರಾಟ ಪರ್ವಂ' ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಟ್ರೈಲರ್ಗೆ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. 'ವಿರಾಟ ಪವಂ' ಸಿನಿಮಾವು ನಕ್ಸಲೈಟ್ ಕತೆ ಹೊಂದಿರುವ ಸಿನಿಮಾ ಆಗಿದ್ದು, ಹಳ್ಳಿ ಹುಡುಗಿ ಹಾಗೂ ನಕ್ಸಲೈಟ್ ಎರಡು ಶೇಡ್‌ನ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಟ್ರೇಲರ್, ಸಾಯಿ ಪಲ್ಲವಿಯ ಪಾತ್ರವನ್ನೇ ಕೇಂದ್ರೀಕರಿಸಲಾಗಿತ್ತು, ಸಾಯಿ ಪಲ್ಲವಿ ಮತ್ತೊಮ್ಮೆ ಅದ್ಭುತವಾಗಿ ನಟಿಸಿರುವುದು ಟ್ರೇಲರ್‌ನಿಂದಲೇ ಗೊತ್ತಾಗುತ್ತಿದೆ.

ಟ್ರೇಲರ್‌ನಲ್ಲಿ ಅಡಕವಾಗಿವೆ ಹಲವು ವಿಷಯ
ಹಳ್ಳಿ ಯುವತಿಯೊಬ್ಬಾಕೆ, ನಕ್ಸಲ್ ಸಾಹಿತ್ಯ ಓದಿ ಅದನ್ನು ಬರೆದ ವ್ಯಕ್ತಿಯ ಮೇಲೆ ಪ್ರೀತಿ ಬೆಳೆಸಿಕೊಂಡು ಆತನನ್ನು ಹುಡುಕುತ್ತಾ ಹೊರಡುತ್ತಾಳೆ. ಹೀಗೆ ನಕ್ಸಲ್ ನಾಯಕ ಅರಣ್ಯ (ರಾಣಾ ದಗ್ಗುಬಾಟಿ)ಯನ್ನು ಸೇರುವ ಸಾಯಿ ಪಲ್ಲವಿ, ಆತನಿಗಾಗಿ ನಕ್ಸಲ್ ಆಗುತ್ತಾಳೆ. ಹೋರಾಟಗಳಲ್ಲಿ ಭಾಗವಹಿಸುತ್ತಾಳೆ. ನಕ್ಸಲ್ ನಾಯಕ ರಾಣಾನನ್ನು ಹಿಂಸೆಯಿಂದ ಅಹಿಂಸೆಯೆಡೆಗೆ, ಶಾಂತಿಯೆಡೆಗೆ ತರುತ್ತಾಳಾ ನಾಯಕಿ ಎಂಬ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಜೊತೆಗೆ ನಕ್ಸಲ್ ವಾದ, ಸರ್ಕಾರ ಹಾಗೂ ನಕ್ಸಲರ ತಿಕ್ಕಾಟದ ಬಗ್ಗೆಯೂ ಸಿನಿಮಾ ಬೆಳಕು ಚೆಲ್ಲುತ್ತಿದೆ.

ಎರಡು ಶೇಡ್‌ನಲ್ಲಿ ಸಾಯಿ ಪಲ್ಲವಿ
ಟ್ರೈಲರ್‌ನ ಆರಂಭದಲ್ಲಿ ಮನೆ ಮುಂದೆ ರಂಗೋಲಿ ಹಾಕುವ, ದೇವಸ್ಥಾನದಲ್ಲಿ ಭಕ್ತಿಯಿಂದ ಕೈಮುಗಿವ ಅಮಾಯಕ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಯಿ ಪಲ್ಲವಿ, ಟ್ರೇಲರ್‌ನ ಅಂತ್ಯದ ವೇಳೆಗೆ ಕೈಯಲ್ಲಿ ಬಂದೂಕು ಹಿಡಿದು ಪೊಲೀಸರ ಗುಂಡು ಹಾರಿಸುವ, ಬಾಂಬ್ ಎಸೆಯುವ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ನಲ್ಲಿ ರಾಣಾ ದಗ್ಗುಬಾಟಿ ಪಾತ್ರವೂ ಗಮನ ಸೆಳೆಯುತ್ತಿದೆ. ಕನ್ನಡತಿ, ನಟಿ ಪ್ರಿಯಾಮಣಿಯೂ ಫವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜೂನ್ 17ಕ್ಕೆ ಬಿಡುಗಡೆ ಆಗಲಿರುವ 'ವಿರಾಟ ಪರ್ವಂ'
'ವಿರಾಟ ಪರ್ವಂ' ಸಿನಿಮಾವನ್ನು ವೇಣು ಉದ್ದುಗುಲ ನಿರ್ದೇಶನ ಮಾಡಿದ್ದು ನಿರ್ಮಾಣ ಮಾಡಿರುವುದು ಡಿ ಸುರೇಶ್ ಬಾಬು ಮತ್ತು ಸುಧಾಕರ್ ಚೆರುಕುರಿ. ಸಿನಿಮಾಕ್ಕೆ ಸಂಗೀತ ನೀಡಿರುವುದು ಸುರೇಶ್ ಬೊಬ್ಬಿಲಿ. ಸಿನಿಮಾವು ಜೂನ್ 17 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಇದರ ಹೊರತಾಗಿ ಹಲವು ಸಿನಿಮಾಗಳಲ್ಲಿ ಸಾಯಿ ಪಲ್ಲವಿ ಬ್ಯುಸಿಯಾಗಿದ್ದಾರೆ. ಕಮಲ್ ಹಾಸನ್ ನಿರ್ಮಿಸಿ, ಕತೆ ಬರೆದಿರುವ ಹೊಸ ಸಿನಿಮಾದಲ್ಲಿ ಶಿವಕಾರ್ತಿಕೇಯ ಎದುರು ನಾಯಕಿಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. 'ಗಾರ್ಗಿ' ಹೆಸರಿನ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕನ್ನಡದಲ್ಲಿಯೂ ಏಕಕಾಲಕ್ಕೆ ತೆರೆಗೆ ಬರಲಿದೆ. ಜೊತೆಗೆ ತಮಿಳಿನ ಸ್ಟಾರ್ ನಟರೊಬ್ಬರ ಸಿನಿಮಾದಲ್ಲಿಯೂ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.